ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನೂತನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಾಲ್‌ಸಾಬ್ ಪೀರಾಪುರ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು.
ಲಾಲ್‌ಸಾಬ್ ಪೀರಾಪುರ ಅವರು ಮೂಲತಃ ಸುರಪುರ ತಾಲೂಕಿನವರು ಆಗಿದ್ದು, ಈ ಹಿಂದೆ ಸುರಪುರ ತಾಲ್ಲೂಕಿನ ಸಿಡಿಪಿಒ ಆಗಿ ನಾಲ್ಕು ವರ್ಷ ಸೇವೆ ಸಲ್ಲಿಸಿ ನಂತರ ಯಾದಗಿರಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ತದನಂತರ ಬಳ್ಳಾರಿಯ ಸಂಡೂರು ತಾಲ್ಲೂಕಿಗೆ ವರ್ಗಾವಣೆಯಾಗಿದ್ದರು.
ಸಂಡೂರು ತಾಲ್ಲೂಕಿನಿಂದ ಪುನಃ ಸುರಪುರ ತಾಲ್ಲೂಕಿಗೆ ಈಚೆಗೆ ವರ್ಗಾವಣೆಗೊಂಡಿದ್ದು, ನೂತನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಾಲ್‌ಸಾಬ್ ಅವರಿಗೆ ಇಲಾಖೆಯ ಮೇಲ್ವಿಚಾರಕಿಯರು ಹಾಗೂ ಸಿಬ್ಬಂದಿ ಗುರುವಾರ ಸನ್ಮಾನಿಸಿದರು.
ಇದನ್ನೂ ಓದಿ : ಕಲಬುರಗಿ | ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದ ಪತ್ನಿ
ಸಿಬಂದ್ದಿಗಳಾದ ಗುರುದೇವಿ ಹಿರೇಮಠ, ಪದ್ಮಾವತಿ, ಡಿ.ನಾಯಕ, ಪವನಕುಮಾರ, ಸಾವಿತ್ರಿ ಗಾಳಿ, ಸುನೀತಾ, ಭೀಮಾಶಂಕರ ನಾಯಕ, ಮಹ್ಮದ್, ಹರೀಶ್ ಜೇವರ್ಗಿ ಸೇರಿದಂತೆ ಮತ್ತಿತರರಿದ್ದರು.