ರಾಜ್ಯದಲ್ಲಿ ಬರ ಎದುರಾಗಿದ್ದು, ರೈತರು ಬೆಳೆದ ಬೆಳೆ ನೆಲ ಕಚ್ಚಿದೆ. ನಷ್ಟ ಉಂಟಾಗಿದೆ. ಪರಿಣಾಮ, ಕೃಷಿಗಾಗಿ ಸಾಲ ಮಾಡಿದ್ದ ರೈತ, ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಕುಕನೂರು ತಾಲೂಕಿನ ಬೆಣಕಲ್ ಗ್ರಾಮದ ರೈತ ಮಹೇಶ ಕುದ್ರಿಕಟಿಗಿ ಮೃತ ದುರ್ದೈವಿ. ಅವರು ಖಾಸಗಿ ಬ್ಯಾಂಕ್ ಸೇರಿದಂತೆ ವಿವಿಧೆಡೆ ಸಾಲ ಮಾಡಿದ್ದರು ಎಂದು ಹೇಳಲಾಗಿದೆ.
ಗ್ರಾಮದ ರೈತರು ಕೃಷಿಗೆ ಮನೆಯನ್ನೇ ಆಧರಿಸಿದ್ದಾರೆ. ಆದರೆ, ಈ ಬಾರಿ ಮಳೆಯಾಗದೆ ಅಂತರ್ಜಲವೂ ಕುಸಿದಿದೆ. ಹೀಗಾಗಿ, ನಿರೀಕ್ಷಿಸಿದ್ದಷ್ಟು ಬೆಳೆ ಬಂದಿರಲಿಲ್ಲ. ಮಾಡಿದ್ದ ಸಾಲವನ್ನು ತೀರಿಸಲೂ ಆಗಿರಲಿಲ್ಲ. ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದ ರೈತ ಮಹೇಶ್ ಮನನೊಂದು ಆತ್ಮಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಆದಾಗ್ಯೂ, ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.