ಕೇಂದ್ರ ಕವಿ-ಕಾವ್ಯ ಸಾಹಿತ್ಯ ಸಮ್ಮೇಳನವನ್ನು ಈ ಬಾರಿ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಕವಿ-ಕಾವ್ಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಸಿಂಧನೂರು ಕಾಲೇಜು ಪ್ರಾಚಾರ್ಯ, ಸಾಹಿತಿ, ಅನುವಾದಕ, ವಿದ್ವಾಂಸರಾದ ಡಾ. ದೇವೇಂದ್ರಪ್ಪ ಜಾಜಿ ಅವರನ್ನು ಆಯ್ಕೆ ಮಾಡಲಾಗಿದ್ದು, ಗಂಗಾವತಿಯ ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೊಟ್ರೇಶ್. ಎಸ್. ಉಪ್ಪಾರ ಮಾತನಾಡಿ, ಕೇಂದ್ರ ಕವಿ-ಕಾವ್ಯ ಸಾಹಿತ್ಯ ಸಮ್ಮೇಳನವನ್ನು ಈ ಬಾರಿ ಗಂಗಾವತಿಯಲ್ಲಿ ನಡೆಸಬೇಕೆಂದು ಹಿಂದಿನ ವರ್ಷ ವಿಜಯಪುರ ಮೂರನೇ ಕವಿ-ಕಾವ್ಯ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಈ ಬಾರಿ ನಮ್ಮ ಪಟ್ಟಣದಲ್ಲಿ ಜನವರಿ 19ರಂದು ಹಮ್ಮಿಕೊಳ್ಳಲಾಗಿದೆ. ಈ ಸಮ್ಮೇಳನದ ಅಧ್ಯಕ್ಷರನ್ನಾಗಿ ವಿದ್ವಾಂಸ, ಸಾಹಿತಿ, ಅನುವಾದಕ, ಎಂ.ಎಂ.ಕಲ್ಬುರ್ಗಿ ಅವರ ವಿದ್ಯಾರ್ಥಿ ಡಾ. ದೇವೇಂದ್ರಪ್ಪ ಜಾಜಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ’ ಎಂದರು.
‘ನಾಡಿನ ಖ್ಯಾತ ವಿದ್ವಾಂಸ, ಬವಾನುಯಾಯಿ, ಶರಣ ಚಿಂತಕಾರಾದ ರಮ್ಜಾನ್ ದರ್ಗಾ ಅವರು ಸಮ್ಮೇಳನ ಉದ್ಘಾಟನೆ ಮಾಡುವರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹುಟ್ಟಿಕೊಂಡಿದ್ದು, ಎಲೆಮರೆಯ ಸಾಧಕರನ್ನ ಗುರುತಿಸುವ ಹಿನ್ನೆಲೆಯಲ್ಲಿ ಸಮ-ಸಮಾಜಸ ಕನಸ್ಸನ್ನು ಹೊತ್ತು, ನಮ್ಮ ಸಾಹಿತ್ಯ ವೇದಿಕೆ ರಾಜ್ಯ, ಹೊರರಾಜ್ಯಗಳಲ್ಲೂ ಕೆಲಸ ಮಾಡುತ್ತಿದೆ, ಸಮ್ಮೇಳನವನ್ನು ನಡೆಸುತ್ತಿದೆ. ಬಸವಾದಿ ಶರಣರ, ಕುವೆಂಪು ಅವರ ವೈಚಾರಿಕ ಸಿದ್ಧಾಂತ, ನಿಲುವು, ತತ್ವಗಳಡಿಯಲ್ಲಿ ರಾಜ್ಯಾದ್ಯಂತ ಕೆಲಸ ಮಾಡುತ್ತಿದೆ. ಕವಿ-ಕಾವ್ಯ ಸಾಹಿತ್ಯ ಸಮ್ಮೇಳನದಲ್ಲಿ ಶರಣರ ಸಾಹಿತ್ಯ ವಿಚಾರ ಗೋಷ್ಠಿ, ವಿಚಾರ ಸಂಕಿರಣ ಹೀಗೆ ನಾನಾ ರೀತಿಯ ವೈಚಾರಿಕತೆ, ವೈಜ್ಞಾನಿಕ, ಸಂವಿಧಾನಿಕ ಚಿಂತನೆಯಲ್ಲಿ ನಾನಾ ರೀತಿಯ ಗೋಷ್ಠಿ ನಡೆಸಿಕೊಂಡು ಬಂದಿದೆ’ ಎಂದು ಸಮ್ಮೇಳನದ ಅಧ್ಯಕ್ಷರನ್ನು ಸನ್ಮಾನಿಸಿ ಹೇಳಿದರು.
ಸಮ್ಮೇಳನದ ಅದ್ಯಕ್ಷ ಡಾ. ದೇವೇಂದ್ರಪ್ಪ ಜಾಜಿ ಮಾತನಾಡಿ, ಕವಿ-ಕಾವ್ಯ ಸಾಹಿತ್ಯ ಸಮ್ಮೇಳನ ಗಂಗಾವತಿಯಲ್ಲಿಯೇ ನಡೆಸಲು ತೀರ್ಮಾನಿಸಿರುವುದು ಬಹಳ ಹೆಮ್ಮೆಯ ವಿಷಯ. ಈ ಬಾರಿಯ ನಾಲ್ಕನೇ ಕೇಂದ್ರ ಕವಿ-ಕಾವ್ಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನನ್ನಾಗಿ ನನ್ನನ್ನು ಆಯ್ಕೆ ಮಾಡಿದ ಎಲ್ಲಾ ಕವಿ ಮನಸ್ಸುಗಳಿಗೂ ಹೃದಯ ತುಂಬಿದ ಧನ್ಯವಾದಗಳು ಎಂದರು.
ಇದನ್ನು ಓದಿದ್ದೀರಾ? ಕಾರವಾರ | ಲಾರಿ ಪಲ್ಟಿ : ಇಬ್ಬರ ದುರ್ಮರಣ
ಕಾಂಗ್ರೆಸ್ ವಕ್ತಾರೆ, ಕವಿ ಶೈಲಜಾ ಹಿರೇಮಠ ಮಾತನಾಡಿ, ‘ವೃತ್ತಿ, ವೈಯಕ್ತಿಕ ಬದುಕಿನ ಜೊತೆಗೆ ಸಾಹಿತಿಕವಾಗಿ ಕನ್ನಡವಾಗಿ ಕೆಲಸ ಮಾಡಿದ ದೇವೇದ್ರಪ್ಪ ಜಾಜಿ ಈ ವರ್ಷದ ಸಮ್ಮೇಳದ ಅಧ್ಯಕ್ಷರನ್ನಾಗಿ ಮಾಡಿರುವುದು ಹೆಮ್ಮೆ ಪಡುವ ವಿಚಾರ. ಇವರು ಅನುವಾದಕರಾಗಿ, ಎಂ.ಎಂ.ಕಲ್ಬುರ್ಗಿಯವರ ಜೊತೆ ಅತ್ಯಂತ ಆಪ್ತವಾಗಿ, ಬರಹಗಾರರಾಗಿ ಗುರುತಿಸಿಕೊಂಡವರು” ಎಂದು ಸಂತಸ ವಿಷಯ’ ಹರ್ಷ ವ್ಯಕ್ತಪಡಿಸಿದರು.
ಡಾ. ಹಸೀನಾ ಶಿವಮೊಗ್ಗ, ರಮೇಶ ಗಬ್ಬೂರ, ಲತಾಮಣಿ ತುರುವೇಕೆರೆ, ಸರಣಪ್ಪ ತಳ್ಳಿ, ಮಹೇಶ. ಕೆ.ಎಮ್, ನಾಗಭೂಷಣ್, ಡಾ. ಪಿ ದಿವಾಕರ ನಾರಾಯಣ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.
ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ.