ಶರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಲಿಂಗನಮಕ್ಕಿ ಅಣೆಕಟ್ಟೆಯ ಹಿನ್ನೀರು ಬರಿದಾಗುತ್ತಿದೆ. ಇನ್ನೂ ಕೆಲವು ದಿನಗಳ ಕಾಲ ಮಳೆಯಾಗದಿದ್ದರೆ, ಇರುವ ನೀರು ಮತ್ತಷ್ಟು ಖಾಲಿಯಾಗಲಿದೆ. ಹೆಚ್ಚು ನೀರಿಲ್ಲದೆ ಅಂಬಾರಗೋಡ್ಲು ಮತ್ತು ಕಳಸವಳ್ಳಿ ನಡುವೆ ಸಂಪರ್ಕಕೊಂಡಿಯಾಗುವ ಲಾಂಚ್‌ಗಳ ಸಂಚಾರಕ್ಕೆ ಸಂಕಷ್ಟ ಎದುರಾಗಿದೆ. ಕಡಿಮೆ ನೀರಿನಲ್ಲಿ ಲಾಂಚ್‌ಗಳು ಸಾಗುವುದರಿಂದ ಅಪಾಯ ಎದುರಾಗಬಹುದು ಎಂಬ ಆತಂಕ ಸ್ಥಳೀಯರಲ್ಲಿ ಮನೆ ಮಾಡಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಅಣೆಕಟ್ಟೆಗೆ ನೀರು ತರುವ ಭಾಗದಲ್ಲಿ ಮಳೆಯಾಗಲಿದ್ದರೆ, ಲಾಂಚ್‌ಗಳ ಸಂಚಾರವನ್ನು ಕಷ್ಟವಾಗುತ್ತದೆ. ನೀರಿನಲ್ಲಿ ಕೆಳಭಾಗದಲ್ಲಿರುವ ಮರದ ದಿಮ್ಮಿಗಳು ಲಾಂಚ್‌ನ ರೇಡರ್‌ಗಳಿಗೆ ಸಕ್ಕಿಕೊಂಡು ಅಪಾಯ ಸಂಭವಿಸಬಹುದು. ಹಾಗಾಗಿ, ಲಾಂಚ್‌ಗಳ ಸಂಚಾರ ನಿಲ್ಲಿಸಬೇಕಾಗುತ್ತದೆ ಎಂದು ಒಳ ಜಲಜಾರಿಗೆ ಮಂಡಳಿಯ ಅಧಿಕಾರಿಗಳು ಹೇಳಿದ್ದಾರೆ.
ನೀರಿಲ್ಲದ ಕಾರಣ ನದಿ ದಡದಿಂದ ಲಾಂಚ್‌ಗಳಿಗೆ ಜನರು ಮತ್ತು ವಾಹನಗಳು ಹತ್ತಲೂ ಕೂಡ ಸಮಸ್ಯೆಯಾಗುತ್ತದೆ. ಆ ರೀತಿ ಸಮಸ್ಯೆಯಾಗಬಾರದು ಎಂದರೆ, ಲಾಂಚ್‌ಗಳ ಬಾಗಿಲುಗಳನ್ನು ನವೀಕರಿಸಬೇಕು. ಅಧಿಕಾರಿಗಳು ಅದಕ್ಕಾಗಿ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಹೇಳಿದ್ದಾರೆ.
ಲಾಂಚ್‌ಗಳ ಸಂಚಾರವನ್ನೇ ನಿಲ್ಲಿಸಿಬಿಟ್ಟರೆ, ಉದ್ಯೋಗಿಗಳು, ಆಸ್ಪತ್ರೆಗೆ ತೆರಳುವ ರೋಗಿಗಳು, ಗರ್ಭಿಣಿಯರು ಸೇರಿದಂತೆ ಹಲವರಿಗೆ ಸಮಸ್ಯೆಯಾಗುತ್ತದೆ ಎಂದು ಉಭಯ ಗ್ರಾಮಗಳ ನಿವಾಸಿಗಳು ಹೇಳಿದ್ದಾರೆ.