ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದಂಹತ ‘ಭಯೋತ್ಪಾದಕ’ ಸಂಘಟನೆ ಮತ್ತೊಂದಿಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದ ಆರೋಪದಲ್ಲಿ ಯುವಕನೊಬ್ಬನ ವಿರುದ್ಧ ದೂರು ದಾಖಲಾಗಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗಂಗಾವತಿಯಲ್ಲಿ ನವೆಂಬರ್ 24ರಂದು ದೃಷ್ಠಿದೋಷವುಳ್ಳ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ಗುಂಪೊಂದು ಹಲ್ಲೆ ನಡೆಸಿತ್ತು. ಆತನ ಗಡ್ಡವನ್ನು ಸುಟ್ಟು ವಿಕೃತಿ ಮೆರೆದಿತ್ತು. ಆ ಹಲ್ಲೆಯನ್ನು ಖಂಡಿಸಿ, ಗಂಗಾವತಿ ನಿವಾಸಿ ಅಮೀರ್ ಅಮ್ಮು ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ತನ್ನ ಪೋಸ್ಟ್‌ನಲ್ಲಿ ಆರ್‌ಎಸ್‌ಎಸ್ ಅನ್ನು ‘ಭಯೋತ್ಪಾದಕ’ ಸಂಘಟನೆ ಎಂದು ಕರೆದಿದ್ದಾರೆ.
“ನೀವು ವಯಸ್ಸಾದ ಕುರುಡನನ್ನು ದರೋಡೆ ಮಾಡಿದ್ದೀರಿ. ಆತನಿಗೆ ‘ಜೈ ಶ್ರೀರಾಮ್’ ಘೋಷಣೆ ಕೂಗುವಂತೆ ಒತ್ತಾಯಿಸಿದ್ದೀರಿ. ಆರ್‌ಎಸ್ಎಸ್ ಕಾರ್ಯಕರ್ತರಿಗೆ ಗೌರವವಿಲ್ಲವೇ? ನಿಮಗಿಂತ ಕೆಟ್ಟ ಭಯೋತ್ಪಾದಕ ಸಂಘಟನೆ ಇನ್ನೊಂದಿಲ್ಲ” ಎಂದು ಸಾಮಾಜಿಕ ಜಾಲತಾಣದಲ್ಲಿ ಅಮೀರ್ ಆಕ್ರೋಶ ವ್ಯಕ್ತಪಡಿಸಿದ್ದರು.
ಆತನ ಪೋಸ್ಟ್ ವಿರುದ್ಧ ಸಂಘಪರಿವಾದ ಕಾರ್ಯಕರ್ತರು ದೂರು ದಾಖಲಿಸಿದ್ದಾರೆ.