ಸಾರ್ವಜನಿಕರಿಗೆ, ಜಾನುವಾರುಗಳಿಗೆ ಇದ್ದ ಬಸಾಪುರ ಕೆರೆಯನ್ನು ಬಲ್ಡೋಟಾ ಕಂಪನಿ ಆಕ್ರಮಿಸಿಕೊಂಡಿದ್ದು, ಇದನ್ನು ಸಾರ್ವಜನಿಕಗೆ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಜಿಲ್ಲಾ ಕೇಂದ್ರದ ಸಮೀಪದಲ್ಲಿರುವ ಎಮ್‌ಎಸ್‌ಪಿಎಲ್ ಉಕ್ಕಿನ ಕಾರ್ಖಾನೆ ವಿಸ್ತರಣೆ ಚುರುಕಾಗಿ ನಡೆದಿದ್ದು, 44.35 ಕೆರೆಯ ಜಾಗ ಅನಧಿಕೃತವಾಗಿ ಒತ್ತುವರಿ ಮಾಡಲಾಗಿದೆ. ನ್ಯಾಯಾಲಯದ ಆದೇಶದಂತೆ ಕೆರೆಯನ್ನು ಜಾನುವಾರುಗಳಿಗೆ ಮುಕ್ತಗೊಳಿಸುವಂತೆ ಜಾನುವಾರುಗಳನ್ನು ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿ ಶಾಂತಿಯುತ ಪ್ರತಿಭಟನೆ ನಡೆಸಿದರು.
ಬಳಿಕ ಕಾರ್ಖಾನೆ ಜಾಗದ ಬಳಿ ತೆರಳಿ ಅಲ್ಲಿ ಮೇಕೆ ಹಾಗೂ ಆಡುಗಳನ್ನು ನುಗ್ಗಿಸಿ ಕೆರೆ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದರು. ಆಗ ಕಾರ್ಖಾನೆಯ ಭದ್ರತಾ ಸಿಬ್ಬಂದಿ ಹಾಗೂ ಜಾನುವಾರುಗಳ ಮಾಲೀಕರ ನಡುವೆ ಮಾತಿನ ಚಕಮಕಿ ನಡೆಯಿತು.
ಇದನ್ನೂ ಓದಿ: ಕೊಪ್ಪಳ | ವಿದ್ಯಾರ್ಥಿ ಅಂಕಪಟ್ಟಿ, ಟಿಸಿ ಕೊಡದ ವಾಸವಿ ಶಾಲೆ ಮುಖ್ಯಶಿಕ್ಷಕ ಫಕ್ಕೀರಪ್ಪ ಎಮ್ಮಿನವರ: ಪಾಲಕರ ಪರದಾಟ
ಈದಿನ.ಕಾಮ್ನೊಂದಿಗೆ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, “ಬಸಾಪುರ ಕೆರೆ ಸಾರ್ವಜನಿಕರದ್ದು, ಆ ಕೆರೆಯ ನೀರು ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ಮುಕ್ತಗೊಳಿಸಬೇಕು. ಗ್ರಾಮದ ಹತ್ತಿರ ಸರ್ವೇ ಸಂಖ್ಯೆ 143ರಲ್ಲಿ 44.35 ಕೆರೆಯ ಜಾಗ ಬಲ್ಡೋಟಾ ಕಂಪನಿ ಅತಿಕ್ರಮಿಸಿಕೊಂಡು ಸುತ್ತಲೂ ಅತಿಕ್ರಮವಾಗಿ ಕಾಂಪೌಂಡ್ ನಿರ್ಮಿಸಿಕೊಂಡಿದೆ. ಈ ಕೂಡಲೇ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಕೆರೆಯನ್ನು ಸಾರ್ವಜನಿಕ ಮುಕ್ತಗೊಳಿಸಲು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.