ಕೂಡ್ಲಿಗಿ ಕ್ಷೇತ್ರದ ಶಾಸಕ ಎನ್ ಟಿ ಶ್ರೀನಿವಾಸ್ ಅವರು, ಗುಡೇಕೋಟೆ, ಹೊಸಹಳ್ಳಿ, ಕೂಡ್ಲಿಗಿ ಹೋಬಳಿ ವ್ಯಾಪ್ತಿಗಳ ಸಾರ್ವಜನಿಕರ ಕುಂದು ಕೊರತೆ ಆಲಿಸಿ ಪಕ್ಷದ ಕಾರ್ಯಕರ್ತದ ಅಹವಾಲುಗಳನ್ನು ಸ್ವೀಕರಿಸಿದರು.
ಪಟ್ಟಣದಲ್ಲಿ ಮಾ.19ರಂದು ಜರುಗಿದ್ದ ಅಗ್ನಿ ಅವಘಡದಲ್ಲಿ ನಷ್ಟಕ್ಕೀಡಾಗಿದ್ದ ರೈತನ ಕುಟುಂಬಸ್ಥರು ಶಾಸಕರನ್ನು ಸಂಪರ್ಕಿಸಿ ಪರಿಹಾರಕ್ಕಾಗಿ ಮನವಿ ಮಾಡಿದರು. ಅವರ ಮನವಿ ಸ್ವೀಕರಿಸಿ ಅಹವಾಲು ಆಲಿಸಿದ ಅವರು, ಸಂಬಂಧಿಸಿದ ಇಲಾಖೆಗೆ ಶಿಫಾರಸ್ಸು ಮಾಡಲಾಗುವುದೆಂದು ಭರವಸೆ ನೀಡಿದರು. ವೈಯಕ್ತಿಕವಾಗಿ ತುರ್ತು ಹಣದ ನೆರವು ನೀಡಿ ಸಂತೈಸಿದರು.
ಬಳಿಕ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚೆ ನಡೆಸಿದರು. ಕರ್ತವ್ಯದಲ್ಲಿ ಸಮನ್ವಯ ಸಾಧಿಸಿಕೊಂಡು ಸೇವೆಯಲ್ಲಿ ಸಮರ್ಪಕತೆ ಕಾಪಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ: ವಿಜಯನಗರ | ಕೂಡ್ಲಿಗಿ ಬಳಿ ಶಾಲಾ ವಾಹನ ಡಿಕ್ಕಿ; ಶಿಕ್ಷಕ ಮೃತ್ಯು
ಕುಂದು ಕೊರತೆ ಸಭೆಯಲ್ಲಿ ತಹಶೀಲ್ದಾರ್ ವಿ ಕೆ ನೇತ್ರಾವತಿ, ಡಿವೈಎಸ್‌ಪಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನಂಜಪ್ಪ, ಹೊಸಹಳ್ಳಿ ಗುಡೇಕೋಟೆ ಹೋಬಳಿಯ ವಿವಿಧ ಮುಖಂಡರು, ಸಾರ್ವಜನಿಕರು ರೈತರು ಪಕ್ಷದ ಮುಖಂಡರು ಕಾರ್ಯಕರ್ತರು, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ ಸೇರಿದಂತೆ ಕ್ಷೇತ್ರದ ಜನಪ್ರತಿನಿಧಿಗಳು, ಮುಖಂಡರಾದ ಗುರುಸಿದ್ದನಗೌಡ, ತಾಪಂ ನಿವೃತ್ತ ಅಧಿಕಾರಿ ಜಿ.ಎಮ್.ಬಸಣ್ಣ, ನರಸಿಂಹಗಿರಿ ವೆಂಕಟೇಶ ಸೇರಿದಂತೆ ಅನೇಕರು ಇದ್ದರು.