ಕೊಪ್ಪಳ ಜಿಲ್ಲೆ ಗಂಗಾವತಿ ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಅರೆಕಾಲಿಕ ಉಪನ್ಯಾಸಕರು ಸೇವಾಭದ್ರತೆ, ವೇತನ ಹೆಚ್ಚಳ, ನಿಗದಿತ ಅವಧಿಗೆ ವೇತನ ಸೇರಿ ಇತರೆ ಬೇಡಿಕೆಗಳಿಗಾಗಿ ಆಗ್ರಹಿಸಿ ಕಾಲೇಜು ಎದುರು ಪ್ರತಿಭಟನೆ ನಡೆಸಿ ಸಾಂಕೇತಿಕವಾಗಿ ಹಿಂಪಡೆದರು.
ಬೆಳಗಾವಿ ಅಧಿವೇಶನದಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ಅತಿಥಿ ಮತ್ತು ಅರೆಕಾಲಿಕ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ತರಗತಿಗಳು ಬಹಿಷ್ಕರಿಸಿ, ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಾಂತ್ರಿಕ ಶಿಕ್ಷಣ ಇಲಾಖೆಯಡಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಹಲವು ವರ್ಷಗಳ ಹಿಂದೆ ಅರೆಕಾಲಿಕ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಸೂಕ್ತ ಸೌಲಭ್ಯ ಒದಗಿಸದೇ ದುಡಿಸಿಕೊಳ್ಳಲಾಗುತ್ತಿದೆ. ಕೇವಲ 15ಸಾವಿರ ರೂ. ವೇತನಕ್ಕೆ ಕಾಲೇಜಿನಲ್ಲಿ ಬೋಧನೆ ಮಾಡುತ್ತಿದ್ದು, ಈ ವೇತನದಿಂದ ಕುಟುಂಬ ನಿರ್ವಹಣೆ ತುಂಬ ಕಷ್ಟಕರವಾಗಿದೆ. ವೇತನಹೆಚ್ಚಳ, ಸೇವಾಭದ್ರತೆ, ಸೇವೆ ಕಾಯಮಾತಿ ಬಗ್ಗೆ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಕ್ರಮಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ವೇಳೆ ಚೈತ್ರಾ ಗಬ್ಬೂರು, ಸೈಯದ್ ಫರೀದ್ ಇನ್ನಿತರರು ಹಾಜರಿದ್ದರು.
ಬೇಡಿಕೆಗಳು
- ಪ್ರಸ್ತುತ ಪಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ನೀಡುತ್ತಿರುವ ಕಾರ್ಯಭಾರ, ವೇತನ, ಕೃಪಾಂಕ, ಸೇವಾ ಪ್ರಮಾಣ ಪತ್ರ ನೀಡುತ್ತಿರುವ ರೀತಿಯಲ್ಲೇ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಅರೆಕಾಲಿಕ ಉಪನ್ಯಾಸಕರುಗಳಿಗೆ ವಿಸ್ತರಿಸುವುದು.
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಖಾಯಂಗೊಳಿಸಬೇಕು. ಉಪನ್ಯಾಸಕರುಗಳನ್ನು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಅರಕಾಲಿಕ ಉಪನ್ಯಾಸಕರುಗಳಿಗೆ ಪ್ರತಿ ತಿಂಗಳೂ ವೇತನ ನೀಡುವುದು.