ಕೊಲೆ ಮಾಡಿರುವವರು ಯಾವುದೇ ಧರ್ಮ ಆಗಿರಲಿ, ಕೊಲೆ ಮಾಡುವ ಮಟ್ಟಕ್ಕೆ ಯಾವ ಸಮುದಾಯವು ಹೋಗಬಾರದು, ನಾವು ಇವತ್ತು ಒಬ್ಬ ಹಿಂದೂ ಯುವಕನನ್ನು ಕಳೆದು ಕೊಂಡಿದ್ದೇವೆ, ಕೊಲೆ ಮಾಡಿರುವ ವ್ಯಕ್ತಿಗಳನ್ನು ಕೂಡಲೇ ಬಂದಿಸಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಕೋಟ ನಾಗೇಂದ್ರ ಪುತ್ರನ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸೇಡಿಗೆ ಸೇಡು ಎನ್ನುವ ಕೆಲವು ಧರ್ಮದವರು ತಿದ್ದಿಕೊಂಡು ನಿಷ್ಠಾವಂತರಾಗಿ ಬದುಕುದು ಉತ್ತಮ, ಕೊಲೆಗೆ ಕೊಲೆಯೇ ಪ್ರತಿಕಾರ ಅಲ್ಲ, ನಿಮ್ಮಂತ ಕೊಲೆಗಾರರಿಂದ ಸಮಾಜದ ಶಾಂತಿ ಕದಡುತ್ತದೆ. ಉತ್ತಮ ಸಮಾಜ ಕಟ್ಟಬೇಕಾಗಿರುವ ಯುವಕರ ಈ ರೀತಿಯ ವರ್ತನೆಯಿಂದ ಇಡಿ ದಕ್ಷಿಣ ಕನ್ನಡ ಜಿಲ್ಲೆ ಸ್ತಬ್ದವಾಗಿದೆ ಎಂದು ಹೇಳಿದ್ದಾರೆ.
ಕೊಲೆ ಮಾಡಿರುವ ವ್ಯಕ್ತಿಗಳನ್ನು ಕೂಡಲೇ ಬಂದಿಸಬೇಕು, ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸ ಬೇಕು, ಯಾವುದೇ ಧರ್ಮವನ್ನು ಬೆಂಬಲಿಸುವ ಪ್ರಶ್ನೆ ಇಲ್ಲ, ಕೊಲೆಗಾರಿಗೆ ಯಾವುದೇ ಧರ್ಮವಿಲ್ಲ. ಮಾನವೀಯತೆ ಇಲ್ಲದೆ ನಡು ರಸ್ತೆಯಲ್ಲಿ ಕೊಲೆ ಮಾಡಿರುದನ್ನು ಸಹಿಸಿ ಕೊಳ್ಳಲು ಸಾಧ್ಯವೇ ಇಲ್ಲ, ಕೊಲೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಹೇಳಿದರು.