ಕನ್ನಡದಲ್ಲಿ ಬರೆದ ಕಾರಣಕ್ಕೆ ಕುವೆಂಪುಗೆ ನೋಬೆಲ್ ಪ್ರಶಸ್ತಿ ಬಂದಿಲ್ಲ: ಎಲ್ ಹನುಮಂತಯ್ಯ

Date:

Advertisements

ಕುವೆಂಪು ಈ ದೇಶದ ಮಹಾನ್ ಜ್ಞಾನಿ. ಕುವೆಂಪು ಅವರ ಒಂದೊಂದು ಸಾಲುಗಳು ಮಹಾಕಾವ್ಯಗಳಾಗಿದ್ದವು. ಕುವೆಂಪು ಅವರು ಕನ್ನಡದಲ್ಲಿ ಬರೆದ ಕಾರಣಕ್ಕಾಗಿ ಅವರಿಗೆ ನೋಬೆಲ್ ಪ್ರಶಸ್ತಿ ಬಂದಿಲ್ಲ. ನೋಬೆಲ್ ಪ್ರಶಸ್ತಿ ಪಡೆಯುವ ಎಲ್ಲ ಅರ್ಹತೆ ಕುವೆಂಪು ಅವರಲ್ಲಿತ್ತು ಎಂದು ರಾಜ್ಯಸಭಾ ಸದಸ್ಯ, ಕವಿ ಡಾ. ಎಲ್ ಹನುಮಂತಯ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಕನ್ನಡ ಜಾಣಜಾಣೆಯರ ವೇದಿಕೆ ಆಯೋಜಿಸಿದ್ದ ‘ವಿಶ್ವಮಾನವೋತ್ಸವ – ಕಾಂತ್ರಿ ಕವಿಗೆ 120’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಕುವೆಂಪು ಅವರು ಯಾವ ವಿಚಾರಗಳನ್ನು ಎದುರುಗೊಂಡರು ಎಂಬುದನ್ನು ನಾವು ನೋಡಬೇಕು. ಲೇಖಕ ತಾನು ಬರೆಯುವಾಗ ಯಾವ ವಿಷಯಗಳು, ಸಮಸ್ಯೆಗಳನ್ನ ಎದುರುಗೊಳ್ಳುತ್ತಾರೆ ಎಂಬುದು ಮುಖ್ಯ. ಆ ರೀತಿಯಲ್ಲಿ ವಿಭಿನ್ನವಾಗಿ ಹಲವು ವಿಚಾರಗಳನ್ನು ಎದುರುಗೊಂಡವರು ಕುವೆಂಪು” ಎಂದು ಹೇಳಿದರು.

“ಕುವೆಂಪು ಅವರ ಭಾಷಣ ಕೇಳಲು ನೂರಾರು ಕಿ.ಮೀ.ಗಳಿಂದ ಜನರು ಬರುತ್ತಿದ್ದರು. ಕುವೆಂಪು ಅವರಿಗೆ ನಮ್ಮ ಮುಂದೆ ಕುಳಿತಿರುವ ಜನರಿಗೆ ಯಾವ ವಿಚಾರಗಳನ್ನು ತಿಳಿಸಬೇಕೆಂಬುದು ಗೊತ್ತಿತ್ತು. ನೂರು ದೇವತೆಯ ನೂಕಾಚೆ ದೂರ, ಭಾರತಾಂಬೆಯ ಪೂಜಿಸುವ ಬಾರ’ ಎಂದಿದ್ದ ಕುವೆಂಪು, ದೇಶಕಟ್ಟುವುದೇ ನಿಜವಾದ ಪೂಜೆ ಎಂದಿದ್ದರು. ನೂರಾರು ದೇವರುಗಳನ್ನು ನಿರಾಕರಣೆ ಮಾಡಿ ಎಂದು ಕುವೆಂಪು ಹೇಳಿದ್ದರು. ಅಂತಹ ಹೇಳಿಕೆ ಕೊಡಲು ಭಾರೀ ಧೈರ್ಯಬೇಕು. ಕುವೆಂಪು ಅವರು ಹುಸಿ ಆಧ್ಯಾತ್ಮವನ್ನು ಎಂದೂ ನಂಬಿರಲಿಲ್ಲ. ಅವರಿಗೆ ಅನುಭವ, ಪ್ರಾಮಾಣಿಕತೆ, ವಿಚಾರವಾದವೇ ಭಕ್ತಿಯಾಗಿತ್ತು” ಎಂದು ತಿಳಿಸಿದರು.

Advertisements

“ಕುವೆಂಪು ಅವರು ಮಂತ್ರಮಾಂಗಲ್ಯವನ್ನು ಹುಟ್ಟು ಹಾಕಿದ್ದು, ಧರ್ಮ ನಿರಪೇಕ್ಷತೆಯಿಂದ. ಬಹುಸಂಖ್ಯಾತರು ಯಾವುದರಿಂದ ಬದುಕಲು ಸಾಧ್ಯ ಎಂದು ಕುವೆಂಪು ಚಿಂತಿಸುತ್ತಿದ್ದರು. ಎಲ್ಲರೂ ಸಮಸ್ಯದಿಂದ ಬದುಕುವ ಧರ್ಮ ಬೇಕು. ಹಿಂಸೆ ಹರಡುವ ದೇಶವಲ್ಲ ಎಂಬುದು ಅವರ ಚಿಂತನೆಯಾಗಿತ್ತು” ಎಂದು ತಿಳಿಸಿದರು.

“ಬುದ್ಧ ಕುವೆಂಪು ಅವರಷ್ಟು ಮಾತುಗಾರನಲ್ಲ. ದೇವರ ಬಗ್ಗೆ ಬುದ್ಧನನ್ನು ಕೇಳಿದಾಗ, ‘ನಾನು ನೋಡದವರ ಬಗ್ಗೆ ನಾನು ಮಾತನಾಡುವುದಿಲ್ಲ’ ಎಂದಿದ್ದರು. ಆದರೆ, ಕುವೆಂಪು, ‘ಆ ದೇವರನ್ನೆಲ್ಲ ತಿರಸ್ಕಾರ ಮಾಡಿ’ ಎಂದಿದ್ದರು.ಅಂಬೇಡ್ಕರ್ ಎಲ್ಲ ಧರ್ಮಗಳನ್ನು ಅಧ್ಯಯನ ಮಾಡಿ, ಭಾರತದಂತಹ ದೇಶದಲ್ಲಿ ಧರ್ಮ ಅನಿವಾರ್ಯ ಎಂದಿದ್ದರು. ಮಾರ್ಕ್ಸ್‌ ‘ಧರ್ಮ ಅಫೀಮು’ ಎಂದಿದ್ದರು. ಅದರೆ, ಮಾರ್ಕ್ಸ್‌ ಅನುಯಾಯಿಗಳಾದ ಕಾರ್ಮಿಕರ ಮುಖಂಡರು ಮನೆಯಲ್ಲಿ ದೇವರನ್ನು ಪೂಜಿಸುತ್ತಿದ್ದರು. ಅವರಿಗೆ ಮಾರ್ಕ್‌ ಹೇಳಿದ ಮಾತು ಅರ್ಥವೇ ಆಗಲಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಮನುಷ್ಯಕುಲದ ದೊಡ್ಡ ಸಮುದಾಯವನ್ನ ಶೂದ್ರರು ಎನ್ನುತ್ತೇವೆ. ಈ ಶೂದ್ರರಲ್ಲಿ ದಲಿತರಿಲ್ಲ. ದಲಿತರು ಪಂಚಮರಾಗಿದ್ದರು. ಭಾರತದಲ್ಲಿ 60% ಶೂದ್ರರಿದ್ದಾರೆ. ಅವರು ಅತ್ತ ವೃತ್ತಿಯೂ ಕಾಣದೆ, ಇತ್ತ ಪಂಚಮರೂ ಆಗಲಾರದೆ ತ್ರಿಶಂಕು ಸ್ಥಿತಿಯಲ್ಲಿದ್ದರು. ಕುವೆಂಪು ಅವರಿಗೆ ತಾವು ಮಾಡುವ ಪ್ರತಿ ಹೇಳಿಕೆಯ ಬಗ್ಗೆ ಅರಿವಿತ್ತು. ಅಂತಹ ಹೇಳಿಕೆ ನೀಡಲು ಅವರಿಗೆ ಎಂಟೆದೆ ಬೇಕಿತ್ತು. ಅಂತಹ ಮಾತುಗಳನ್ನು ಕುವೆಂಪು ಹೇಳಿದ್ದಾರೆ” ಎಂದರು.

ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಜಾತಿ ದೌರ್ಜನ್ಯ: ದಲಿತ ಯುವತಿ ವಿವಾಹವಾದ ಯುವಕನ ಕುಟುಂಬಕ್ಕೆ ಬಹಿಷ್ಕಾರ

“ಧರ್ಮವನ್ನ ರಕ್ಷಿಸಿದರೆ, ಧರ್ಮ ನಿಮ್ಮನ್ನು ರಕ್ಷಿಸುತ್ತದೆ ಎನ್ನುತ್ತಾರೆ. ದಲಿತರು ಸಾವಿರಾರು ವರ್ಷಗಳಿಂದ ಧರ್ಮ ಪಾಲನೆ ಮಾಡಿದ್ದಾರೆ. ಆದರೆ, ಧರ್ಮ ಯಾವಾಗ ದಲಿತರನ್ನು ರಕ್ಷಿಸಿದೆ. ಸಾವಿರಾರು ವರ್ಷಗಳಿಂದ ದಲಿತರು ಯಾರಿಗೂ ಅನ್ಯಾಯ ಮಾಡಿಲ್ಲ. ಪ್ರಬಲ ಜಾತಿಯವರ ಜೀತ ಮಾಡಿದ್ದಾರೆ. ಆದರೆ, ದಲಿತರಿಗೆ ಏನು ಸಿಕ್ಕದೆ” ಎಂದ ಹನುಮಂತಯ್ಯ ಹೇಳಿದರು.

“ಈ ದೇಶದ ದೊಡ್ಡ ಕಮ್ಯುನಿಸ್ಟ್‌ ನೆಹರು. ಅವರು ಒಂದು ಅಣೆಕಟ್ಟು ಉದ್ಘಾಟಿಸಿ, ನೂರು ದೇವಾಲಯಗಳನ್ನು ತೆರೆದಷ್ಟು ಸಂತೋಷವಾಯಿತು ಎಂದಿದ್ದರು. ಅವರು ತಮ್ಮ ಆನಂದ ಭವನವನ್ನೇ ದೇಶಕ್ಕಾಗಿ ಸರ್ಕಾರಕ್ಕೆ ಕೊಟ್ಟರು. ಅವರನ್ನೇ ಏನು ಮಾಡಿದ್ದಾರೆ ಅಂತ ಕೆಲವರು ಪ್ರಶ್ನಿಸುತ್ತಿದ್ದಾರೆ. ಆ ರೀತಿ ಪ್ರಶ್ನಿಸುತ್ತಿರುವವರು ಯಾರು? ದೇಶಕ್ಕಾಗಿ ಏನು ಮಾಡದವರು. ಯಾವ ತ್ಯಾಗವನ್ನೂ ಮಾಡದವರು” ಎಂದು ಕಿಡಿಕಾರಿದರು.

ಗೋಡೆ ಇದ್ದಲ್ಲಿ ದೇವರ ಫೋಟೋ ಸಂಸ್ಕೃತಿ: ಎಚ್‌.ಆರ್ ಸ್ವಾಮಿ

ಕಾರ್ಯಕ್ರಮದಲ್ಲಿ ಮಾತನಾಡಿದ ಎಚ್.ಆರ್ ಸ್ವಾಮಿ, “ದಲಿತರು ಶೂದ್ರರು ಈಗ ಹೋಮ, ಹವನಗಳಲ್ಲಿ ಟ್ರ್ಯಾಪ್‌ಗೆ ಬಿದ್ದಿದ್ದಾರೆ. ಅವರಿಗಾಗಿ ನಾನಾ ರೀತಿಯ ಪೂಜೆಯ ಪ್ಯಾಕೇಜ್‌ಗಳನ್ನ ನೀಡಲಾಗುತ್ತಿದೆ. ಹಿಂದೆ ಇಂತಹ ಸಂಸ್ಕೃತಿ ಶೂದ್ರರಲ್ಲಿ ಇರಲಿಲ್ಲ. ದೇವರ ಫೋಟೋ ಬಗ್ಗೆ ಹೇಳಿದ್ದ ನಮ್ಮ ತಾತ ‘ನಮ್ಮನೆಗೆ ಗೋಡೆಯೇ ಇರಲಿಲ್ಲ. ಇನ್ನು ದೇವರ ಫೋಟೋ ಎಲ್ಲಿಂದ ತರೋದು’ ಅಂದಿದ್ದರು. ಗೋಡೆ ಇದ್ದಾಗ ಮಾತ್ರ ಫೋಟೋ ಸಂಸ್ಕೃತಿ ಬರುತ್ತದೆ” ಎಂದರು.

“ಕುವೆಂಪು ಅವರನ್ನು ನಾವು ಶಾಲಾ ಮಟ್ಟದಲ್ಲಿಯೇ ವಿದ್ಯಾರ್ಥಿಗಳಿಗೆ ಕಲಿಸಬೇಕು. ಆರ್‌ಎಸ್‌ಎಸ್‌ ಅವರು ಸಾವರ್ಕರ್‌ ಬಗ್ಗೆ ಚಿಕ್ಕಮಕ್ಕಳಲ್ಲೇ ತುಂಬಲು ಅರಂಭಿಸುತ್ತಾರೆ. ನಾವುಗಳು ಕುವೆಂಪು, ಪೆರಿಯಾರ್, ಅಂಬೇಡ್ಕರ್‌ ಅವರ ಬಗ್ಗೆ ಬಾಲ್ಯದಲ್ಲೇ ಮಕ್ಕಳಿಗೆ ತಿಳಿಸಬೇಕು” ಎಂದು ತಿಳಿಸಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ: ಚಲನಚಿತ್ರ ನಿರ್ದೇಶಕಿ ಸುಮನ್ ಕಿತ್ತೂರು

ಪರಿಶಿಷ್ಟ ಜಾತಿ ಒಳಮೀಸಲಾತಿ ವಿಚಾರದಲ್ಲಿ ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ...

ಸಕಲೇಶಪುರ | ಮಿತಿ ಮೀರಿರುವ ಮಾದಕ ವಸ್ತು ಸೇವನೆ ಆಧುನಿಕತೆಗೆ ಮಾರಕವಾಗಿದೆ: ಗಾಂಧಿವಾದಿ ಪ್ರಸನ್ನ

ಮಾದಕ ವಸ್ತು ಮುಕ್ತ ಭಾರತವನ್ನು ಕಟ್ಟುವ ಸಕಲೇಶಪುರದ ಜನತೆಯ ಜತೆಗೆ ನಾನೂ...

ಚಿತ್ರದುರ್ಗ | ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಅನ್ಯಾಯ ಸರಿಪಡಿಸಿ; ಮಹಾನಾಯಕ ದಲಿತ ಸೇನೆ

ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಿ ಸಾಮಾಜಿಕ ನ್ಯಾಯ ಎತ್ತಿ...

Download Eedina App Android / iOS

X