ಮಣಿಪುರ ಘಟನೆಯ ಆರೋಪಿಗಳನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಕುಷ್ಟಗಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ತಹಶೀಲ್ದಾರ್‌ಗೆ ಹಕ್ಕೊತ್ತಾಯ ಪತ್ರ ಸಲ್ಲಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಜೆ.ಎಸ್ ಶರಣು, “ನಮ್ಮ ಭಾರತ ದೇಶ ಬುದ್ಧನ ನೆಲವಾಗಿದೆ . ಶಾಂತಿ ಪ್ರಿಯವಾದ ನೆಲದಲ್ಲಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ, ಅತ್ಯಾಚಾರ ಎಸಗಿದ ಕೃತ್ಯ ನಡೆದಿರುವುದು ದುರಂತ” ಎಂದರು.
“ಹೆಣ್ಣು ಮಕಳ್ಳನ್ನು ರಕ್ಷಣೆ ಮಾಡುತ್ತೇವೆ. ಗೌರವಿಸುತ್ತೇವೆ ಅಂತ ಆರ್‌ಎಸ್‌ಎಸ್, ಬಿಜೆಪಿಗರು ಹೇಳುತ್ತಾರೆ. ಆದರೆ, ಮಣಿಪುರದ ಘಟನೆ ವಿರುದ್ಧ ಯಾಕೆ ಬೀದಿಗಿಳಿದು ಪ್ರತಿಭಟಿಸುತ್ತಿಲ್ಲ” ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಮಹೇಬೂಬ್ ಖುಷ್ಬೂ , ನಗರಸಭೆ ಸದಸ್ಯ ವಸಂತ್ ಹಾಗೂ ಹಲವಾರು ಕಾರ್ಯಕರ್ತರು ಇದ್ದರು.