ಕೊಪ್ಪಳ | ಮಧ್ಯಮ ವರ್ಗದ ಮೂಗಿಗೆ ತುಪ್ಪ ಸವರಿದ ಕೇಂದ್ರ ಬಜೆಟ್: ಎಸ್‌ಡಿ‌ಪಿ‌ಐ

Date:

Advertisements

ಈ ಬಾರಿಯ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಮತ್ತೆ ಅನ್ಯಾಯ ಮಾಡಲಾಗಿದೆ. ಮಧ್ಯಮ ವರ್ಗದ ಮೂಗಿಗೆ ತುಪ್ಪ ಸವರಿಕೆ ಕೆಲಸ ಮಾಡಲಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ತೀವ್ರ ಅಸಮಾಧಾನ ಹೊರಹಾಕಿದೆ.

2025-26ನೇ ಸಾಲಿನ ಬಜೆಟ್, ಮೋದಿ ಸರ್ಕಾರ ಕಳೆದ 10ವರ್ಷಗಳಿಂದ ಮಾಡಿಕೊಂಡು ಬರುತ್ತಿರುವಂತೆ ಜನ ದ್ರೋಹಿ ಬಜೆಟ್ ಆಗಿದೆ. ಬಜೆಟ್‌ನಲ್ಲಿ ಎಂದಿನಂತೆ ರಾಜ್ಯಕ್ಕೆ ದ್ರೋಹ ಬಗೆದಿದೆ. ಮಧ್ಯಮ ವರ್ಗಕ್ಕೆ ಆದಾಯ ತೆರಿಗೆಯಲ್ಲಿ ಒಂದಷ್ಟು ರಿಯಾಯಿತಿ ನೀಡುವ ಮೂಲಕ ಅವರ ಮೂಗಿಗೆ ತುಪ್ಪ ಸವರಲಾಗಿದೆ. ರೈತರು, ಕೃಷಿ ಕ್ಷೇತ್ರ ಮತ್ತು ಗ್ರಾಮೀಣ ಪ್ರದೇಶಗಳ ಜನರಿಗೆ ಬರೆ ಎಳೆಯಲಾಗಿದೆ. ದಲಿತ, ಅಲ್ಪಸಂಖ್ಯಾತ ಸಮುದಾಯಗಳಿಗೆ ಬಹಿರಂಗವಾಗಿ ದ್ರೋಹ ಬಗೆದಿದ್ದಾರೆ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಕರ್ನಾಟಕದ ಯಾವುದೇ ನೀರಾವರಿ, ರೈಲ್ವೆ, ಕೈಗಾರಿಕೆಗಳಿಗೆ ವಿಶೇಷ ಅನುದಾನ ಒದಗಿಸಲಾಗಿಲ್ಲ. ತಮ್ಮ ರಾಜಕೀಯ ಲಾಭಕ್ಕಾಗಿ ಕುಮಾರಸ್ವಾಮಿಯವರು ಪ್ರತಿನಿಧಿಸುವ ಮಂಡ್ಯ ಕ್ಷೇತ್ರಕ್ಕೆ ಒಂದಷ್ಟು ಹಣ ನೀಡಿರುವುದು ಬಿಟ್ಟರೆ ರಾಜ್ಯಕ್ಕೆ ಯಾವುದೇ ರೀತಿಯಲ್ಲೂ ಹೊಸ ಯೋಜನೆ, ಹಣ ದೊರಕಿಲ್ಲ. ಅರ್ಥಾತ್ ರಾಜ್ಯಕ್ಕೆ ಎಂದಿನಂತೆ ಮೋದಿ ಸರ್ಕಾರ ಅನ್ಯಾಯವೆಸಗಿದೆ. ಆದರೆ ಇದರ ವಿರುದ್ಧ ಕರ್ನಾಟಕದ ಯಾವುದೇ ಸಂಸದರು ತುಟಿ ಬಿಚ್ಚುತ್ತಿಲ್ಲ. ಬಿಜೆಪಿ ಸಂಸದರು ಮೋದಿ, ಶಾ ಕೇಳಿದರೆ ಕರ್ನಾಟಕವನ್ನು ದಾನವಾಗಿ ನೀಡಲೂ ಸಿದ್ದವಾಗುತ್ತಾರೆ. ಅವರಿಗೆ ಮೋದಿ, ಶಾ ಎದುರು ನಿಂತುಕೊಳ್ಳುವ ಧೈರ್ಯವೂ ಇಲ್ಲ. ಅಡ್ಡಬಿದ್ದು ಬರುವುದೊಂದೇ ಗೊತ್ತು. ಕಾಂಗ್ರೆಸ್ ಸಂಸದರೂ ಹೆಚ್ಚೇನೂ ಪ್ರತಿರೋಧ ಒಡ್ಡದಿರುವುದು ದುರಂತ” ಎಂದರು.

Advertisements

“ದೇಶದ ಬೆನ್ನೆಲುಬಾದ ರೈತರು, ಕೃಷಿ ಕ್ಷೇತ್ರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಈ ಬಜೆಟ್ ನಲ್ಲಿ ಬರೆ ಎಳೆಯಲಾಗಿದೆ. ಅವರ ಪ್ರತಿಭಟನೆಗಳಿಗೆ ಪ್ರತಿಯಾಗಿ ಅವರ ಮೇಲೆ ಸೇಡು ತೀರಿಸಿಕೊಳ್ಳುವ ಕಾರ್ಯವನ್ನು ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಒದಗಿಸುವ, ಆ ಮೂಲಕ ಒಂದಷ್ಟು ಆದಾಯ ತಂದುಕೊಡುವ ನರೇಗಾ ಯೋಜನೆಗೆ ಕಳೆದ ಬಜೆಟ್ ಗಿಂತ 3,154 ಕೋಟಿ ರೂಪಾಯಿ ಕಡಿಮೆ ಹಣ ನೀಡಲಾಗಿದೆ. ಕಳೆದ ಬಾರಿ 89,154 ಕೋಟಿ ಪಡೆದಿದ್ದ ಈ ಯೋಜನೆ, ಈ ಬಾರಿ ಕೇವಲ 8,600 ಕೋಟಿ ರೂಪಾಯಿ ಮಾತ್ರ ಪಡೆದಿದೆ. ಇನ್ನು ಅತಿಹೆಚ್ಚು ಅನುದಾನ ಪಡೆಯಬೇಕಿದ್ದ ನೀರಾವರಿ ಕ್ಷೇತ್ರಕ್ಕೆ ಕೇವಲ 8260 ಕೋಟಿ ರೂಪಾಯಿ, ಅಂದರೆ ಕಳೆದ ಬಾರಿಗಿಂದ ಕೇವಲ 10 ಕೋಟಿ ರೂಪಾಯಿ ಮಾತ್ರ ಹೆಚ್ಚಿಗೆ ನೀಡಲಾಗಿದೆ. ಇನ್ನು ರೈತರನ್ನು ಆತ್ಮಹತ್ಯೆಯಿಂದ ಕಾಪಾಡಬಹುದಾದ ಬೆಳೆ ವಿಮೆ ಕ್ಷೇತ್ರಕ್ಕೆ ಕೇವಲ 12,242 ಕೋಟಿ ಮಾತ್ರ ಮೀಸಲಿಡಲಾಗಿದೆ. ಇದು ಕಳೆದ ಬಾರಿಗಿಂತ ಸುಮಾರು 3,600 ಕೋಟಿ ಕಡಿಮೆಯಾಗಿದೆ. ಇದು ಕೃಷಿ ಕ್ಷೇತ್ರದ ವಿರುದ್ಧ ಮೋದಿ ಸರ್ಕಾರಕ್ಕೆ ಇರುವ ಅಸಹನೆಯನ್ನು ತೋರಿಸುತ್ತದೆ” ಎಂದು ಕಿಡಿಕಾರಿದರು.

ಈ ಸುದ್ದಿ ಓದಿದ್ದೀರಾ?: ಕೊಪ್ಪಳ | ಜ್ಯೋತಿಬಾ ಫುಲೆ ಅರಿವು ಬಿತ್ತಲು ಸತ್ಯಶೋಧಕ ಸಮಾಜ ಕಟ್ಟಿದರು: ರಮೇಶ್ ಗಬ್ಬೂರ

“ಇನ್ನು ದಲಿತರು ಮತ್ತು ಅಲ್ಪಸಂಖ್ಯಾತರಿಗೆ ಬಹಿರಂಗವಾಗಿಯೇ ದ್ರೋಹ ಬಗೆಯಲಾಗಿದೆ. ಎಸ್‌ಟಿ ಸಮುದಾಯಕ್ಕೆ ನೀಡುವ ನ್ಯಾಷನಲ್ ಫೆಲೋಷಿಪ್‌ನ್ನು 165 ಕೋಟಿಯಿಂದ ಕೇವಲ ಎರಡು ಲಕ್ಷಕ್ಕೆ ಇಳಿಸಲಾಗಿದೆ. ಅಲ್ಪಸಂಖ್ಯಾತರ ವಿದ್ಯಾರ್ಥಿವೇತನವನ್ನು ಸುಮಾರು 1000 ಕೋಟಿ ಇಂದ ಕೇವಲ 197.50 ಕೋಟಿ ರೂಪಾಯಿಗಳಿಗೆ ಇಳಿಸಲಾಗಿದೆ ಇದು ದೊಡ್ಡ ದ್ರೋಹ. ಆದಾಯ ತೆರಿಗೆ ಮಿತಿ ಏರಿಕೆ ಒಂದನ್ನು ಬಿಟ್ಟು, ಸಾಮಾನ್ಯ ಜನರಿಗೆ ಅನುಕೂಲವಾಗುವ ಯಾವ ಅಂಶವೂ ಈ ಬಜೆಟ್‌ನಲ್ಲಿ ಇಲ್ಲ. ಇನ್ನು ಆದಾಯ ತೆರಿಗೆ ವಿಚಾರಕ್ಕೆ ಬರುವುದಾದರೆ, ಜನರ ಆದಾಯವೇ ಮಾಯವಾಗಿರುವಾಗ ತೆರಿಗೆ ಮಿತಿ ಏರಿಕೆ ಯಾವ ಪುರುಷಾರ್ಥಕ್ಕೆ ಎಂದು ಕೇಳಬೇಕಾಗುತ್ತದೆ” ಎಂದು ಮಜೀದ್ ತಮ್ಮ ಪ್ರಕಟಣೆಯಲ್ಲಿ ವ್ಯಂಗ್ಯವಾಡಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X