ಕೊಪ್ಪಳ ಜಿಲ್ಲೆಯ ಗಂಗಾವತಿಯ ಐತಿಹಾಸಿಕ ಕಿಷ್ಕಿಂಧಾ ಅಂಜನಾದ್ರಿ ಬೆಟ್ಟ ಬಳಿಯ ಅಂಗಡಿಗಳಲ್ಲಿ ಸೋಮವಾರ ಬೆಳಿಗ್ಗೆ ಸರಣಿ ಕಳ್ಳತನ ನಡೆದಿದೆ.
ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಇರುವಸಾಲು ಅಂಗಡಿಗಳಲ್ಲಿ ಕಳ್ಳವು ನಡೆದಿದ್ದು, ಅಂಗಡಿಗಳಲ್ಲಿ ಇದ್ದ ಹಣ, ವಸ್ತುಗಳನ್ನು ಕದ್ದೊಯ್ದು ಕಳ್ಳರು ತಮ್ಮ ಚಾಣಾಕ್ಷತನ ತೋರಿ ಪರಾರಿಯಾಗಿದ್ದಾರೆ.ವಿಷಯ ತಿಳಿದು ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ.
ಐತಿಹಾಸಿಕ ಪ್ರದೇಶ ಕಿಷ್ಕಂಧಾ ಅಂಜನಾದ್ರಿ ಬೆಟ್ಟದಲ್ಲಿ ಸುತ್ತಲು ಇರುವ ಐತಿಹಾಸಿಕ ಸ್ಥಳಗಳಿಗೆ ದೇಶ, ವಿದೇಶದಿಂದ ಪ್ರವಾಸಿಗರು ಹಾಗೂ ಭಕ್ತರು ನೂರಾರು ಸಂಖ್ಯೆಯಲ್ಲಿ ಬರುತ್ತಾರೆ. ಇಲ್ಲಿ ಪ್ರವಾಸಿಗರ ಬ್ಯಾಗ್, ಮೊಬೈಲ್ ಫೋನ್ ಸೇರಿದಂತೆ ಮಹಿಳೆಯರ ಕೊರಳಲ್ಲಿರುವ ಸರ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ.
ಪೋಲೀಸ್‌ರ ಭದ್ರತೆಯ ಕೊರತೆಯಿಂದ ಕಳ್ಳತನ ಪ್ರಕರಣ ನಿರಂತರವಾಗಿ ನಡೆಯುತ್ತಿವೆ. ಬೆಟ್ಟಕ್ಕೆ ಬರುವ ಭಕ್ತರ ವಸ್ತುಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಹಾಗೂ ಭಕ್ತರು ಆರೋಪಿಸುತ್ತಿದ್ದಾರೆ.
ಇದನ್ನೂ ಓದಿ : ಕಲಬುರಗಿ | ಜಿಲ್ಲಾ ನ್ಯಾಯಾಲಯಲ್ಲಿ ಹಿರಿಯ ನ್ಯಾಯಾಧೀಶರಿಗೆ ಹೃದಯಾಘಾತ: ಸಾವು