ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ಸಮನ್ವಯತೆ ಇಲ್ಲದೆ ಇದ್ದರೆ ಅಭಿವೃಧಿ ಅಸಾಧ್ಯ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದರು.
ಕೊರಟಗೆರೆ ತಾಲ್ಲೂಕಿನ ತುಂಬಾಡಿ ಗ್ರಾಮದಲ್ಲಿ ಭಾನುವಾರ ನೂತನವಾಗಿ ನಿರ್ಮಿಸಿದ್ದ ಆಂಜನೇಯಸ್ವಾಮಿ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮದ್ಯೆ ಸಮನ್ವಯತೆ ಇರಬೇಕು ಆಗ ಮಾತ್ರ ದೇಶ ಮತ್ತು ರಾಜ್ಯಗಳು ಅಭಿವೃದ್ಧಿ ಹೊಂದುತ್ತವೆ ಅಭಿಪ್ರಾಯ ಹೊರಹಾಕಿದರು.
ಕೇಂದ್ರ ಸಚಿವ ಸೋಮಣ್ಣ ಗೃಹ ಸಚಿವ ಡಾ.ಜಿ.ಪರಮೇಶ್ವರರನ್ನು ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ಮುಂದೆಯೆ ಹಾಡಿ ಹೊಗಳುವ ಮೂಲಕ ಈ ಕಾರ್ಯಕ್ರಮಕ್ಕೆ ಡಾ.ಜಿ.ಪರಮೇಶ್ವರ ಬರಬೇಕಿತ್ತು ಈ ಭಾಗಕ್ಕೆ ಎತ್ತಿನಹೊಳೆ, ಭದ್ರಮೇಲ್ದಂಡೆ ಯೋಜನೆಗಳು ಬರಬೇಕಿದೆ, ಇದಕ್ಕಾಗಿ ಎರಡು ಸರ್ಕಾರಗಳು ಶ್ರಮಿಸುತ್ತಿವೆ, ಈ ಕ್ಷೇತ್ರದ ಶಾಸಕರು, ರಾಜ್ಯದ ಸಚಿವರಾದ ಡಾ.ಜಿಪರಮೇಶ್ವರ ಈ ಭಾಗದ ಕೆರೆಗಳಿಗೆ ನೀರು ಹರಸಲು ಕೇಂದ್ರ ಸರ್ಕಾರಕ್ಕೂ ಅರ್ಜಿ ಸಲ್ಲಿಸಿದ್ದಾರೆ, ನಾನು, ಡಾ.ಜಿ.ಪಮೇಶ್ವರ, ಕೆ.ಎನ್.ರಾಜಣ್ಣ ಮೂವರು ಜನರು ಸೇರಿ ಪಕ್ಷಭೇದ ಮರೆತು ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸುವ ತಿರ್ಮಾನ ಮಾಡಿದ್ದೇವೆ, ಈ ಭಾಗದ ಅಭಿವೃದ್ಧಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ನನಗೆ ಪೂರ್ಣ ಸಹಕಾರ ನೀಡುತ್ತಿದ್ದು ಡಾ.ಜಿ.ಪರಮೇಶ್ವರ ರಂತ ಒಳ್ಳೆಯ ಉತ್ತಮ ರಾಜಕಾರಣಿ ಅಪರೂಪ ಎಂದು ಕೊಂಡಾಡಿ ಹೊಗಳಿದರು.
ತುಂಬಾಡಿ ಗ್ರಾಮದ ಮುಖಂಡರ, ಜನರ ಕೋರಿಕೆ ಮೇರೆಗೆ ಇಲ್ಲಿನ ಶಾಲಾ ಕೊಠಡಿ ನಿರ್ಮಾಣಕ್ಕೆ 1
.10 ಕೋಟಿ ನೀಡುವುದಾಗಿ ಭರವಸೆ ನೀಡಿ ಆ ಕೆಲಸವನ್ನು ಶೀಘ್ರವಾಗಿ ಪ್ರಾರಂಭಿಸಿ ಮುಗಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು,ಅದೇ ರೀತಿ ಮಧುಗಿರಿ ತಾಲ್ಲೂಕಿನ ಐ.ಡಿ.ಹಳ್ಳಿ ಗ್ರಾಮದಲ್ಲಿ ಪ್ಲೋರೈಡ್ ಯುಕ್ತ ಕುಡಿಯುವ ನೀರಿದ್ದು ಅಲ್ಲಿನ ಶುದ್ದ ಕುಡಿಯುವ ನೀರಿನ ವ್ಯವಸ್ಥೆಗೆ 2 ಕೋಟಿ ಅನುದಾನದ ಮಂಜೂರು ಮಾಡಿರುವ ಬಗ್ಗೆ ಮಾಹಿತಿ ನೀಡಿದರು.
ಸಿದ್ದರಬೆಟ್ಟದ ಶ್ರೀಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು
ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷ ಟಿ. ಸಿ ಲಕ್ಷ್ಮೀಶ್, ಮಾಜಿ ಶಾಸಕ ಪಿ.ಆರ್.ಸುಧಾಕರ್‌ಲಾಲ್, ಮಾಜಿ ಜಿ.ಪಂ ಅಧ್ಯಕ್ಷ ವೈ.ಹೆಚ್ ಹುಚ್ಚಯ್ಯ, ತಾ.ಜೆಡಿಎಸ್ ಅಧ್ಯಕ್ಷ ಜಿ.ಎಂ ಕಾಮರಾಜು, ಬಿಜೆಪಿ ಮಂಡಲ ಅಧ್ಯಕ್ಷ ರುದ್ರೇಶ್, ತುಂಬಾಡಿ ಗ್ರಾ.ಪಂ ಅಧ್ಯಕ್ಷ ನಟರಾಜು, ಉಪಾದ್ಯಕ್ಷೆ ಲತಾ, ಸದಸ್ಯರಾದ ಪ್ರಸನ್ನಕುಮಾರ್, ಹೇಮಂತ್, ಪ.ಪಂ ಸದಸ್ಯ ಕೆ. ಎನ್ ಲಕ್ಷ್ಮೀನಾರಾಯಣ, ಮುಖಂಡರುಗಳಾದ ಜೆ. ಎನ್ ನರಸಿಂಹರಾಜು, ಮುಖಂಡರಾದ ತಿಮ್ಮಜ್ಜ, ವಿನಯ್‌ಬಾಬು, ಕೃಷ್ಣಾಚಾರ್, ರಾಘವೇಂದ್ರ, ಸಿದ್ದಮಲ್ಲಯ್ಯ, ಸೇರಿದಂತೆ ಇತರರು ಇದ್ದರು.