ಜಮೀನಿನ ವಿಷಯದಲ್ಲಿ ಹಲವು ವರ್ಷಗಳಿಂದ ಬೆಳೆದಿದ್ದ ವೈಷಮ್ಯ ಕೊಲೆಯಲ್ಲಿ ಅಂತ್ಯವಾದ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನಲ್ಲಿ ಶುಕ್ರವಾರ ರಂದು ನಡೆದಿದೆ.
ನರಸಿಂಹುಲು ಜಲ್ಲ (52) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಗುರುಮಠಕಲ್ ತಾಲೂಕಿನ ಚಂಡರಕಿ ಗ್ರಾಮದವರಾದ ನರಸಿಂಹುಲು ಅವರನ್ನು ಅದೇ ಗ್ರಾಮದ ಯುವಕ ರಮೇಶ ನರಸಪ್ಪ ತೂಮು (23) ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ.
ಗುರುಮಠಕಲ್-ಚಂಡರಕಿ ರಸ್ತೆಯಲ್ಲಿ ಘಟನೆ ಜರುಗಿದ್ದು, ಮೃತ ನರಸಿಂಹುಲು ಜಲ್ಲನನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.