ಸಾಲಿಡಾರಿಟಿ ರಾಜ್ಯಾಧ್ಯಕ್ಷರಾಗಿ ಲಬೀದ್ ಶಾಫಿ ಪುನರಾಯ್ಕೆಯಾಗಿದ್ದಾರೆ. ಸಾಲಿಡಾರಿಟಿ ಮೇಲ್ವಿಚಾರಕ ಡಾ. ಮಹಮ್ಮದ್ ಸಾದ್ ಬೆಲ್ಗಾಮಿ ಅವರ ನೇತೃತ್ವದಲ್ಲಿ ಜೂನ್ 18ರಂದು ನಡೆದ ಸಭೆಯಲಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಅವರು 2021-2023 ರವರೆಗೆ ಎರಡು ವರ್ಷಗಳ ಕಾಲಾವಧಿಯಲ್ಲಿ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಆಲಿಯಾ ಅರೇಬಿಕ್ ಕಾಲೇಜಿನಿಂದ ಧಾರ್ಮಿಕ ಶಿಕ್ಷಣ ಪಡೆದ ಅವರು ಕಲ್ಲಿಕೋಟೆ ವಿಶ್ವವಿದ್ಯಾನಿಲಯದಿಂದ ಎಂಎ, ಬಿಎಡ್ ಪದವಿಯನ್ನು ಪಡೆದಿದ್ದಾರೆ. ಈ ಹಿಂದೆ ಅವರು ಎಸ್‌ಐಒ ರಾಷ್ಟ್ರಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅಕ್ಕಿ ಕೊರತೆ ನೀಗಿಸಲು ಪಂಜಾಬ್ ರಾಜ್ಯ ಸಿದ್ಧವಿದೆ: ಆಪ್ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ
ನೂತನ ಸಲಹಾ ಮಂಡಳಿ ಸದಸ್ಯರಾಗಿ ಮಹಮ್ಮದ್ ಮಾಝ್ ಸಲ್ಮಾನ್ ಮನಿಯಾರ್ ಬೆಂಗಳೂರು, ಮಹಮ್ಮದ್ ದಾನಿಶ್ ಪಾಣೆಮಂಗಳೂರು, ಡಾ. ನಸೀಮ್ ಅಹ್ಮದ್ ಬೆಂಗಳೂರು, ಮಹಮ್ಮದ್ ರಫೀಕ್ ಬೀದರ್, ಹಂಝಾ ಮುಅಝಮ್ ಅಲಿ ಕಲಬುರಗಿ, ಅಲ್ತಾಫ್ ಅಂಜದ್ ಬಸವಕಲ್ಯಾಣ, ಮಹಮ್ಮದ್ ರೆಹಾನ್ ಉಡುಪಿ, ಅಬ್ದುಲ್ ಹಸೀಬ್ ರೋಣ, ಯಾಸೀನ್ ಕೊಡಿಬೆಂಗ್ರೆ, ನಿಹಾಲ್ ಕಿಡಿಯೂರ್, ಮುದಸ್ಸಿರ್ ಖಾನ್ ಹುನ್ಸೂರ್, ಮಹಮ್ಮದ್ ಅಲಿ ಮುರ್ತುಝ ಸಿಂಧನೂರು, ಮಹಮ್ಮದ್ ಫಾರೂಕ್ ತೀರ್ಥಹಳ್ಳಿ, ಹಾರೀಸ್ ಬೆಲ್ಗಾಮಿ ಬೆಂಗಳೂರು, ನಿಜಾಮುದ್ದೀನ್ ದಾವಣಗೆರೆಯಿಂದ ಆಯ್ಕೆಯಾಗಿದ್ದಾರೆ.