ತಾವು ದುಶ್ಚಟಗಳಿಂದ ಮುಕ್ತ ಹಾಗೂ ಸಮಾಜದಲ್ಲಿ ಸಜ್ಜನರಾಗಿ ಬಾಳುವುದಾಗಿ ಯುವಜನರು ಕೆಪಿಸಿಸಿ ಮುಖ್ಯ ವಕ್ತಾರ ನಿಕೇತ್ ರಾಜ್ ಮೌರ್ಯ ಅವರೊಂದಿಗೆ ಪ್ರಮಾಣ ಮಾಡಿದರು.

ಕೊರಟಗೆರೆ ತಾಲೂಕಿನ ಹೊಸಪಾಳ್ಯದಲ್ಲಿ ಭಾನುವಾರ ಶ್ರೀ ಭಕ್ತ ಕನಕದಾಸ ಕುರುಬರ ಯುವಕ ಬಳಗದ ವತಿಯಿಂದ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ಮೌರ್ಯ ಅವರು, ಪ್ರತಿಯೊಬ್ಬರೂ ಸುಶಿಕ್ಷಿತರಾಗಬೇಕು, ಅನ್ಯ ಸಮುದಾಯಗಳನ್ನು ದ್ವೇಷಿಸದೇ ಸೌಹಾರ್ದವಾಗಿ ಬದುಕಬೇಕು ಎಂದು ಹೇಳಿದರು.

ಸಮುದಾಯದಲ್ಲಿ ಒಗ್ಗಟ್ಟು ಬಹಳ ಮುಖ್ಯ, ನಾವೆಲ್ಲರೂ ಸಂಘಟಿತರಾಗಿ ರಾಜಕೀಯ ಪ್ರಜ್ಞೆಯನ್ನು ಹೊಂದಿದಾಗ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸದೃಢರಾಗಲು ಸಾಧ್ಯ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸುಭಾಷ್ ಪದವಿ ಪೂರ್ವ ಕಾಲೇಜು ಚೇರ್ಮನ್ ಗಂಗರಂಗಯ್ಯ, ಗ್ರಾಮದ ಮುಖಂಡರಾದ ಪ್ರಭು, ನಾಗರಾಜು, ವೆಂಕಟೇಶ್ ಹಾಗೂ ಯುವಕರು ಮತ್ತು ಗ್ರಾಮಸ್ಥರು ಹಾಜರಿದ್ದರು.
