ಆಟವಾಡುತ್ತಿದ್ದ ಇಬ್ಬರು ಬಾಲಕರ ಮೇಲೆ ಬೀದಿನಾಯಿಗಳು ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ಕೊಪ್ಪಳ ನಗರದಲ್ಲಿ ನಡೆದಿದೆ. ನಗರದ ಹಸನ್ ರಸ್ತೆಯ ಆಶಾದ್ (3) ಹಾಗೂ ಸಾದಿಕ್ (4) 5 ಬೀದಿ ನಾಯಿಗಳ ಗುಂಪಿನ ದಾಳಿಗೊಳಗಾದ ಬಾಲಕರು.
ದಾಳಿಗೆ ತುತ್ತಾಗಿ ತೀವ್ರವಾಗಿ ಗಾಯಗೊಂಡ ಬಾಲಕರು ಸರ್ಕಾರಿ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡಡಯುತ್ತಿದ್ದಾರೆ. ನಗರದಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನ ಹೆಚ್ಚಾಗುತ್ತಿವೆ. ಎಂದು ಸ್ಥಳೀಯರು ಅರೋಪಿಸುತ್ತಿದ್ದಾರೆ.
ಎಸ್‌ಡಿಪಿಐ ಪಕ್ಷದ ಸಂಚಾಲಕ ಸಲೀಮ್ ಖಾದ್ರಿ ಮಾತನಾಡಿ, “ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಮನೆಯ ಮುಂದೆ ಆಡುವ ಮಕ್ಕಳ ಮೇಲೆ ನಾಯಿಗಳು ದಾಳಿ ಮಾಡುತ್ತಿವೆ. ಇಷ್ಟಾದರೂ ನಗರಸಭೆ ಎಚ್ಚೆತ್ತುಕೊಳ್ಳುತ್ತಿಲ್ಲ. ಹಲವಾರು ಸಲ ಈ ಕುರಿತು ದೂರು ಕೊಟ್ಟರೂ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಿಲ್ಲ. ನಗರದ ಜನ ನಾಯಿಗಳ ದಾಳಿಯಿಂದ ಆತಂಕಕ್ಕೊಳಗಾಗಿದ್ದಾರೆ” ಎಂದರು.
ಇದನ್ನೂ ಓದಿ: ಕೊಪ್ಪಳ | ವಿವಿಧ ಬೇಡಿಕೆ ಈಡೇರಿಕೆಗೆ ಕಟ್ಟಡ ಕಾರ್ಮಿಕರ ಹೋರಾಟ ಸಮಿತಿ ಆಗ್ರಹ