ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮಂಗಳವಾರ ಮುಂಜಾನೆ ಚಿರತೆಯೊಂದು ಕಾಣಿಸಿಕೊಂಡಿದೆ. ಈ ಬೆನ್ನಲ್ಲೇ ಸಂಸ್ಥೆಯು ಇಂದು (ಡಿಸೆಂಬರ್ 31) ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಘೋಷಣೆ ಮಾಡಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗವು ಸಿಬ್ಬಂದಿಗಳಿಗೆ ಮಾಹಿತಿ ನೀಡಿದೆ. “ಆತ್ಮೀಯ ಇನ್ಫೋಶಿಯನ್‌ಗಳೇ, ಇಂದು ಮೈಸೂರು ಕ್ಯಾಂಪಸ್‌ನಲ್ಲಿ ಕಾಡು ಪ್ರಾಣಿ ಕಾಣಿಸಿಕೊಂಡಿದೆ. ಕಾರ್ಯಪಡೆಯ ಸಹಯೋಗದೊಂದಿಗೆ ಕ್ಯಾಂಪಸ್ ಸುರಕ್ಷತೆಗಾಗಿ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ” ಎಂದು ತಿಳಿಸಿದೆ.
ಇದನ್ನು ಓದಿದ್ದೀರಾ? ಚಿರತೆ ಹಿಡಿಯಲು ‘ಸೊಳ್ಳೆ ಪರದೆ’ ಜೊತೆ ಕಾಡಿಗೆ ಹೊರಟ ಬಿಜೆಪಿ ಮಾಜಿ ಶಾಸಕ; ವಿಡಿಯೋ ವೈರಲ್
ವರದಿ ಪ್ರಕಾರ, ಕ್ಯಾಂಪಸ್‌ಗೆ ಪ್ರವೇಶವನ್ನು ನಿರ್ಬಂಧಿಸುವಂತೆ ಇನ್ಫೋಸಿಸ್ ಕ್ಯಾಂಪಸ್‌ನ ಭದ್ರತಾ ತಂಡಕ್ಕೆ ಸೂಚಿಸಿದೆ. “ದಯವಿಟ್ಟು ಇಂದು (ಡಿಸೆಂಬರ್ 31) ಕ್ಯಾಂಪಸ್‌ಗೆ ಪ್ರವೇಶಿಸಬೇಡಿ” ಎಂದು ನೋಟಿಸ್ ಹಾಕಲಾಗಿದೆ.
ನಸುಕಿನ 2 ಗಂಟೆ ಸುಮಾರಿಗೆ ಸಿಸಿಟಿವಿ ದೃಶ್ಯಾವಳಿಯಲ್ಲಿ ಚಿರತೆ ಓಡಾಟ ಕಂಡುಬಂದಿದೆ. ಕೆಲವೇ ಕ್ಷಣದಲ್ಲಿ ಚಿರತೆ ಸೆರೆಹಿಡಿಯಲು ತಂಡವನ್ನು ನಿಯೋಜಿಸಲಾಗಿದೆ. ಶೋಧ ಕಾರ್ಯಾಚರಣೆ ಆರಂಭವಾಗಿದೆ.
ಈ ಬಗ್ಗೆ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಐಬಿ ಪ್ರಭುಗೌಡ, “ಬೆಳಿಗ್ಗೆ 2 ಗಂಟೆ ಸುಮಾರಿಗೆ ಚಿರತೆ ಸಿಸಿಟಿವಿಯಲ್ಲಿ ಕಾಣಿಸಿಕೊಂಡಿದೆ. ನಮ್ಮ ತಂಡವು 4 ಗಂಟೆಗೆ ಸ್ಥಳಕ್ಕೆ ತಲುಪಿ ತಕ್ಷಣ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಗುಬ್ಬಿ | ಚಿರತೆ ದಾಳಿಗೆ 9 ಕುರಿಗಳ ಬಲಿ : ಆತಂಕದಲ್ಲಿ ಸುರುಗೇನಹಳ್ಳಿ ಗ್ರಾಮಸ್ಥರು.
ಇನ್ನು ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಘೋಷಿಸಲಾಗಿದೆ. ಆದರೆ ಇನ್ಫೋಸಿಸ್ ಗ್ಲೋಬಲ್ ಎಜುಕೇಶನ್ ಸೆಂಟರ್‌ನ ಶಿಕ್ಷಣಾರ್ಥಿಗಳಿಗೆ ತೊಂದರೆ ಉಂಟಾಗಿದೆ ಎಂದು ಹೇಳಲಾಗಿದೆ. ತರಬೇತಿ ಕಾರ್ಯಕ್ರಮಗಳು, ಮೌಲ್ಯಮಾಪನಗಳನ್ನು ಮುಂದೂಡಲಾಗಿದ್ದು, ಕ್ಯಾಂಪಸ್‌ಗೆ ಬರದಂತೆ ಸೂಚಿಸಲಾಗಿದೆ.
ಇನ್ನು 2011ರಲ್ಲಿಯೂ ಚಿರತೆಯೊಂದು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಕಾಣಿಸಿಕೊಂಡಿತ್ತು. ಹೆಬ್ಬಾಳ ಇಂಡಸ್ಟ್ರಿಯಲ್ ಏರಿಯಾ ಬಳಿ ಚಿರತೆ ಕಾಣಿಸಿಕೊಂಡಿತ್ತು.
