ಅನ್ನ ಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರಕ್ಕೆ ಕಣ್ಣು, ಕಿವಿ ಹಾಗೂ ಹೃದಯವಂತೂ ಇಲ್ಲವೇ ಇಲ್ಲ. ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟುವ ಮಾತು ನಂತರ ಇರಲಿ, ಮೊದಲು ಬಿಜೆಪಿಯ 25 ಸಂಸದರು ಮುಚ್ಚಿದ ಕಣ್ಣು ತೆರೆಯಲಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಟೀಕಿಸಿದರು.
ಬೆಳಗಾವಿಯಲ್ಲಿ ಗುರುವಾರ ಮಾತನಾಡಿದ ಅವರು, “ಒಂದು ವರ್ಷದಲ್ಲಿ ಲೋಕಸಭಾ ಚುನಾವಣೆ ಬರಲಿದೆ. ಚುನಾವಣೆ ಹತ್ತಿರವಾದಂತೆ ಜನರ ಓಲೈಕೆಗೆ ಬಂದೇ ಬರುತ್ತಾರೆ. ಬಿಜೆಪಿಯ ಪಿತೂರಿಯನ್ನು ರಾಜ್ಯದ ಜನತೆ ಅರ್ಥಮಾಡಿಕೊಂಡಿದ್ದಾರೆ. ಚುನಾವಣೆಯಲ್ಲಿ ಉತ್ತರಿಸುತ್ತಾರೆ. ಅಕ್ಕಿ ಕೊಡದೇ ರಾಜ್ಯದ ಬಡವರ ಹೊಟ್ಟೆ ಮೇಲೆ ಕೇಂದ್ರ ಸರ್ಕಾರ ಹೊಡೆಯಲು ಹೊರಟಿದೆ” ಎಂದು ಆರೋಪಿಸಿದರು.
ಸರ್ವರ್ ಸಮಸ್ಯೆ
ಸರ್ವರ್ ಸಮಸ್ಯೆಯಿಂದ ಗೃಹ ಜ್ಯೋತಿ ಯೋಜನೆ ನೋಂದಣಿ ವಿಳಂಬವಾಗುತ್ತಿದೆ. ಸರ್ವರ್ ಗುಣಮಟ್ಟ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುತ್ತೇವೆ ಎಂದು ಇದೇ ವೇಳೆ ತಿಳಿಸಿದರು.