ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿರುವ ಇಸ್ಪೀಟ್ ಅಡ್ಡಾಗಳ ಮೇಲೆ ಪೊಲೀಸರು ದಾಳಿ ಮಾಡಿದಾಗ 9 ಮಂದಿ ಬಂಧನವಾದರೆ, ಉಳಿದವರು ಓಡಿಹೋಗಿದ್ದಾರೆ.
ಗ್ರಾಮೀಣ ಠಾಣೆಗೆ ಸಿಪಿಐ ಆಗಿ ಬಂದಿರುವ ರಂಗಪ್ಪ ದೊಡ್ಡಮನಿ ಇಂಥ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದು, ತಾಲೂಕಿನ ಸಮೀಪದ ಉಡುಮಕಲ್ ಸೋಲಾರ್ ಪ್ಲಾಂಟ್ ಹತ್ತಿರ ಇಸ್ಪೀಟ್ ಆಡುವವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ
ಪೊಲೀಸರ ದಾಳಿ ವೇಳೆ, ಇಸ್ಪೀಟ್ ಆಡಲು ಸ್ಥಳಕ್ಕೆ ತೆಗೆದುಕೊಂಡು ಬಂದಿದ್ದ 26 ಬೈಕ್‌ಗಳನ್ನು ಗ್ರಾಮೀಣ ಪೊಲೀಸರು ಜಪ್ತಿ ಮಾಡಿದ್ದು, 8 ಜನರ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ. 26 ದ್ವಿಚಕ್ರ ವಾಹನಗಳು ಮತ್ತು ₹39,000 ನಗದನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಾವೇರಿ | ರಂಜಾನ್ ಹಬ್ಬಕ್ಕೆ ಶುಭಕೋರಿದ ಶಾಸಕ ಶ್ರೀನಿವಾಸ ಮಾನೆ
ದಾಳಿ ಮಾಡಿದ ತಂಡದಲ್ಲಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ರಂಗಪ್ಪ ದೊಡ್ಡಮನಿ, ಸಿಬ್ಬಂದಿಗಳಾದ ಬಸವರಾಜ ಚಿನ್ನೂರು, ರಾಘವೇಂದ್ರ, ಮಂಜುನಾಥ, ಬಸವ ರಾಜ ಮುರುಡಿ, ಮುತ್ತುರಾಜ, ಡ್ರೈವರ್ ಅಮರೇಶ ಸೇರಿದಂತೆ ಇತರರು ಇದ್ದರು.