ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ದುರಂತ ನಡೆದಿದೆ, ಬರಿ 35 ಸಾವಿರ ಜನ ಸೇರ ಬಹುದಾದಂತ ಸ್ಥಳದಲ್ಲಿ ಸುಮಾರು 3 ಲಕ್ಷ ಜನ ಸೇರಿದ್ದು ಈ ದುರಂತಕ್ಕೆ ಕಾರಣ ಆಗಿದೆ, ಇದನ್ನು ಬಿಜೆಪಿ ಅವರು ರಾಜಕೀಯ ಬಾಣವಾಗಿ ಉಪಯೋಗಿಸಿ ಕೊಳ್ಳುತ್ತಿರುವುದು ಬಿಜೆಪಿ ನಾಯಕರ ದುರ್ಬುದ್ದಿ ಇಡಿ ಕರ್ನಾಟಕಕಕ್ಕೆ ತೋರಿಸುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಕೋಟ ನಾಗೇಂದ್ರ ಪುತ್ರನ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿರುವ ಘಟನೆ ನಿಜವಾಗಿಯೂ ದುರಾದೃಷ್ಟಕರ, ವಿಧಾನ ಸೌಧದಲ್ಲಿ ನಮ್ಮ ನೆಚ್ಚಿನ RCB ಆಟಗಾರರಿಗೆ ಅಭಿನಂದನೆ ಕಾರ್ಯಕ್ರಮ ಸರಕಾರ ಆಯೋಜನೆ ಮಾಡಿದೆ ಸುಮಾರು ಒಂದು ಲಕ್ಷ ಜನ ಸೇರಿದ್ದರು, ಆದರೆ ಸರ್ಕಾರಿ ಕಾರ್ಯಕ್ರಮದ ಸ್ಥಳ ದಲ್ಲಿ ನೂಕು ನುಗ್ಗುಲು ಆಗಿದೆ, ಆದರೆ ಯಾವುದೇ ನೋವು, ಜೀವ ಹಾನಿ ಸಂಭವಿಸಿಲ್ಲ.
ಇದಕ್ಕೆ ಸರಕಾರ ಹೊಣೆ ಅಲ್ಲ, ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ ಅಲ್ಲಿನ ಕ್ರಿಕೆಟ್ ಅಸೋಶಿಯೇಷನ್ ಕಾರಣ ಆಗುತ್ತದೆ. ಬಿಜೆಪಿಯವರು ಸಿಕ್ಕಿದ್ದೇ ಚಾನ್ಸು ಎಂದು ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ನಿಮ್ಮ ಕೆಟ್ಟ ಬುದ್ದಿ ಬದಿಗಿಟ್ಟು ಮೃತಪಟ್ಟ ಕುಟುಂಬಕ್ಕೆ ಸಮಾಧಾನ ಪಡಿಸಿ ಎಂದು ಆಗ್ರಹಿಸಿದ್ದಾರೆ.
ಯಾವುದೇ ತಂಡದ ಅಭಿಮಾನಿಗಳಿರಲಿ, ತಮ್ಮ ಜೀವಕ್ಕೆ ಕುತ್ತು ತಂದು ಕೊಳ್ಳುವಷ್ಟರ ಮಟ್ಟಕ್ಕೆ ಹೋಗೋದು ಒಳ್ಳೆಯದಲ್ಲ, ಮೃತಪಟ್ಟ ಎಲ್ಲಾ ಕುಟುಂಬಕ್ಕೂ ದೇವರು ನೋವನ್ನು ಸಹಿಸಿ ಕೊಳ್ಳುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸಿದ್ದಾರೆ.
17 ಜನ ಸತ್ತಿರೋದು ಜೀವಹಾನಿ ಅಲ್ವಾ.ಪ್ರಯಾಗ ಕುಂಭಮೇಳದಲ್ಲಿ ಕೋಟ್ಯಾಂತರ ಭಕ್ತರು ಆಗಮಿಸುತ್ತಾರೆ.ಅಲ್ಲಿ 30 ಜನ ಕಾಲ್ತುಳಿತಕ್ಕೆ ಸತ್ತಿದ್ದಕ್ಕೆ ಕಾಂಗ್ರೆಸ್ ಸರ್ಕಾರ ಅದನ್ನು ದೊಡ್ಡ ದಾಗಿ ಬಿಂಬಿಸುವ ಪ್ರಯತ್ನ ಮಾಡಿತ್ತು