ರಾಜ್ಯದಲ್ಲಿ ದೇವದಾಸಿ ಮಹಿಳೆಯರ ಮರುಗಣತಿ ಕ್ರಮಕ್ಕೆ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ ಎಂದು ಗಂಗಾವತಿ ಪಟ್ಟಣದ ದೇವದಾಸಿ ವಿಮೋಚನಾ ಸಂಘದ ಅದ್ಯಕ್ಷೆ ಹುಲಿಗೆಮ್ಮ ಹೇಳಿದ್ದಾರೆ.
“ಕಳೆದ ಎರಡ್ಮೂರು ದಶಕಗಳಿಂದ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯ ಸಮಿತಿಯ ಹಾಗೂ ಮಹಿಳೆಯರ ನಿರಂತರ ಮನವಿ ಮತ್ತು ಒತ್ತಾಯದ ಮೇರೆಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ದೇವದಾಸಿ ಕುಟುಂಬದ ಮಹಿಳೆಯರ ಮರುಗಣತಿಗೆ ಕ್ರಮವಹಿಸಿದೆ. ಇದೊಂದು ಐತಿಹಾಸಿಕ ಕ್ರಮವಾಗಿದ್ದು, ಸರ್ಕಾರದ ನಡೆಯನ್ನು ಸಂಘವು ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | 4ನೇ ಕೇಂದ್ರ ಕವಿ-ಕಾವ್ಯ ಸಾಹಿತ್ಯ ಸಮ್ಮೇಳನ: ಅಧ್ಯಕ್ಷರಾಗಿ ಸಾಹಿತಿ ದೇವೇಂದ್ರಪ್ಪ ಜಾಜಿ ಆಯ್ಕೆ
ಅಂಗನವಾಡಿ ನೌಕರರಿಗೆ ತರಬೇತಿ ನೀಡಿ ಅವರ ಮೂಲಕವೇ ದೇವದಾಸಿ ಕುಟುಂಬದ ಮನೆ ಮನೆಗೆ ತೆರಳಿ ಮರುಗಣತಿ ಮಾಡಲು ಕ್ರಮವಹಿಸಬೇಕು. ದೇವದಾಸಿ ಹಿನ್ನೆಲೆ ಇಲ್ಲದವರೂ ಗಣತಿಯಲ್ಲಿ ಸೇರಿ ಕಳೆದ ಬಾರಿಯಂತೆ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡಬಹುದು. ಹಾಗಾಗಿ ಆ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮರುಗಣತಿಯನ್ನು ನಡೆಸಬೇಕು” ಎಂದು ಮಂಜುನಾಥ ಡಗ್ಗಿ ಗಂಗಾವತಿ ತಹಸೀಲ್ದಾರ್ ಅವರಿಗೆ ಮನವಿ ಮಾಡಿದರು.
ಈ ವೇಳೆ ಹುಲಿಗೆಮ್ಮ, ಮಂಜುನಾಥ ಡಗ್ಗಿ, ಹೊನ್ನಮ್ಮ ಡಣಾಪುರ್, ನಿಂಗಮ್ಮ, ದುರ್ಗಮ್ಮ, ಯಲ್ಲಮ್ಮ, ಯಮನಮ್ಮ ಉಪಸ್ಥಿತರಿದ್ದರು.
