ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೆ ಜಯಂತಿಯ ಪ್ರಯುಕ್ತ ಕಾಲ್ನಡಿಗೆ ಜಾಥಾವನ್ನು ಕೊಪ್ಪಳ ನಗರದ ಗಾಂಧಿ ವೃತ್ತದಿಂದ ಇಂದಿರಾ ಗಾಂಧಿ ವೃತ್ತದ(ಜುಲೈ ನಗರ) ವರೆಗೆ ನಡೆಸಲಾಯಿತು.
ಗಾಂಧಿ ನಡಿಗೆ ಜಾಥಾ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು,ಅನೇಕ ಮಹಿಳೆಯರು, ಯುವಕರು ,ಹಿರಿಯ ಮುಖಂಡರು ಭಾಗವಹಿಸಿ ಜಾಥಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿಗಳು ಹಾಗೂ ಅಲ್ಪ ಸಂಖ್ಯಾತರ ಉಪಾಧ್ಯಕ್ಷರು ಸೈಯದ್ ಅಲಿ ಮಕoದರ್ ಖಾನ್. ಮಹಾತ್ಮ ಗಾಂಧೀಜಿ ಅವರು ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಮುನ್ನುಡಿ ಬರೆದರು. ಅದರಂತೆ ಅವರ ಅನೇಕ ಉಪವಾಸ ಸತ್ಯಾಗ್ರಹಗಳು,ಸಂದೇಶಗಳು ಇನ್ನು ಅನೇಕ ವಿಚಾರಗಳಿಂದ ಅವರು ನಮ್ಮೊಟ್ಟಿಗಿದ್ದಾರೆ. ಅವರ ವಿಚಾರಗಳನ್ನು ಎಲ್ಲರೂ ಪಾಲಿಸಬೇಕೆಂದು ಕರೆ ಕೊಟ್ಟರು.
ನಂತರ ಮಾತನಾಡಿದ ಕಾಂಗ್ರೆಸ್ ಪಕ್ಷದ ವಕ್ತಾರರು ಶೈಲಜಾ ಹಿರೇಮಠ ಗಂಗಾವತಿ, ಮಹಾತ್ಮ ಗಾಂಧೀಜಿ ಅವರು ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಮುಖರು. ಅವರು ಹಾಕಿಕೊಟ್ಟ ಅಹಿಂಸಾ ತತ್ವ, ಶಾಂತಿ ಸಹೃದತೆಯಿಂದ ಇವರ ಆಶಯಗಳನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕೂಡ ಇಂದೇ. ಒಂದೇ ದಿನ ಇಬ್ಬರ ಮಹಿನಿಯರ ಆಶಯಗಳನ್ನು ಮುನ್ನಡೆಸಬೇಕು ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಾಮಿದ ಮನಿಯಾರ್ ಮಾತನಾಡಿ, ಗಾಂಧೀಜಿಯವರ ಅಹಿಂಸಾ ತತ್ವ ಮಾರ್ಗ, ಅವರ ಕಂಡ ರಾಮರಾಜ್ಯದ ಕನಸನ್ನು ನನಸಾಗಿಸಲು ಎಲ್ಲರೂ ಕೈಜೋಡಿಸಬೇಕು ಎಂದರು.
ಇದನ್ನು ಓದಿದ್ದೀರಾ? ರಾಯಚೂರು | ಅ.5ರಂದು ಬೆಂಗಳೂರಿನಲ್ಲಿ ವಸತಿ ಹಕ್ಕು ವಂಚಿತರ ಪ್ರಾತಿನಿಧ್ಯ ಸಮಾವೇಶ: ಮಾರೆಪ್ಪ ಹರವಿ
ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡ ಶರಣಯ್ಯ ಗೌಡರ್ ಮಾಲಿ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮಲ್ಲೇಶ್ ದೇವರಮನಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಮ್, ಗಂಗಾವತಿ ಯುವ ಕಾಂಗ್ರೆಸ್ ಮುಖಂಡ ಮಹಮದ್ ಆಸಿಫ್, ದಲಿತ ಹಿರಿಯ ಮುಖಂಡರಾದ ಬೋಜಪ್ಪ, ಬಸವರಾಜ್,ರವಿ ಬಾಬು ಆರತಿ, ಭೀಮಣ್ಣ ಕರಿಮೊತಿ, ಹುಸೇನಪ್ಪ ಕಲ್ಮನಿ, ಯಲ್ಲಮ್ಮ, ಈರಮ್ಮ, ಪ್ರಭಾವತಿ, ಹಾಗೂ ಕಾಂಗ್ರೆಸ್ ನ ಅನೇಕ ಕಾರ್ಯಕರ್ತರು, ಯುವಕರು ಹಾಜರಿದ್ದರು.
ವರದಿ : ಮಂಜುನಾಥ
