ಕೊಪ್ಪಳದ ಗಂಗಾವತಿಯಲ್ಲಿ ವೃತ್ತಿಪರ ಹಾಸ್ಟೆಲ್‌ಗಳನ್ನು ನಿರ್ಮಿಸಬೇಕೆಂದು ಒತ್ತಾಯಿಸಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಆಗ್ರಹಿಸಿತು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಡಾ. ಶೃತಿ ಎಂ ಅವರ ಮೂಲಕ ಇಲಾಖಾ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ/ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಗಂಗಾವತಿಯಲ್ಲಿ ವೃತ್ತಿಪರ ಹಾಸ್ಟೆಲ್‌ಗಳ ಅವಶ್ಯವಿದೆ. ಗಂಗಾವತಿಯಲ್ಲಿ ಸಾಕಷ್ಟು ನರ್ಸಿಂಗ್ ಕಾಲೇಜ್, ಐಟಿಐ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಹಾಗೂ ಕಾನೂನು ಕಾಲೇಜ್‌ಗಳು ಇದ್ದು, ಕನಕಗಿರಿ, ಕಾರಟಗಿ, ಗಂಗಾವತಿ, ಕೊಪ್ಪಳದ ಸುತ್ತಮುತ್ತಲಿನ ಹಳ್ಳಿಗಳಿಂದ ಸಾವಿರಾರು ವಿದ್ಯಾರ್ಥಿಗಳು ಗಂಗಾವತಿಗೆ ವಿದ್ಯಾಭ್ಯಾಸಕ್ಕೆ ಬರುತ್ತಿದ್ದಾರೆ. ಅವರೆಲ್ಲರಿಗೂ ಅನುಕೂಲವಾಗುವಂತೆ ವೃತ್ತಿಪರ ಹಾಸ್ಟೆಲ್‌ಗಳನ್ನು ನಿರ್ಮಾಣ ಮಾಡಿ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವಾಗಬೇಕು ಎಂದು ಮನವಿ ಮಾಡಲಾಯಿತು.
ಈ ಸುದ್ದಿ ಓದಿದ್ದೀರಾ?: ಕೊಪ್ಪಳ | ಬಗರ್ ಹುಕುಂ ಭೂಮಂಜೂರಾತಿಗೆ ತೊಡಕಾಗಿರುವ ಕಾನೂನು ತಿದ್ದುಪಡಿ ಮಾಡಿ: ಭೂಮಿ ವಂಚಿತರ ಆಗ್ರಹ
ಈ ವೇಳೆ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ. ದುರ್ಗೆಶ್ ಬರಗೂರು, ಯಮುನಾ ಚೇಳೂರು, ಶ್ರೀದೇವಿ ಬರಗೂರು, ಪರಶುರಾಮ ತಾವರಗೇರಾ, ಮಹೇಶ ಕೆವಿಎಸ್, ರೇವತಿ, ಯಮನೂರು ಇಳಿಗೆನೂರು, ಮಾರುತಿ, ಅಜಯ್ ಸೇರಿ ಮತ್ತಿತರರು ಇದ್ದರು.
