ಗ್ರಾಮ ಪಂಚಾಯಿತಿಯಲ್ಲಿ ಕಾನೂನು ಬಾಹಿರವಾಗಿ ಹಾಗೂ ಅಕ್ರಮ ಚಟುವಟಿಕೆಗಳಿಗೆ ಭಾಗಿಯಾದಂತಹ ನಗರಂಗೆರೆ ಗ್ರಾಮ ಪಂಚಾಯಿತಿ ಸದಸ್ಯೆ ಶ್ರೀಮತಿ ಯರ್ರಮ್ಮ ಹಾಗೂ ನಗರಂಗೆರೆ ಮೀನುಗಾರರ ಸಹಕಾರ ಸಂಘದ ನಿಯಮಿತ ಅಧ್ಯಕ್ಷ ಓಬಯ್ಯ ಮೇಲೆ ಸುಮೊಟೋ ಕೇಸ್ ಅಡಿಯಲ್ಲಿ ದೂರು ದಾಖಲಿಸುವಂತೆ ಚಿತ್ರದುರ್ಗ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಇತರ ಅಧಿಕಾರಿಗಳಿಗೆ ಕರ್ನಾಟಕ ರಾಷ್ಟ್ರ ಸಮಿತಿಯ ಕಾರ್ಯಕರ್ತರು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮ ಪಂಚಾಯಿತಿ ಯಲ್ಲಿ ಕಾನೂನುಬಾಹಿರವಾಗಿ ನಗರಂಗೆರೆ ಮೀನುಗಾರರ ಸಹಕಾರ ಸಂಘ ನಿಯಮಿತ ಸಂಘವನ್ನು ಸ್ಥಾಪಿಸಿದ್ದಾರೆ. ಇಲ್ಲಿ ಸಂಘವನ್ನು ಕಾನೂನು ಪ್ರಕಾರ ಸ್ಥಾಪಿಸಿಲ್ಲ ಎಂದು ಹಿಂದಿನಿಂದಲೂ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದೇವೆ. ಆದರೂ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.

ನಗರಂಗೆರೆ ಗ್ರಾಮ ಪಂಚಾಯಿತಿಯ ಪಿಡಿಒರವರು ಮೀನುಗಾರರ ಸಂಘ ಕಾನೂನು ಅಡಿಯಲ್ಲಿ ಮಾನ್ಯತೆ ಪಡೆದಿಲ್ಲ ಎಂದು ಮೀನುಗಾರಿಕೆ ಇಲಾಖೆ ಚಳ್ಳಕೆರೆಯ ಸಹನಿರ್ದೇಶಕರು ಹಾಗೂ ಮೀನುಗಾರಿಕೆ ಇಲಾಖೆಯ ಚಿತ್ರದುರ್ಗದ ನಿರ್ದೇಶಕರಿಗೆ ಸಂಘವನ್ನು ರದ್ದು ಪಡಿಸುವಂತೆ ಕೋರಿ ಪತ್ರ ಬರೆದಿದ್ದಾರೆ. ಹಾಗೂ ಗ್ರಾಮ ಪಂಚಾಯಿತಿಯ ಮಹಿಳಾ ಸದಸ್ಯೆ ಸಂಘ ಸಂಸ್ಥೆಗಳಲ್ಲಿ ಕಾನೂನು ಬಾಹಿರವಾಗಿ ತೊಡಸಿಕೊಂಡಿರುವುದು ಗ್ರಾಮ ಪಂಚಾಯತ್ ಕಾನೂನು ಉಲ್ಲಂಘನೆ ಎನಿಸಿದೆ. ಈ ವಿಚಾರಗಳಿಗೆ ಸಂಬಂಧಿಸಿದಂತೆ ಮೇಲಧಿಕಾರಿಗಳಿಗೆ ಮನವಿ ಪತ್ರ ನೀಡಿ, ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ‘ಈ ದಿನ’ ವರದಿಗೆ ಎಚ್ಚೆತ್ತ ಅಧಿಕಾರಿಗಳು: ಗುಬ್ಬಿಯ ಹಂದಿಜೋಗಿ ಸಮುದಾಯದ ವಸತಿ ಪ್ರದೇಶಕ್ಕೆ ಭೇಟಿ
ಮನವಿಯ ವೇಳೆ ಜಿಲ್ಲಾಧ್ಯಕ್ಷರಾದಂತಹ ಎನ್.ಟಿ ನಾಗರೆಡ್ಡಿ ಬೇಡರೆಡ್ಡಿಹಳ್ಳಿ, ಬಾಲರಾಜ್ ಎಸ್, ಪ್ರಧಾನ ಕಾರ್ಯದರ್ಶಿ ಮಹೇಶ್, ಯುವ ಘಟಕದ ಪ್ರಧಾನ ಕಾರ್ಯದರ್ಶಿ ಮಣಿಕಂಠ ಎಸ್ ಹಾಗೂ ಮತ್ತಿತರರು ಹಾಜರಿದ್ದರು.
