ಕಾಮುಕ ಪ್ರೇಮಿಯೊಬ್ಬ ತನ್ನ ಪ್ರೇಯಸಿ ಮೇಲೆಯೇ ಅತ್ಯಾಚಾರ ಎಸಗಿ ಪರಾರಿಯಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನಲ್ಲಿ ನಡೆದಿದೆ.
ವಿವಾಹಕ್ಕೂ ಮುನ್ನವೇ ಲೈಂಗಿಕ ಸಂಬಂಧಕ್ಕೆ ಯುವತಿ ಒಪ್ಪದಿದ್ದರೂ, ಮದುವೆಯಾಗುತ್ತೇನೆಂದು ಆರೋಪಿ ಯುವಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿಲಾಗಿದೆ. ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಗಾವತಿ ತಾಲೂಕಿನ ನಿವಾಸಿ ರವಿರಾಜ್ ಅತ್ಯಾಚಾರ ಎಸಗಿರುವ ಕಾಮುಕ ಆರೋಪಿ. ಆತ ತನ್ನ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ. ಆತನನ್ನು ಕೂಡಲೇ ಬಂಧಿಸಿ ಎಂದು ಸಂತ್ರಸ್ತೆ ಕಾರಟಗಿ ಪೊಲೀಸ್ ಠಾಣೆ ಎದುರು ಧರಣಿ ಕುಳಿತಿದ್ದಾಳೆ.
2020ರಲ್ಲಿ ಸಂತ್ರಸ್ತ ಯುವತಿಗೂ ರವಿರಾಜ್‌ಗೂ ಪರಿಚಯವಾಗಿತ್ತು. 2021ರಿಂದ ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಅವರ ಪ್ರೀತಿಗೆ ಎರಡೂ ಕುಟುಂಬದಿಂದಲೂ ವಿರೋಧವಿತ್ತು. ಅದಾಗ್ಯೂ, ರವಿರಾಜ್ ಸಂತ್ರಸ್ತೆ ಮತ್ತು ತನ್ನ ಕುಟುಂಬದವರನ್ನು ಮದುಗೆವೆ ಒಪ್ಪಿಸಿದ್ದ. ಅಲ್ಲದೆ, 2021ರ ಮಾರ್ಚ್ 17ರಂದು ಆಕೆಗೆ ಮನೆಗೆ ಹೋಗಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಕೃತ್ಯವನ್ನು ವಿಡಿಯೋ ಮಾಡಿಕೊಂಡು, ಬ್ಲಾಕ್‌ಮೇಲ್ ಮಾಡಿ, ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಯುವತಿ ಈಗ ಗರ್ಭಿಣಿಯಾಗಿದ್ದು, ಆಕೆಗೆ ಗರ್ಭಪಾತವನ್ನು ಮಾಡಿಸಿದ್ದಾನೆ. ಬಳಿಕ, ಯುವತಿ ವಿವಾಹವಾಗುವಂತೆ ಒತ್ತಡ ಹಾಕಿದರೂ, ಆರೋಪಿ ಮದುವೆ ಒಪ್ಪಿಲ್ಲ. ಯುವತಿ ಎರಡೂ ಕುಟುಂಬದವರಿಗೆ ತನ್ನ ಮೇಲಾದ ಕೃತ್ಯದ ಬಗ್ಗೆ ವಿವರಿಸಿದ್ದು, ಎರಡೂ ಕುಟುಂಬದವರೂ ಮದುವೆ ಮಾಡಿಕೊಳ್ಳುವಂತೆ ಆರೋಪಿ ರವಿರಾಜ್‌ಗೆ ಒತ್ತಾಯಿಸಿದ್ದಾರೆ. ಆದರೂ, ಆತ ವಿವಾಹಕ್ಕೆ ನಿರಾಕರಿಸಿದ್ದು, ಯುವತಿ ಆತ್ಮಹತ್ಯೆಗೂ ಯತ್ನಿಸಿದ್ದಾಳೆ. ಇದೀಗ, ಪೊಲೀಸ್ ಠಾಣೆಗೆ ದೂರು ದಾಖಲಿಸಿ, ಆರೋಪಿ ಬಂಧನಕ್ಕೆ ಒತ್ಥಾಯಿಸಿ ಧರಣಿ ಕುಳಿತಿದ್ದಾಳೆ ಎಂದು ವರದಿಯಾಗಿದೆ.