ಕುವೆಂಪು ರಾಮಾಯಣದ ನೋವಿನ ಪಾತ್ರಗಳಿಗೆ ತಮ್ಮ ಕೃತಿಗಳ ಮೂಲಕ ಜೀವ ತುಂಬಿದರು. ಬಾಲ್ಯದಲ್ಲಿ ಶಿಕ್ಷಣ ಪಡೆಯುವಾಗ ಅನೇಕ ಕಷ್ಟಗಳನ್ನು ಅನುಭವಿಸಿ ಬೆಳೆದದ್ದರಿಂದ ಇದು ಸಾಧ್ಯ ಆಯಿತು. ಹಾಗೇ ಅವರು ಏಕಲವ್ಯ, ಶಂಭೂಕನ ಬಗ್ಗೆ ಬರೆದರು. ಹೀಗೆ ಮನುಷ್ಯ ಹುಟ್ಟುವಾಗ ವಿಶ್ವ ಮಾನವ, ಬೆಳೆಯುತ್ತಾ ಬೆಳೆಯುತ್ತಾ ಅಲ್ಪ ಮಾನವನಾಗುತ್ತಾನೆ ಎಂದು ಸರ್ವೋದಯ ಕಾಲೇಜಿನ ಪ್ರಾಂಶುಪಾಲ ಹೆಚ್ ಹನುಮಂತರಾಯಪ್ಪ ತಿಳಿಸಿದರು.

ಅವರು ಮದ್ದೂರು ಪಟ್ಟಣದ ರಾಜ್ಯ ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್ ಕಛೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಜಿಲ್ಲಾ ಗೌರವಾಧ್ಯಕ್ಷ ಹಾಗೂ
ಪುರಸಭಾ ಮಾಜಿ ಅಧ್ಯಕ್ಷರಾದ ಎಂ.ಸಿ. ಬಸವರಾಜು ಮಾತನಾಡಿ, ಕುವೆಂಪು ಒಂದು ಕಡೆ ಹೇಳುತ್ತಾರೆ ಯಾವ ಕಾಲದ ಶಾಸ್ತ್ರ ಏನು ಹೇಳಿದರೇನು, ಎದೆಯ ದನಿಗಳು ಮಿಗಿಲು ಶಾಸ್ತ್ರ ಇರುವುದೇನು ಎಂದಿದ್ದರು. ಹಿಂದಿನ ಋಷಿಗಳು ನಮ್ಮಂತೆ ಮಾನವರು ಎಂದು ಹೇಳುತ್ತಿದ್ದರು. ಮೌಢ್ಯವನ್ನು ಬಿಟ್ಟು ವಿಜ್ಞಾನ ದೀವಿಗೆಯನ್ನು ಹಿಡಿಯ ಬನ್ನಿ ಎಂದು ಸಾರಿದೆಂದರು.

ಕುವೆಂಪು ಒಂದು ಸಾರಿ ಮೈಸೂರಿನಲ್ಲಿ ಭಾಷಣ ಮಾಡುವಾಗ ವಿಚಾರ ಕ್ರಾಂತಿಗೆ ಕೆರೆ ಕೊಟ್ಟರು. ಅವರ ಭಾಷಣ ಮೆಚ್ಚಿ ಎಲ್ಲಾರೂ ಅವರ ಕಾಲಿಗೆ ನಮಸ್ಕಾರ ಮಾಡಿದರು. ಅಗ ಕುವೆಂಪು ಈ ಜನ ನನ್ನನ್ನು ಮೇಲೆ ಎತ್ತಿ ಕುಣಿದಾಡಿಸುತ್ತಾರೆ ಅದರಿಂದ ನಾವು ಸಭೆ ಸಮಾರಂಭಗಳಿಗೆ ಹೋಗುವ ಬದಲು ಕೃತಿಗಳ ಮೂಲಕ ಬರಹ ಬರೆಯುವುದು ಸರಿ ಎಂದು ತೀರ್ಮಾನಕ್ಕೆ ಬಂದರು. ಬರವಣಿಗೆಯ ಕೃತಿ ಶ್ವಾಶ್ವತ ಎಂದು ಹೇಳಿ ಬರವಣಿಗೆ ಹೆಚ್ಚು ಒತ್ತು ನೀಡಿದರು. ಅದರಲ್ಲು ಕುವೆಂಪು ಕನ್ನಡಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ ಅವರ ಕಾವ್ಯ, .ಕೃತಿಗಳಿಗೆ ನೋಬೆಲ್ ಪುರಸ್ಕಾರವೇ ದೊರಬೇಕಿತ್ತು. ಆದರೆ ಅವರು ಶೂದ್ರ ಶಕ್ತಿ ಎಂದು ತಿಳಿದು ಪ್ರಶಸ್ತಿ ಸಿಗದೇ ಇರಲು ಕಾರಣವಾಗಿದೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಶ್ರೀರಂಗಪಟ್ಟಣ | ಕುವೆಂಪು ಕನ್ನಡ ನಾಡಿಗೆ ಕೀರ್ತಿ ಕಳಶ: ಸಿ.ಎಸ್.ವೆಂಕಟೇಶ್
ಕಾರ್ಯಕ್ರಮದಲ್ಲಿ ಸಾಹಿತಿ ಬಿ.ವಿ ಹಳ್ಳಿ ನಾರಾಯಣ್, ನಿವೃತ್ತ ಶಿಕ್ಷಕ ಚನ್ನಪ್ಪ, ಜಿಲ್ಲಾ ಅಧ್ಯಕ್ಷ ಸಿ. ಶಿವಲಿಂಗಯ್ಯ ಮಾತನಾಡಿದರು. ಸಭೆಯಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಅಧ್ಯಕ್ಷ ಡಿ.ಸಿ. ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಟಿ. ಶಿವಕುಮಾರ್, ಪದಾಧಿಕಾರಿಗಳಾದ ಸಿ.ಕೆ. ಶಂಕರಯ್ಯ, ಪುಟ್ಟಸ್ವಾಮಿ, ಶಶಿ ಕುಮಾರ್ ಪಿ, ಮಹದೇವಯ್ಯ, ರಾಚಯ್ಯ, ಪ್ರಿಯಾಂಕ, ರಾಮಲಿಂಗಯ್ಯ, ಇಂತಿಯಾಜ್ ಉಲ್ಲಾ ಖಾನ್, ಮರಿಸ್ವಾಮಿ, ಕೆ.ಎಸ್. ಮಧುಸೂದನ್ ಹಾಗೂ ಇತರರು ಇದ್ದರು.
ಇದನ್ನು ನೋಡಿದ್ದೀರಾ? ಮಂಡ್ಯ | ‘ರಸ್ತೆ ಮೇಲೆ ಓಡಾಡಲು ನಿರ್ಬಂಧ; ಸಂಕಷ್ಟಕ್ಕೆ ಸಿಲುಕಿದ ಕುಟುಂಬ!