ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಡಾಕುಳಗಿ ಗ್ರಾಮದಲ್ಲಿ ಇಂದು (ಸೆ.05) ಮಂಗಳವಾರ ಬೆಳಗ್ಗೆ 9.11ರ ಸುಮಾರಿಗೆ ಲಘು ಭೂಕಂಪವಾಗಿದೆ.
ಡಾಕುಳಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಿಂದಬಂದಗಿ ಗ್ರಾಮ ಭೂಕಂಪನದ ಕೇಂದ್ರವಾಗಿದ್ದು, ರಿಕ್ಟರ್ ಮಾಪಕದಲ್ಲಿ 2.6ರಷ್ಟು ಕಂಪನದ ತೀವ್ರತೆ ದಾಖಲಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
“ಇದು ಲಘು ಭೂಕಂಪನವಾಗಿದ್ದು, ಸಾರ್ವಜನಿಕರು ಭಯಪಡದಂತೆ” ಜಿಲ್ಲಾಧಿಕಾರಿ ಗೋವಿಂದರಡ್ಡಿ ತಿಳಿಸಿದ್ದಾರೆ.