ಬೆಂಗಳೂರು ಬೈಪಾಸ್ ಮಾರ್ಗದಿಂದ ಮಧುಗಿರಿ ಕಡೆಗೆ ಹೊರಟಿದ್ದ ಕಬ್ಬಿಣ ತುಂಬಿದ್ದ ಟ್ರ್ಯಾಕ್ಟರ್ ಬ್ರೇಕ್ ಜಾಮ್ ಆಗಿದ್ದು, ತಿರುವಿನಲ್ಲಿ ಬ್ರೇಕ್ ಹೊಡೆದ ಪರಿಣಾಮ ಟ್ರಾಕ್ಟರ್ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.
ಕೊರಟಗೆರೆ ಪಟ್ಟಣದ ಹೊರವಲಯದ ಬೈಪಾಸ್ ರಸ್ತೆಯ ನವೀನ್ ಕಂಫರ್ಟ್ಸ್ ಬಳಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿರುವುದಿಲ್ಲ ಎನ್ನಲಾಗಿದೆ.
ಗುರುವಾರ ಮಧ್ಯಾಹ್ನ ಸುಮಾರು1ಗಂಟೆ ಸಮಯದಲ್ಲಿ ಟ್ರಾಕ್ಟರನ ಬ್ರೇಕ್ ನಲ್ಲಿ ತಾಂತ್ರಿಕ ದೋಷದಿಂದ ಈ ಅಪಘಾತ ಸಂಭವಿಸಿದ್ದು, ಚಾಲಕನ ಕೈಗೆ ಪಟ್ಟಾಗಿದ್ದು, ಗಾಯಾಳನ್ನು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಷಯ ತಿಳಿದ ತಕ್ಷಣ ಕೊರಟಗೆರೆ ಪೊಲೀಸ್ ಠಾಣೆಯ ಎಎಸ್ಐ ಗೋವಿಂದ ನಾಯ್ಕ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಪಲ್ಟಿಯಾಗಿದ್ದ ಟ್ರ್ಯಾಕ್ಟರ್ ಅನ್ನು ಕ್ರೇನ್ ಸಹಾಯದಿಂದ ಮೇಲೆತ್ತಿಸುವ ಕೆಲಸ ಮಾಡಿದ್ದಾರೆ.