ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಸದಸ್ಯರು ಪ್ರತಿಭಟನೆ ನಡೆಸಿದರು.
ಕೊಪ್ಪಳ ನಗರದ ಸರ್ಕಾರಿ ಬಾಲಕರ ಕಾಲೇಜ್ ನಿಂದ ಅಶೋಕ್ ಸರ್ಕಲ್ ವರೆಗೆ ಕ್ಯಾಂಡಲ್ ಮಾರ್ಚ್ ಹಮ್ಮಿಕೊಳ್ಳಲಾಗಿತ್ತು.
ನಿನ್ನೆ ನಡೆದ ಪಹಲ್ಗಾಮ್ ಭಯೋತ್ಪಾದಕರ ದಾಳಿಯಿಂದ ಸುಮಾರು 28 ಜನ ಮೃತಪಟ್ಟಿರುತ್ತಾರೆ. ಆ ಪೈಕಿ ಕರ್ನಾಟಕ 3 ರಿಂದ 4 ಮಂದಿ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ದೇಶದ ಒಳಾಂಗಣ ಭದ್ರತೆ ಕುರಿತು ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ ಪ್ರತಿಭಟನಾಕಾರರು, ದಾಳಿಯ ಬೆನ್ನಲ್ಲೇ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಜಿಲ್ಲಾ ಅಧ್ಯಕ್ಷ ಸೈ ಸಲೀಮ್ ಖಾದ್ರಿ ಮಾತನಾಡಿ, “ದೇಶವಿರೋಧಿ ಚಟುವಟಿಕೆ ಮಾಡುವವರನ್ನು ದೇಶದ ಜನತೆ ಸಹಿಸುವುದಿಲ್ಲ. ಅಮಾಯಕರ ರಕ್ತಪಾತ ಮಾಡುವ ಭಯೋತ್ಪಾದಕರ ವಿರುದ್ಧ ನಾವು ಎಲ್ಲರೂ ಒಂದಾಗಬೇಕು. ದೇಶದ ಶಾಂತಿಯನ್ನು ಕದಡುವ, ಕಿಡಿಗೇಡಿತನ ಹಾಗೂ ಅಶಾಂತಿ ಹರಡುವ ಭಯೋತ್ಪಾದಕರ ವಿರುದ್ಧ ಕೇಂದ್ರ ಸರಕಾರ ತೀವ್ರವಾಗಿ ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದರು.
“ಧರ್ಮ, ಜಾತಿ, ಭಾಷೆ ಎನ್ನುವ ಎಲ್ಲ ಭೇದಗಳನ್ನು ಮರೆತು, ದೇಶದ ಏಕತೆ ಮತ್ತು ಸಹೋದರತೆಯನ್ನು ಕಾಪಾಡಬೇಕು. ಹಿಂಸೆಯನ್ನು ಪ್ರಚೋದಿಸುವ ಮತ್ತು ದೇಶದ ವಿರುದ್ಧ ವಿಷ ಹರಡುವವರ ವಿರುದ್ಧ ದೇಶದ ಪ್ರತಿಯೊಬ್ಬನೂ ಏಕಮತದಿಂದ ನಿಲ್ಲಬೇಕು” ಆಗ್ರಹಿಸಿದರು.
ಇದನ್ನೂ ಓದಿ: ಕೊಪ್ಪಳ | ಕೊಪ್ಪಳ-ಬೆಂಗಳೂರು ನಡುವೆ ನಾನ್ ಎಸಿ ಸ್ಲೀಪರ್ ಬಸ್; ಸೇವೆಗೆ ಹಸಿರು ನಿಶಾನೆ
ರಾಜೀವ್ ಉರ್ ರಹೇಮಾನ್, ನಿಜಾಮುದ್ದೀನ್ ಮೊಳೆಕೋಪ್ಪ, ಮೊಹಮ್ಮದ್ ಸಾಧಿಕ್, ಅರ್ಶದ್ ಶೈಖ್, ಫಾರೂಕ್ ಅತ್ತಾರ್, ರಿಜ್ವಾನ್ ಪೀರ್ಜಾದೆ, ಹಾಗೂ ಎಲ್ಲಾ ಕಾರ್ಯಕರ್ತರು ಮತ್ತು ಬೆಂಬಲಿಗರು ಕ್ಯಾಂಡಲ್ ಮಾರ್ಚ್‌ನಲ್ಲಿ ಪಾಲ್ಗೊಂಡಿದ್ದರು.