ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ದಲಿತ ಯುವಕ ಯಮನೂರಪ್ಪ ಈರಪ್ಪ ಬಂಡಿಹಾಳ ಇವರ ಕ್ಷೌರ ನಿರಾಕರಿಸಿ ಕೊಲೆ ವಿರೋಧಿಸಿ ಮತ್ತು ಬಿಹಾರದ 14 ವರ್ಷದ ದಲಿತ ಬಾಲಕಿ ಅಪಹರಣ ಬರ್ಬರ ಹತ್ಯೆ ಮಾಡಿದ ಹಾಗೂ ಕೋಲ್ಕತ್ತದ ವೈದ್ಯ ವಿದ್ಯಾರ್ಥಿನಿ ಹತ್ಯೆ ಮಾಡಿದವರಿಗೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಕೊಪ್ಪಳ ಜಿಲ್ಲಾಧಿಕಾರಿ ನಳಿನ್ ಅತುಲ್ ಅವರಿಗೆ ಮನವಿ ಸಲ್ಲಿಸಿದರು .
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ಶನಿವಾರ ದಲಿತ ಯುವಕ ಯಮನೂರಪ್ಪ ಈರಪ್ಪ ಬಂಡಿಹಾಳ ಇವರನ್ನು ಮುದುಕಪ್ಪ ಹಡಪದ ಎಂಬ ವ್ಯಕ್ತಿಯ ಸಲೋನಗೆ ಹೋಗಿ ಕ್ಷೌರ ಮಾಡಿಸಲು ಹೋದಾಗ ಇಬ್ಬರ ಮಧ್ಯೆ ಸಂಘರ್ಷ ನಡೆದು ಕ್ಷೌರ ಮಾಡುವ ಕತ್ತರಿಯಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ಅತ್ಯಂತ ನೋವಿನ ವಿಷಯವಾಗಿದೆ. ಈ ಘಟನೆಯನ್ನು ಸೂಕ್ತವಾಗಿ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು .
ಸಂಗನ ಹಾಲ ಗ್ರಾಮದಲ್ಲಿ ಜಾತಿ ಸಂಘರ್ಷಕ್ಕೆ ಎಡೆ ಮಾಡದೆ ಜನಗಳ ಸಾಮರಸ್ಯ ಹಾಳಾಗದಂತೆ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಜಾತಿ ಬಣ್ಣ ಬಳಿಯದೇ ನಿಷ್ಪಕ್ಷಪಾತ ತನಿಖೆ ನಡೆಸಿ ಅಪರಾಧಿಗೆ ಶಿಕ್ಷೆ ವಿಧಿಸಬೇಕು ಎಂದು ಮನವಿ ಮಾಡಿದರು .
ಇಬ್ಬರ ನಡುವೆ ನಡೆದ ಜಗಳ ಕೊಲೆ ಮಾಡುವಷ್ಟು ಹೀನಾಯ ಸ್ಥಿತಿಗೆ ತಲುಪಿರುವುದು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ. ಹಾಗಾಗಿ ಜಾತಿ ಹೆಸರಲ್ಲಿ ಕೊಲೆಯಾಗಿರುವ ವಿಷಯವನ್ನು ರಾಜಕೀಯವಾಗಿ ಬೆಳೆಸಿದರೆ ಸರಿಯಾದ ಕ್ರಮವಲ್ಲ ಎಂದರು .
ಸ್ವಾತಂತ್ರ್ಯ ದಿನಾಚರಣೆಯ ದಿನವೆ ಬಿಹಾರದಲ್ಲಿ 14 ವರ್ಷದ ದಲಿತ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೇಸಗಿ ಅತ್ಯಂತ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಭಾರತದ ದಲಿತರ ಬದುಕಿನ ಪರಿಸ್ಥಿತಿ ದುಸ್ಥಿತಿಯಾಗಿದೆ. ಹಾಗೂ ಕೋಲ್ಕತ್ತದ ವೈದ್ಯೆ ವಿದ್ಯಾರ್ಥಿನಿ ಹತ್ಯೆ ಕೂಡಾ ನಡೆದಿದೆ ಇಂತಹ ಅತ್ಯಾಚಾರ ಕೊಲೆ , ಜಾತಿ ನಿಂದನೆ , ಜಾತಿ ಕೊಲೆಯಂತಹ ಘಟನೆಗಳು ದೇಶದ ಅನೇಕ ರಾಜ್ಯಗಳಲ್ಲಿ ನಡೆಯುತ್ತಲೇ ಇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು .
ಸದ್ಯ ದೇಶದಲ್ಲಿ ದುಡಿಯುವ ವರ್ಗದ ಮಹಿಳೆಯರಿಗೆ ದಲಿತರಿಗೆ ವಿದ್ಯಾರ್ಥಿ ಯುವ ಜನ ಮಹಿಳೆಯರಿಗೆ ಭದ್ರತೆ ಇಲ್ಲಾದಂತಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 78 ವರ್ಷಗಳು ಕಳೆದರೂ ಇನ್ನೂ ದೇಶದಲ್ಲಿ ಬ್ರಿಟಿಷ್ ಆಡಳಿತನೆ ನಡೆಯುತ್ತಿದೆ . ಇನ್ನೂ ಯಾವಾಗ ಮಹಿಳೆಯರಿಗೆ ದಲಿತರಿಗೆ ಸ್ವಾತಂತ್ರ್ಯ ಸಿಗೋದು ಎಂದು ಪ್ರಶ್ನಿಸಿದರು .ಸರಕಾರ ಕೊಲೆ , ಹತ್ಯೆ , ಜಾತಿ ನಿಂದನೆ ಮಾಡುತ್ತಿರುವ ಮೇಲೆ ಕಠಿಣ ಕ್ರಮ ಜರುಗಿಸುವುದಾಗಿ ಮುಂದಾಗುತ್ತಿಲ್ಲ ಎಂದು ಕಾಣುತ್ತಿದೆ ಎಂದು ಆಗ್ರಹಿಸಿದರು.
ಪ್ರಗತಿಪರ ಚಿಂತಕರು ಅಲ್ಲಮ ಪ್ರಭು ಬೆಟ್ಟದೂರು , ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟ (ಎಐಟಿಯುಸಿ) ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ್ ಶೀಲವಂತರ್ , ಕರ್ನಾಟಕ ರೈತ ಸಂಘ (AIKKS) ಜಿಲ್ಲಾ ಅಧ್ಯಕ್ಷ
ಬಸವರಾಜ್ ಪೂಜಾರ ನರೇಗಲ್ , ತುಕಾರಮ್ ಬಿ.ಪಾತ್ರೋಟಿ , ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ , ಜಿಲ್ಲಾಧ್ಯಕ್ಷ ಖಾಸೀಮ ಸರ್ದಾರ್ , ಎಐಯುಟಿಯುಸಿ
ಜಿಲ್ಲಾ ಮುಖಂಡ ಶರಣು ಗಡ್ಡಿ , ಜಾಫರ್ ಕುರಿ , ನಾಗರಾಜ್ ಯಾದವ್ , ಪಾಮಣ್ಣ ಇನ್ನಿತರರು ಹಾಜರಿದ್ದರು .