ಉಡುಪಿಯ ಶಾಸಕ ಯಶ್ಫಾಲ್ ಸುವರ್ಣ ಸಾಂವಿಧಾನ ಮಾಧ್ಯಮಗಳ ಮುಂದೆ ‘ಆತ ಉಡುಪಿಗೆ ಬಂದಿದ್ದರೆ ಮಲ್ಪೆ ಬೀಚಲ್ಲಿ ಆತನನ್ನು ಫುಟ್ಬಾಲ್ ಆಡುತ್ತಿದ್ದೆವು. ಯಾವ ಸರಕಾರವಿದ್ದರೂ ಸರಿ, ಆತನಿಗೆ ತಕ್ಕ ಪಾಠ ಕಲಿಸದೇ ಬಿಡುವುದಿಲ್ಲ’ ಎಂಬ ಹೀನ ಭಯೋತ್ಪಾದಕ ಮಾತುಗಳನ್ನು ಸಾರ್ವಜನಿಕವಾಗಿ ಆಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಯಾವುದೇ ನಾಗರಿಕನೂ ಈ ಬಗೆಯ ವರ್ತನೆ ತೋರುವುದು ಅಪರಾಧವಾಗಿದೆ, ಅದರಲ್ಲೂ ಸಂವಿಧಾನಿಕ ಸ್ಥಾನದಲ್ಲಿರುವ ವ್ಯಕ್ತಿಯು ಈ ಬಗೆಯಲ್ಲಿ ವರ್ತಿಸುವುದು ಅಕ್ಷಮ್ಯ ಅಪರಾಧವಾಗಿದೆ. ಈ ವರ್ತನೆಯ ಮೂಲಕ ಅವರು ಸಂವಿಧಾನಕ್ಕೂ, ಅವರು ಪ್ರತಿನಿಧಿಸುವ ಕ್ಷೇತ್ರದ ಪ್ರಜೆಗಳಿಗೂ ಹೀನವಾದ ಅವಮಾನ ಮಾಡಿದ್ದಾರೆ. ಇಂತಹ ವ್ಯಕ್ತಿಗಳು ಸಂವಿಧಾನಿಕ ಸ್ಥಾನದಲ್ಲಿ ಯಾವ ಕಾರಣಕ್ಕೂ ಮುಂದುವರೆಯಕೂಡದು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಕೋಟ ನಾಗೇಂದ್ರ ಪುತ್ರನ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಉಡುಪಿ ಶಾಸಕರಿಗೆ ನಾನು ಹಲವು ಬಾರಿ ಹೇಳಿದ್ದೇನೆ, ನಿಮ್ಮ ವರ್ತನೆ ಸರಿ ಮಾಡಿಕೊಳ್ಳಿ ಎಂದು, ಆದರೆ ಇದು ಸರಿ ಆಗುವ ಶಾಸಕ ಅಲ್ಲ, ಕಲಿತ ವಿದ್ಯೆ ಮರೆಯಲು ಹೇಗೆ ಸಾಧ್ಯ? ಈಗಾಗಲೇ ಉಡುಪಿ ಶಾಸಕರು ಒಂದು ಬ್ಯಾಂಕು ಹಾಗೂ ಫೆಡರೇಷನ್ ಮಲ್ಪೆಯಲ್ಲಿ ಫುಟ್ ಬಾಲ್ ಹಾಗೆ ಒದ್ದು ಶೋಕಿ ಶಾಸಕನಾಗಿ ಹೊರಹೋಮ್ಮಿದ್ದಾರೆ. ಉಡುಪಿ ಶಾಸಕರಿಗೆ ಇನ್ನೊಬ್ಬರನ್ನು ಮೆಟ್ಟಿ ತಾನು ಹೇಗೆ ಮುಂದೆ ಹೋಗುವುದು ಎಂದು ಹಿಂದಿನ ವಿಧಾನ ಸಭೆ ಚುನಾವಣೆ ಜನಪ್ರಿಯ ಮಾಜಿ ಶಾಸಕರನ್ನ ಹೇಗೆ ಮಣಿಸಿದರು ಎಂದು ಉಡುಪಿ ಜನತೆ ನೋಡಿದ್ದಾರೆ. ಉಡುಪಿ ಶಾಸಕರಿಗೆ ಸಂವಿಧಾನ, ಮತದಾರ, ಅಧಿಕಾರಿ ಗಳು ಹಾಗೆ ಇತರ ಯಾವುದೇ ಸಂವಿಧಾನ ಸರಕಾರದ ಘನತೆ, ಇದೆಲ್ಲದರ ಮೇಲು ಗೌರವ ಇಲ್ಲ. ಕಲಿತ ಚಾಳಿ ಬಿಡುವ ಮನಸ್ಥಿತಿ ಇಲ್ಲದ ಶಾಸಕ, ಮರ್ಯಾದೆಯನ್ನು ಮೀರಿ ವರ್ತಿಸಿರುವ ಉಡುಪಿಯ ಶಾಸಕ, ಯಾವುದೇ ಕ್ಷೇತ್ರದ ಜನಪ್ರತಿನಿಧಿಗಳು ತಾವು ಸಂವಿಧಾನಬದ್ಧವಾಗಿ ನಡೆದುಕೊಳ್ಳುತ್ತೇವೆ ಎಂಬ ಪ್ರಮಾಣ ಮಾಡಿದ ಮೇಲಷ್ಟೇ ತಮ್ಮ ಸಂವಿಧಾನಿಕ ಸ್ಥಾನಕ್ಕೆ ಅರ್ಹರಾಗುತ್ತಾರೆ.
ಉಡುಪಿ ಶಾಸಕ ಉಡುಪಿಗೆ ಶಾಸಕ ಮಾತ್ರ, ಉಡುಪಿಗೆ ಬಂದೋರಿಗೆಲ್ಲ ಫುಟ್ಬಾಲ್ ಒದ್ದಹಾಗೆ ಒದೆಯೋಕೆ ಹೋದ್ರೆ, ವದೆಸಿ ಕೊಳ್ಳುವವ ಸಹ ಫುಟ್ಬಾಲ್, ಕಬಡ್ಡಿ, ಎಲ್ಲಾ ರೀತಿಯ ಆಟ ಅಡಿ ಬಂದಿರುತ್ತಾನೆ ಅನ್ನೋದು ಉಡುಪಿ ಶಾಸಕರ ಗಮನದಲ್ಲಿ ಇರಲಿ. ಕರ್ನಾಟಕ ವಿಧಾನ ಸಭೆಯ ಸಭಾಪತಿಗಳು ತಕ್ಷಣವೇ, ತಮ್ಮ ಸ್ಥಾನದ ಪರಮಾಧಿಕಾರ ಪ್ರಯೋಗಿಸಿ, ಯಶಪಾಲ ಸುವರ್ಣ ಅವರ ಮೇಲೆ ದಂಡನಾ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದೇವೆ ಎಂದು ಹೇಳಿದ್ದಾರೆ.