ದೀನ ದಲಿತರು, ಬಡವರು, ಮಧ್ಯಮ ವರ್ಗದವರು ಕಾಂಗ್ರೆಸ್ ಸರ್ಕಾರದಿಂದ ಇವತ್ತು ನೆಮ್ಮದಿಯಿಂದ ಜೀವನ ಸಾಗಿಸುತ್ತಾ ಇದ್ದಾರೆ. ಹಿಂದುಳಿದ ವರ್ಗಗಳ ಯುವಕರು ವಿದ್ಯಾವಂತರಾಗುತ್ತಿದ್ದಾರೆ, ನಿಮ್ಮ ಡೋಂಗಿ ಹಿಂದುತ್ವ ನಂಬಿ ಜೈಲಿಗೆ ಹೋಗುವ ಸಂಖ್ಯೆ ಕಡಿಮೆ ಆಗಿದೆ, ಹಾಗಾಗಿ ಬಿಜೆಪಿಯವರು ಹೊಸ ನಾಟಕದ ಮುಖಾಂತರ ಜನರನ್ನ ಮಂಗ ಮಾಡಲು ಹೊರಟಿರುವಂತಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದರು ಅವರು, ಏಪ್ರಿಲ್ 10ನೇ ತಾರೀಕು ಉಡುಪಿಯಲ್ಲಿ ಬಿಜೆಪಿ ಶಾಸಕರು ಮತ್ತು ಬಿಜೆಪಿ ನಾಯಕರಿಂದ ಜನಾಕ್ರೋಶ ಯಾತ್ರೆ ಪ್ರತಿಭಟನೆ ನಡೆಸುತ್ತಿದ್ದಾರೆ. ವಿಶೇಷ ಏನೆಂದರೆ ಸರಕಾರದ ಭ್ರಷ್ಟಾಚಾರದ ವಿರುದ್ಧ, ರೈತ ವಿರೋಧಿ ವಿರುದ್ಧ, ಬೆಲೆ ಹೆಚ್ಚಳದ ವಿರುದ್ದ ಹೀಗೆ ಬೇರೆ ಬೇರೆ ಅಂತೆ, ನಾನು ಈ ಬಿಜೆಪಿ ಅವರಿಗೆ ಕೇಳುತ್ತೇನೆ ನಿಮಗೆ ಮಾನ ಮರ್ಯಾದೆ ಏನು ಇಲ್ವಾ ನೀವು ಮಾಡಿದ ಭ್ರಷ್ಟಾಚಾರಗಳು ಕರ್ನಾಟಕದ ಎಲ್ಲಾ ಕವಿಗಳು ಬರೆದ ಕಾದಂಬರಿ ಪುಸ್ತಕದ ಪುಟಗಳೇ ಸಾಕುವುದಿಲ್ಲ ಅಷ್ಟೊಂದು ಭ್ರಷ್ಟಾಚಾರ ಮಾಡಿದ ನೀವು ಯಾವ ಮುಖ ಹಿಡಿದುಕೊಂಡು ಜನಕ್ರೋಶ ಯಾತ್ರೆ ಪ್ರತಿಭಟನೆ ಮಾಡುವುದು.
ಅಪ್ಪ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಯತ್ನಾಳ್ ಅವರನ್ನು ಪಕ್ಷದಿಂದ ಕಿತ್ತು ಬಿಸಾಡಿ ಈಗ ವಿಜೇಂದ್ರ ಮತ್ತು ಅಪ್ಪ ಮಕ್ಕಳು ಯತ್ನಾಳ್ ವಿರುದ್ಧ ಸಾರಿರುವ ಸಮರವನ್ನು ಮುಚ್ಚಿ ಹಾಕಿಕೊಳ್ಳುವ ಉದ್ದೇಶದಿಂದ ಇಡೀ ರಾಜ್ಯದ್ಯಂತ ಜನಕ್ರೋಶ ಪ್ರತಿಭಟನೆ, ನೀವು ಬಿಜೆಪಿಯವರು ಎಷ್ಟೇ ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸಲು ಹೊರಟರು ಜನ ನಿಮ್ಮನ್ನು ನಂಬುವ ಸ್ಥಿತಿ ಇಲ್ಲ, ಅಣ್ಣಾಮಲೈ ತಮಿಳುನಾಡಿನಲ್ಲಿ ಚಾಟಿಯಲ್ಲಿ ಹೊಡೆದುಕೊಂಡ ಹಾಗೆ ಕರ್ನಾಟಕದಲ್ಲಿ ಬಿಜೆಪಿಯವರು ಜನಾಕ್ರೋಶ ಪ್ರತಿಭಟನೆ ಮಾಡಿ ಜನತೆಯಿಂದ ಚಾಟಿ ಏಟು ಹೊಡೆಸಿ ಕೊಳ್ಳುವುದಂತು ಸತ್ಯ ಸಂಗತಿ.
ಭ್ರಷ್ಟಾಚಾರಿಗಳೇ ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡುವುದು, ರೈತ ವಿರೋಧಿಗಳೇ ರೈತರ ಪರ ಹೋರಾಟ ಮಾಡುವುದು, ಬೆಲೆ ಏರಿಸಿದವರೇ ಬೆಲೆ ಏರಿಕೆ ವಿರುದ್ಧ ಹೊರಟ ಮಾಡುವುದು, ಇವೆಲ್ಲಾ ನಾಟಕವು ಬಿಜೆಪಿ ಅವರಿಗೆ ಮಾತ್ರ ಸಾಧ್ಯ, ಈ ಭ್ರಷ್ಟ ಬಿಜೆಪಿಯನ್ನು ಯತ್ನಾಳ್ ಅವರು ಕರ್ನಾಟಕ ದಿಂದ ತೊಲಗಿಸುವಂತೆ ಮಾಡಿ “ಬಿಜೆಪಿಯಿಂದ ಕರ್ನಾಟಕ ಬಚಾವೋ ಕಾರ್ಯಕ್ರಮ” ಮಾಡಬೇಕು ಎಂದು ವಿನಂತಿಸಿದ್ದಾರೆ.