ಸ್ಕೂಟಿ ಮೇಲೆ ಹೊರಟಿದ್ದ ಶಿಕ್ಷಕಿ ಮೈಮೇಲೆ ವಿದ್ಯುತ್ ವೈರ್ ಬಿದ್ದ ಪರಿಣಾಮ ಶಿಕ್ಷಕಿ ಸ್ಥಳದಲ್ಲೇ ಸಾವಿಗೀಡಾದ ಘಟನೆ ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿ ನಿನ್ನೆ(ಏ.03) ನಡೆದಿದೆ.
ಮೃತ ಶಿಕ್ಷಕಿಯನ್ನು ಜಂಗಮರ ಕಲ್ಗುಡಿ ಗ್ರಾಮದ ಹರಿತಾ ಶ್ರೀನಿವಾಸ (26) ಎಂದು ಗುರುತಿಸಲಾಗಿದೆ.
ಅವರು ವಿದ್ಯಾನಗರದಲ್ಲಿರುವ ಶ್ರೀ ಗೊಟ್ಟಿಪಾಟಿ ವೆಂಕಟರತ್ನಂ ಮೆಮೋರಿಯಲ್ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ನಿತ್ಯದಂತೆ ಶಾಲೆಗೆ, ಮಾವ ಪೂರ್ಣಚಂದ್ರ ರಾವ್ ಅವರೊಂದಿಗೆ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಅವಗಢ ಸಂಭವಿಸಿದೆ. ವಿದ್ಯುತ್ ತಂತಿಯು ಸಂಪೂರ್ಣವಾಗಿ ಶಿಕ್ಷಕಿಯ ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪೂರ್ಣಚಂದ್ರ ರಾವ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃತಳಿಗೆ ಒಂದು ಗಂಡು ಮಗು ಮತ್ತು ಅವಳಿ ಹೆಣ್ಣು ಮಕ್ಕಳಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ಕೊಪ್ಪಳ | ಅಪರಾಧಿಗಳ ದಂಡಿಸುವಾಗ ಜಾತಿ, ಧರ್ಮ ಲೆಕ್ಕಿಸಲ್ಲ: ಡಿವೈಎಸ್‌ಪಿ ಸಿದ್ದಲಿಂಗಪ್ಪಗೌಡ