ದನದ ರುಂಡ ಬಿದ್ದ ತಕ್ಷಣ ಒಂದಷ್ಟು ಜನ ಕೋಮುವಾದಿಗಳು ಮೈ ಕೊಡವಿ ಎದ್ದು ನಿಂತು ಉಡುಪಿ ಜಿಲ್ಲೆಗೆ ಬೆಂಕಿ ಹಚ್ಚಲು ರೆಡಿ ಆಗಿ ಬಂದರು, ಒಬ್ಬ ಶರಣ್ ಪಂಪ್ವೆಲ್, ಒಬ್ಬ ಸಿ ಟಿ ರವಿ, ಮತ್ತೊಬ್ಬ ಸುನಿಲ್ ಕುಮಾರ್ ರಂತಹ ಹಲವಾರು ಬಿಜೆಪಿಯ ಅವಕಾಶಕ್ಕಾಗಿ ಕಾಯುತ್ತಿದ್ದ ಕೋಮುವಾದಿಗಳು, ಉಡುಪಿ ಜಿಲ್ಲೆಗೆ ಧಾವಿಸಿ ಬಂದು ಮುಂದೆ ನಡೆಯುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಪಂಚಾಯತ್, ಚುನಾವಣೆಗೆ ಹಿಂದೂ ಗಳನ್ನು ಕೆರಳಿಸಿ ತಮ್ಮ ಬೇಳೆ ಬೇಯಿಸಿ ಕೊಳ್ಳುವ ಹುನ್ನಾರ ಮಾಡಿದರು, ಆದರೆ ತಾನೊಂದು ಬಗೆದರೆ ದೈವ ಇನ್ನೊಂದು ಬಗೆಯಿತು ಎಂಬಂತೆ ಉಡುಪಿ ಜಿಲ್ಲೆಯ ದಕ್ಷ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆರು ಜನ ಅಪರಾಧಿಗಳನ್ನು ಹಿಡಿದು ಇವರ ದುಷ್ಟ ಬುದ್ದಿಗೆ ತಣ್ಣೀರು ಎರಚಿದರು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಕೋಟ ನಾಗೇಂದ್ರ ಪುತ್ರನ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೋಮು ದ್ವೇಷಿಗಳು ಶಾಂತಿಪ್ರಿಯ ಜನರಿರುವ ಉಡುಪಿ ಜಿಲ್ಲೆಗೆ ಕಾಲಿಡ ಬಾರದು, ಒಬ್ಬ ಬಾಡಿಗೆ ಭಾಷಣಗಾರ ಸೂಲಿಬೆಲೆ, ಒಬ್ಬ ಪ್ರಭಾಕರ್ ಭಟ್ಟ, ಇನ್ನೊಬ್ಬ ಪ್ರತಾಪ್ ಸಿಂಹ ರಂತಹ ದ್ವೇಷಿ ಭಾಷಣ ಮಾಡುವಂತಹ ಕಿಡಿಗೇಡಿಗಳು ಉಡುಪಿಯಂತಹ ಪವಿತ್ರ ಭೂಮಿಗೆ ಕಾಲಿಡದಂತೆ ಮಾಡಬೇಕು. ನಾವು ಉಡುಪಿ ಜನ ಶಾಂತಿ ಪ್ರಿಯರು ನಮಗೆ ಯಾವುದೇ ಜಾತಿ, ಧರ್ಮದ ಬಗ್ಗೆ ದ್ವೇಷ ಇಲ್ಲ, ಎಲ್ಲಾ ಧರ್ಮ ದವರು ನೆಮ್ಮದಿಯಿಂದ ಬಾಳ ಬೇಕು, ನಮ್ಮ ಮಕ್ಕಳಿಗೆ ಒಂದು ಉತ್ತಮ ಸೌಹಾರ್ದಯುತ ಸಮಾಜವನ್ನು ನಿರ್ಮಿಸಿ ಕೊಡಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದ್ದಾರೆ.
ಈ ಎಲ್ಲಾ ದುಷ್ಟ ಕೂಟಗಳಿಂದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯನ್ನು ರಕ್ಷಿಸುವುದಕ್ಕೋಸ್ಕರ ಸಿದ್ದರಾಮಯ್ಯ ಸರಕಾರ ತೆಗೆದು ಕೊಂಡ ನಿರ್ಧಾರ ಈ ಎರಡು ಜಿಲ್ಲೆಯ ಜನರ ಪ್ರಶಂಸೆಗೆ ಒಳಪಟ್ಟಿರುತ್ತದೆ, ಈ ಎರಡು ಜಿಲ್ಲೆಯ ಜನ ಶಾಂತಿ ಪ್ರೀಯರು, ಇನ್ನಾದರೂ ಬದುಕುದಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ, ಅಂದರೆ ಎರಡು ಜಿಲ್ಲೆಗೆ ಉತ್ತಮ ಪೊಲೀಸ್ ಅಧಿಕಾರಿಗಳನ್ನು ನೇಮಿಸಿ ಕೋಮು ಗಲಭೆ ಸ್ರಷ್ಟಿಸುವ ವ್ಯಕ್ತಿಗಳ ಮಟ್ಟಹಾಕಲು ತೆಗೆದು ಕೊಂಡಿರುವ ನಿರ್ಧಾರ ಎರಡು ಜಿಲ್ಲೆಯ ಸ್ವಾಭಿಮಾನಿ ಜನರನ್ನು ಸಂತೋಷ ಗೊಳಿಸಿದೆ. ಇನ್ನಾದರು ಈ ಜಿಲ್ಲೆಯ ಜನ ನೆಮ್ಮದಿಯಿಂದ ಬದುಕುವಂತಾಗಲಿ, ಮಕ್ಕಳು ನೆಮ್ಮದಿಯಿಂದ ಶಾಲೆಗೆ ಹೋಗಿ ಬರುವಂತಾಗಲಿ, ವ್ಯಾಪಾರಸ್ಥರು ನೆಮ್ಮದಿಯ ದುಡಿಮೆ ಮಾಡುವಂತಾಗಲಿ, ಸರ್ವ ಧರ್ಮದ ಜನರು ಒಗ್ಗಟ್ಟಿನಿಂದ ಹಬ್ಬ ಹರಿದಿನ ಆಚರಿಸುವಂತಾಗಲಿ, ಒಟ್ಟಿನಲ್ಲಿ ಕೆಲವು ವರ್ಷಗಳಿಂದ ಈಚೆ ಅಭಿವೃದ್ಧಿಯಲ್ಲಿ ಕುಂಟಿತಗೊಂಡಿರುವ ಎರಡು ಜಿಲ್ಲೆಗಳು ನಾಗಲೋಟದಿಂದ ಅಭಿವೃದ್ಧಿ ಹೊಂದುವಂತಾಗಲಿ ಎಂಬುದು ಈ ಎರಡು ಜಿಲ್ಲೆಯ ಜನರ ಬಯಕೆ ಎಂದು ಹೇಳಿದ್ದಾರೆ.