ಕನ್ನಡ ಭಾಷೆ 8 ಜ್ಞಾನ ಪೀಠ ಪ್ರಶಸ್ತಿ ಪಡೆದ ಶ್ರೀಮಂತ ಭಾಷೆ. ಸಾಹಿತ್ಯ ಬಿಟ್ಟು ಜೀವನವಿಲ್ಲ ಜೀವಬಿಟ್ಟು ಸಾಹಿತ್ಯವಿಲ್ಲ. ಹಾಗಾಗಿ ಯುವಜನತೆ ಸಾಹಿತ್ಯ ಅಧ್ಯಯನದ ಕಡೆ ಗಮನ ಕೊಡಬೇಕು ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್ ಈರಣ್ಣ ತಿಳಿಸಿದರು.
ಕೊರಟಗೆರೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಂಗಳವಾರ ಆಯೋಜಿಸಿದ್ದ ಕಸಾಪ ನಡೆ ಯುವಜನತೆಯ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವ ಜನರಲ್ಲಿ ಓದುವ ಹವ್ಯಾಸವನ್ನು ರೂಢಿಸುವ ಉದ್ದೇಶದಿಂದ ಕಸಾಪ ನಡೆ ಯುವ ಜನತೆ ಕಡೆ ಕಾರ್ಯಕ್ರಮ ರೂಪಿಸಲಾಗಿದೆ. 18ವರ್ಷ ತುಂಬಿದ ಎಲ್ಲರೂ ಕಸಾಪ ದಲ್ಲಿ ಸದಸ್ಯತ್ವ ಪಡೆಯಬಹುದಾಗಿದೆ. ಕಸಾಪದಲ್ಲಿ ಯುವಜನರ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕು ಎಂದರು.
ನವೆಂಬರ್ ನಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಉಪನ್ಯಾಸಕ ಕೆ.ಜಿ ಯತೀಶ್ ಮಾತನಾಡಿ ಕನ್ನಡ ಅನ್ನ ನೀಡುವ ಭಾಷೆಯಾಗಿಲ್ಲ ಎಂಬುದೇ ನಮ್ಮ ದುರ್ದೈವದ ಸಂಗತಿ. ಇದಕ್ಕೆ ಚಳುವಳಿಗಳು ನಡೆಯುತ್ತಿವೆ. ನಾವು ಜಾಗೃತರಾದರೆ ಮಾತ್ರ ಈ ಭಾಷೆ ಉಳಿಯಲು ಸಾಧ್ಯ. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕಂಪನಿಗಳಲ್ಲಿ ಕನ್ನಡಿಗರಿಗೆ ಅವಕಾಶ ನೀಡಬೇಕು ಎಂಬುದೇ ನಮ್ಮ ಕಸಾಪದ ಬೇಡಿಕೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಸಾಪ ಗೌರವಾಧ್ಯಕ್ಷ ಹನುಮಂತರೆಡ್ಡಿ, ಉಪಾನ್ಯಾಸಕರುಗಳಾದ ಕೆ.ಜಿ ಯತೀಶ್, ನಂಜುಂಡಪ್ಪ, ರೇಣುಕಮ್ಮ, ಜಿ.ಕೆ.ಎನ್, ಗಿರೀಶ್, ಸೇರಿದಂತೆ ನೂರಾರು ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.