ಕೊಪ್ಪಳ | ಫೆ.22ರಂದು ಜಿಲ್ಲಾ ಬಚಾವೋ ಆಂದೋಲನ ಸಮಿತಿಯಿಂದ ವಿಚಾರ ಸಂಕೀರ್ಣ

Date:

Advertisements

ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿಯಿಂದ ನಾಳೆ (ಫೆ.22) ನಗರದ ಸಾಹಿತ್ಯ ಭವನದಲ್ಲಿ ವಿಚಾರ ಸಂಕೀರ್ಣ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟದೂರ ಹೇಳಿದರು.

“ಕಾರ್ಯಕ್ರಮಕ್ಕೆ ಪರಿಸರವಾದಿ, ವಿಜ್ಞಾನಿ ನಾಗೇಶ್ ಹೆಗಡೆ, ಪರಿಸರ ತಜ್ಞ ಹೇಮಂತ್ ರಾಮಡಗಿ, ಕೈಗಾರಿಕೆಗಳಿಂದ ತೊಂದರೆ ಅನುಭವಿಸುತ್ತಿರುವ ಸಾಮಾನ್ಯ ಜನಗಳು ಹಾಗೂ ಪರಿಸರ ಪ್ರೇಮಿಗಳು ಭಾಗವಹಿಸಲಿದ್ದಾರೆ” ಎಂದು ಮಾಹಿತಿ ನೀಡಿದರು.

“ಗಿಣಿಗೇರಿ ಸುತ್ತಮುತ್ತಲಿನ ಬೃಹತ್ ಕೈಗಾರಿಕೆಗಳಿಂದ ಈಗಾಗಲೇ ಪರಿಸರ ನಾಶ, ರೈತರ ಜಮೀನು ಒತ್ತುವರಿ, ಜನಗಳ ಆರೋಗ್ಯ, ಕೃಷಿ ಬೆಳೆ ಸರ್ವನಾಶವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಈಗ ಮತ್ತೊಂದು ಬೃಹತ್ ಕೈಗಾರಿಕೆ ಮಾಡುವುದರಿಂದ ಇರುವ ಅಲ್ಪಸ್ವಲ್ಪ ಭೂಮಿ ಕಳೆದುಕೊಳ್ಳುವುದರ ಜೊತೆಗೆ ಪರಿಸರ ನಾಶಕ್ಕೆ ನಾಂದಿ ಹಾಡಿದಂತಾಗುತ್ತದೆ. ಇದನ್ನು ಸಮಿತಿಯು ಉಗ್ರವಾಗಿ ಖಂಡಿಸುತ್ತದೆ. ಜನ ವಸತಿ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಬಾರದು. ಅಣು ವಿದ್ಯುತ್ ಸ್ಥಾವರ ಕೂಡ ಜನವಸತಿ ಪ್ರದೇಶಗಳಲ್ಲಿ ನಿರ್ಮಿಸಬಾರದು. ಈ ಎಲ್ಲ ವಿಷಯಗಳ ಕುರಿತು ಜನಗಳಿಗೆ ತಜ್ಞರಿಂದ, ಪರಿಸರವಾದಿಗಳಿಂದ, ಹೋರಾಟಗಾರರಿಂದ ಅರಿವು ಮೂಡಿಸಲು ಮತ್ತು ಬಾಧಿತ ಜನಗಳ ಅಳಲು ತೋಡಿಕೊಳ್ಳಲು ಜಿಲ್ಲಾ ಮಟ್ಟದಲ್ಲಿ ಈ ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕೊಪ್ಪಳದ ಪರಿಸರ ಪ್ರೇಮಿಗಳು ಹಾಗೂ ಪ್ರಜ್ಞಾವಂತ ನಾಗರಿಕರು ಭಾಗವಹಿಸಬೇಕು” ಎಂದು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

Advertisements

ಲಡಾಯಿ ಪ್ರಕಾಶಕ ಮತ್ತು ಸಾಮಾಜಿಕ ಹೋರಾಟಗಾರ ಬಸವರಾಜ್ ಸೂಳಿಬಾವಿ ಮಾತನಾಡಿ, “ನಾವು ಕೈಗಾರಿಕಾ ವಿರೋಧಿಗಳಲ್ಲ. ಆದರೆ ಒಂದೇ ಪ್ರದೇಶದಲ್ಲಿ ಬೃಹತ್ ಕೈಗಾರಿಕೆಗಳನ್ನು ನಿರ್ಮಿಸಿ ಜನರಿಗೆ ಮಾರಕವಾಗಿರುವ ವಿಷ ಅನಿಲ ಮತ್ತು ಧೂಳು ಇನ್ನಿತರ ಹಾನಿಕಾರಕ ತೊಂದರೆ ಉಂಟು ಮಾಡುತ್ತಿರುವ ಕಾರ್ಖಾನೆಗಳ ಮತ್ತು ಅಧಿಕಾರಿಗಳ ವಿರುದ್ಧ ನಮ್ಮ ಹೋರಾಟ. ಕೂಡಲೇ ೀ ಕುರಿತು ಕ್ರಮ ಕೈಗೊಳ್ಳಬೇಕೆಂದು” ಹೇಳಿದರು.

ಡಿ.ಎಚ್ ಪೂಜಾರ್ ಅವರು ಮಾತನಾಡಿ, “ಕೈಗಾರಿಕಾ ಕಾನೂನು ಉಲ್ಲಂಘನೆ ಮಾಡಿ ರೈತರ ಮತ್ತು ಕಾರ್ಮಿಕರ ಎಲ್ಲಾ ಹಕ್ಕುಗಳನ್ನು ದಮನ ಮಾಡಿ ಕಾರ್ಖಾನೆಯ ಮಾಲಿಕರು ಮೆರೆಯುತ್ತಿದ್ದಾರೆ. ರೈತರ ಜಮೀನು ಮತ್ತು ಸಾರ್ವಜನಿಕ ಕೆರೆಗಳನ್ನು ನುಂಗಿ ಕಾನೂನು ವಿರೋಧಿ ನಡೆಯನ್ನು ಬಿಎಸ್‌ಪಿಎಲ್ ಕಂಪನಿ ಮಾಡುತ್ತಿದೆ. ಈ ಕಂಪನಿಯ ನಡೆಯ ವಿರುದ್ಧ ಹಲವಾರು ವರ್ಷಗಳಿಂದ ನಾವು ಹೋರಾಟವನ್ನು ಸಂಘಟಿಸಿದ್ದೇವೆ ಮತ್ತು ಕೋರ್ಟ್ ಮೆಟ್ಟಿಲು ಏರಿದ್ದೇವೆ. ನ್ಯಾಯಕ್ಕಾಗಿ ಮುಂದೆಯೂ ಹೋರಾಡುತ್ತೇವೆ” ಎಂದು ಆರೋಪಿಸಿದರು.

ಈ ಸುದ್ದಿ ಓದಿದ್ದೀರಾ?: ಕೊಪ್ಪಳ | ಫೆ.23 ರಂದು ʼನಿಮ್ಮೊಂದಿಗೆ ನಾವುʼ ಕಲಾವಿದರ ನಡೆ-ಜನಸಾಮನ್ಯರ ಕಡೆ ಕಾರ್ಯಕ್ರಮ

ಈ ವೇಳೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಮುಖಂಡ ಕಾಶಪ್ಪ ಚಲವಾದಿ, ಎಸ್ಎ ಗಫರ್, ಜ್ಯೋತಿ ಗೊಂಡಬಾಳ, ಬಸವರಾಜ್ ಶೀಲವಂತರ್, ಶರಣು ಗಡ್ಡಿ, ಮಹಾಂತೇಶ್ ಕೊತ್ತುಬಾಳ, ಶಿವಪ್ಪ ಹಡಪದ್, ಶರಣು ಶೆಟ್ಟರ್, ಈರಣ್ಣ ತಾಳ ಕನಕಪುರ, ಮಾರುತಿ ಇತರರು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಶಿವಮೊಗ್ಗ | ಮತ್ತೆ ಸದ್ದು ಮಾಡುತ್ತಿದೆ ವಾಹನಗಳ ಕರ್ಕಶ ಸೈಲೆಂಸರ್ ; ಕ್ರಮ ಕೈಗೊಳ್ಳುವರೆ ಟ್ರಾಫಿಕ್ ಪೊಲೀಸ್?

ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ...

ಕೋಲಾರ | ಎಫ್ಆರ್‌ಎಸ್ ನಿಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

Download Eedina App Android / iOS

X