ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರ ಗ್ರಾಮದಲ್ಲಿ 1ನೇ ವಾರ್ಡ್ ಸಭೆಯನ್ನು ಗ್ರಾಮದ ದುರ್ಗಮ್ಮ ದೇವಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ದೊಡ್ಡೂರ ಗ್ರಾಮದ ಅಭಿವೃದ್ಧಿ ಅಧಿಕಾರಿ ಮಂಜುನಾಥ ಮಲ್ಲು ಮಾತನಾಡಿ, ಗ್ರಾಮದ ಯುವಕರು, ಹಿರಿಯರೊಂದಿಗೆ ಚರ್ಚಿಸಿ ಗ್ರಾಮದ ಕುಂದು ಕೊರತೆಗಳ ಬಗ್ಗೆ ಮಾಹಿತಿ ಪಡೆದರು.
ಗ್ರಾಮದಲ್ಲಿ ಚರಂಡಿ ನೈರ್ಮಲ್ಯ ಕಾಪಾಡುವುದು, ʼನಮ್ಮ ದಾರಿ, ನಮ್ಮ ಹೊಲದ ಯೋಜನೆಯಲ್ಲಿʼ ಹೊಲಗಳಿಗೆ ಹೋಗುವ ದಾರಿಯನ್ನ ಸ್ವಚ್ಛಗೊಳಿಸುವುದು, ಗ್ರಾಮದ ವೈಯಕ್ತಿಕ ಶೌಚಾಲಯಗಳು, ವೈಯಕ್ತಿಕ ದನದದೊಡ್ಡಿ ಹೀಗೆ ಹಲವಾರು ಫಲಾನುಭವಿಗಳ ಆಯ್ಕೆ ಮಾಡಿ ಪಟ್ಟಿಮಾಡಲಾಯಿತು.
ಇದೆ ಸಂದರ್ಭದಲ್ಲಿ ದೊಡ್ಡೂರ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ರಾಮಯ್ಯ ಗುರುವಿನ, ಅಧ್ಯಕ್ಷ ಮಲ್ಲಪ್ಪ ತೋಟದ, ಗ್ರಾಮ ಪಂಚಾಯಿತಿಯ ಸದಸ್ಯರಾದ ನಾನಪ್ಪ ಲಮಾಣಿಯವರು, ಜಯಮ್ಮ ಮಣ್ಣಮ್ಮನವರ, ದೇವಕ್ಕ ಭಜಕ್ಕನವ, ಈ ವಾರ್ಡ್ ಸಭೆಯ ಅಧ್ಯಕ್ಷತೆಯನ್ನು ನಿಂಗಪ್ಪ ಬಂಕಾಪೂರ ಬಹಿಸಿದ್ದರು, ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಸಭೆಯಲ್ಲಿ ಭಾಗವಹಿಸಿದ್ದರು.