ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದ ರೈತರು ಬೆಳೆದಿರುವ ಭತ್ತದ ಬೆಳೆಯಲ್ಲಿ ಕೊಳೆರೋಗ ಹೆಚ್ಚಾಗಿ ಕಂಡುಬಂದಿದ್ದು, ಅನ್ನದಾತರ ಮುಖದಲ್ಲಿ ಆತಂಕ ಹೆಚ್ಚಾಗಿದೆ. ಬೆಳೆಗೆ ‘ಗಾಲ್ ಮಿಡಿತʼ ಎಂಬ ಹುಳದಿಂದ ಈ ರೋಗ ಹರಡುತ್ತಿದ್ದು, ಮಲೆನಾಡಿನಲ್ಲಿ ಕಾಣಸಿಗುವ ಈ ರೋಗ ಇತ್ತೀಚೆಗೆ ಕೊಪ್ಪಳ ಭಾಗಕ್ಕೂ ಆವರಿಸಿಕೊಂಡಿದೆ.
ಕೊಪ್ಪಳ ಕೃಷಿ ಇಲಾಖೆ ಅಧಿಕಾರಿ ರುದ್ರೇಶ್ ಅವರ ನೇತೃತ್ವದ ತಂಡವೊಂದು ಮುಸ್ಟೂರು, ಹೆಬ್ಬಾಳ, ಡಣಾಪುರ, ಶ್ರೀರಾಮನಗರ, ಗುಂಡೂರು ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿ ಕೊಳೆರೋಗಕ್ಕೆ ತುತ್ತಾಗಿದ್ದ ಭತ್ತದ ಗದ್ದೆಗಳನ್ನು ಪರಿಶೀಲಿಸಿತು.

“ಗಂಗಾವತಿ ಕರ್ನಾಟಕದ ಭತ್ತದ ಕಣಜ. ಭತ್ತ ಇಲ್ಲಿನ ರೈತರ ಮುಖ್ಯ ಬೆಳೆ. ನೆಟ್ಟ ನಾಟಿಗೆ ಕೊಳೆರೋಗ ಆವರಿಸಿಕೊಂಡಿದ್ದು, ರೈತನ ಗೋಳು ಕೇಳುವವರಾರು? ಕೈಗೆ ಬರುವ ಫಸಲು ಒಕ್ಕಲಿಗೆ ಬರದಿದ್ದರೆ ಅನ್ನದಾತನಿಗೆ ವಿಷವೇ ಆಹಾರವಾಗಿಡುತ್ತದೆ” ಎಂದು ರೈತರು ಆತಂಕ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಗಂಗಾವತಿ | ಕಸಾಪ ತಾಲೂಕು ಘಟಕದ ನೂತನ ಅಧ್ಯಕ್ಷ-ಪದಾಧಿಕಾರಿಗಳ ಪದಗ್ರಹಣ
ಗಂಗಾವತಿ ಕೃಷಿ ವಿಶ್ವವಿದ್ಯಾಲಯ ಮುಖ್ಯಸ್ಥ ಡಾ. ರಾಘವೇಂದ್ರ, ಆರ್ ಎಸ್ ಕೆ ಮುಖ್ಯಸ್ಥ ಅಶೋಕ್ ವಿಜಯವತಿ, ಕೃಷಿ ಅಧಿಕಾರಿ ಬಿಎಟಿಸಿ ಬೀರಪ್ಪ, ಸಂಜೀವಿನಿ ಸಿಬ್ಬಂದಿಗಳು ಭತ್ತದ ಬೆಳೆ ಪರಿಶೀಲನೆಯಲ್ಲಿ ಭಾಗಿಯಾಗಿದ್ದರು.
