ಕೊಪ್ಪಳ ತಾಲೂಕಿನ ಬಂಡಿಹರ್ಲಾಪುರ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಚೇರಿ ಮತ್ತು ನೀರು ಬಳಕೆದಾರರ ಸಂಘದ ನೂತನ ಕಟ್ಟಡವನ್ನು ಶಾಸಕ ಕೆ ರಾಘವೇಂದ್ರ ಹಿಟ್ನಾಳ ಹಾಗೂ ಸಂಸದ ಕೆ ರಾಜಶೇಖರ ಹಿಟ್ನಾಳ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, “ಸಹಕಾರ ಸಂಘದ ಮೂಲಕ ಹಲವು ವ್ಯಾಪಾರಸ್ಥರಿಗೆ, ನೂರಾರು ರೈತರಿಗೆ ಕೋಟ್ಯಂತರ ರೂಪಾಯಿ ಕೃಷಿ ಸಾಲ ನೀಡಲಾಗುತ್ತಿದ್ದು, ಸಹಕಾರಿ ಸಂಘದಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಿದೆ. ಆರ್ಥಿಕವಾಗಿ ಸೋತವರಿಗೆ ಸಹಕಾರ ಸಂಘ ನೆರವಾಗಿದೆ. ಎರಡೂ ಸರ್ಕಾರಗಳು ಸಹಕಾರ ಸಂಘಗಳಿಗೆ ಆದ್ಯತೆ ನೀಡುತ್ತಿವೆ. ಸರ್ಕಾರದ ಕಟ್ಟಡಗಳನ್ನು ನಮ್ಮ ಕಟ್ಟಡವೆಂದು ಉಳಿಸಬೇಕು. ಸಹಕಾರ ಸಂಘಗಳು ನಮ್ಮ ಬ್ಯಾಂಕುಗಳಿಗೆ ಹಾಗೂ ರೈತರಿಗೆ ಬೆನ್ನೆಲುಬಾಗಿ ನಿಂತಿವೆ” ಎಂದರು.
ಹನುಮಂತಪ್ಪ ಬನ್ನಿಕೊಪ್ಪ ಮಾತನಾಡಿ, “ಬಂಡಿಹರ್ಲಾಪುರ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಸಹಕಾರ ಸಂಘವು ಆರಂಭವಾಯಿತು. ಹಲವು ಮುಖಂಡರ ಸಹಕಾರದಿಂದ ಇಂದು ಉತ್ತಮ ಕಟ್ಟಡ ನಿರ್ಮಾಣವಾಗಿದೆ. ಈ ಮೊದಲು 199 ಷೇರುದಾರರು ಇದ್ದು, ಈಗ 665 ಷೇರುದಾರರು ಇದ್ದಾರೆ. ಮೊದಲು ಬಂಡವಾಳ 2 ಲಕ್ಷ 90 ಸಾವಿರದಿಂದ, 3 ಕೋಟಿ 8 ಲಕ್ಷ ಸಾವಿರ ಪ್ರಗತಿಯತ್ತ ಸಾಗುತ್ತಿದೆ. ಸಹಕಾರಿ ಶಿಕ್ಷಣ ಕ್ಷೇತ್ರದ ಜತೆಗೆ ಹಲವು ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಗತಿಯತ್ತ ಸಾಗುತ್ತಿದೆ” ಎಂದು ತಿಳಿಸಿದರು.
ಸಹಕಾರಿ ಧುರೀಣ ರಮೇಶ್ ವೈದ್ಯ ಮಾತನಾಡಿ, “ಜಿಲ್ಲಾ, ತಾಲೂಕು ಸಹಕಾರ ಸಂಘಗಳಲ್ಲಿ ಮೊದಲಿಗೆ ಕುರ್ಚಿ ಇರಲಿಲ್ಲ, ಈಗ ಸಮೃದ್ಧಿಯಾಗಿವೆ. ದೇಶಕ್ಕೆ ಎರಡು ಪವಿತ್ರ ಕ್ಷೇತ್ರಗಳು ಶಿಕ್ಷಣ ಮತ್ತು ಸಹಕಾರ ಸಂಘಕ್ಕೆ ಜೀವ ಕೊಟ್ಟಾಗ ಮಾತ್ರ ಗ್ರಾಮ ಅಭಿವೃದ್ಧಿ ಸಾಧ್ಯ. ಈಗ ಜಿಲ್ಲಾ ಸಹಕಾರಿ ಬ್ಯಾಂಕ್‌ನಲ್ಲಿ ₹1300 ಕೋಟಿ ಪ್ರಗತಿಯಲ್ಲಿದೆ. ಸಹಕಾರಿ ಸಂಘದಲ್ಲಿ ರಾಜಕೀಯ ಇರಬಾರದು” ಎಂದು ನಿರ್ದೇಶಕರಲ್ಲಿ ಮನವರಿಕೆ ಮಾಡಿದರು.
ಇದನ್ನೂ ಓದಿದ್ದೀರಾ? ಬಳ್ಳಾರಿ | ಪಾಲಿಕೆ ಅವ್ಯವಸ್ಥೆ ವಿರುದ್ಧ ನಾಗರಿಕ ಸಮಿತಿ ಪ್ರತಿಭಟನೆ
ಸಹಕಾರಿ ಸಂಘದ ಅಧ್ಯಕ್ಷ ಕೆ ಚಂದ್ರಶೇಖರ್, ಕೆ ವೆಂಕಟಯ್ಯ, ಕಾಷಯ್ಯ ಸ್ವಾಮಿ ಗವಿಮಠ, ಮಾಜಿ ಎಪಿಎಂಸಿ ಅಧ್ಯಕ್ಷ ವಿಶ್ವನಾಥ ರಾಜು, ಗ್ರಾಮ ಪಂಚಾಯಿತಿ ಸದಸ್ಯ ಚನ್ನಕೃಷ್ಣ ಗೊಲ್ಲರ, ರಬೇಕಾ ಬಾಬು, ವಿ ಎಸ್ ಗಿರೆಡ್ಡಿ, ಶರಣಪ್ಪ ರಾಟಿ, ಉಪನಿಬಂಧಕ ಪ್ರಕಾಶ್ ಸಜ್ಜನ್, ಸುದರ್ಶನ್ ಶರ್ಮಾ, ಶಾಖಾ ವ್ಯವಸ್ಥಾಪಕ ತೇಜಪ್ಪ ಎಲ್ ದೊರೆಸ್ವಾಮಿ, ಯಂಕಪ್ಪ ಹೊಸಳ್ಳಿ , ಸಂಗಮೇಶ ದೆಸಾಯಿ, ವಿಠ್ಠಲ್ ನಾವ್ಡೆ, ನಿರ್ದೇಶಕರಾದ ಎಂ ಮೋಹನ್, ಶಂಕರ್ ಶ್ಯಾಸಲ್, ಯಂಕಪ್ಪ ಜಿ, ರಾಮಮೂರ್ತಿ, ಸಣ್ಣ ಚೆನ್ನರೆಡ್ಡಿ, ಮೀರ್ ಅಹ್ಮದ್ ಖಾನ್, ಕನಕಪ್ಪ ಮುಂಡರಗಿ, ಅಬ್ಬಲೆಗೆಪ್ಪ, ಚಿನ್ನತಾಂಬಿ, ಭಾಗ್ಯಲಕ್ಷ್ಮಿ, ರೇಣುಕಮ್ಮ, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಬಸವನಗೌಡ ಪಾಟೀಲ್, ಸಿಬ್ಬಂದಿ ರಾಘವೇಂದ್ರ ಇಲ್ಲೂರ ಸೇರಿದಂತೆ ಇತರರು ಇದ್ದರು.