ಸಿದ್ದಲಿಂಗಯ್ಯ ಕಾಲದ ಸಾಹಿತ್ಯವು ಸಮಾಜಕ್ಕೆ ಹೇಳಿ ಮಾಡಿಸಿದಂತಿತ್ತು: ಶೂದ್ರ ಶ್ರೀನಿವಾಸ್

Date:

Advertisements

ಸಿದ್ದಲಿಂಗಯ್ಯ ಅವರ ಕಾಲದ ಸಾಹಿತ್ಯವು ಸಮಾಜಕ್ಕೆ ಹೇಳಿ ಮಾಡಿಸಿದಂತಿತ್ತು. ಅವರ ಚಿಂತನೆ, ಬರವಣಿಗೆಗಳು ಸಮಾಜಕ್ಕೆ ಕನ್ನಡಿಯಾಗಿದ್ದವು. ಅಂತಹ ಬರವಣಿಗೆಗಳು ಮತ್ತೆ ಬರಲಾರವು. ಅವರ ಕವಿತೆಗಳ ಮೂಲಕ ಜನ್ನಿ ಸೇರಿದಂತೆ ಹಲವರು ಸಾಮಾಜಿಕ ಹೋರಾಟಗಳಲ್ಲಿ ಹುಟ್ಟಿಕೊಂಡರು ಎಂದು ಲೇಖಕ ಶೂದ್ರ ಶೀನಿವಾಸ್ ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರ ಆಯೋಜಿಸಿದ್ದ ಕವಿ ಸಿದ್ದಲಿಂಗಯ್ಯ ಅವರ 7ನೇ ಜನ್ಮದಿನಾಚರಣೆ ಮತ್ತು ಡಾ. ಎಚ್‌.ಡಿ ಉಮಾಶಂಕರ್ ಸಂಪಾದಿಸಿರುವ ‘ಸುಡುವ ನೆತ್ತಿಯ ಸಿಂಬೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ಹೊಲೆ ಮಾದಿಗರ ಹಾಡು ಸೇರಿದಂತೆ ಸಿದ್ದಲಿಂಗಯ್ಯ ಅವರ ಕವಿತೆಗಳನ್ನು ಪ್ರಕಟಿಸುದ್ದಾಗ ಕೆಲವರು ಆತಂಕವೊಂಡಿದ್ದರು. ಅವುಗಳನ್ನು ಪ್ರೀತಿಯಿಂದ ಸ್ವೀಕರಿಸಿದ್ದೆವು. ಅಗಲೂ ಸಿದ್ದಲಿಂಗಯ್ಯ ಅವರು ತುಂಟತನದಿಂದ ‘ನಿಮಗೇನು ತೊಂದರೆ ಆಗುವುದಿಲ್ಲವೇ’ ಎನ್ನುತ್ತಿದ್ದರು” ಎಂದು ತಿಳಿಸಿದರು.

Advertisements

“ಆ ಕಾಲಘಟ್ಟದಲ್ಲಿ ಭಾರತದಲ್ಲಿಯೇ ಎಲ್ಲೂ ಇಲ್ಲದ ಅಂಬೇಡ್ಕರ್ ಸಂಘಟನೆ ಕರ್ನಾಟಕದಲ್ಲಿದೆ ಅಂತ ಮೇದಾ ಪಾಟ್ಕರ್ ಸೇರಿದಂತೆ ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದರು. ಅಂತಹ ಸಂಘಟನೆ ಹುಟ್ಟಿಕೊಳ್ಳಲು ಕಾರಣರಾದವರಲ್ಲಿ ಸಿದ್ದಲಿಂಗಯ್ಯ ಕೂಡ ಒಬ್ಬರೂ. ಬೂಸಾ ಚಳಿವಳಿಯಲ್ಲಿ ಬಸವಲಿಂಗಪ್ಪ ಅವರ ಪರವಾಗಿ ನಾವೆಲ್ಲವರೂ ನಿಂತಿದ್ದೆವು. ಅದಾಗ್ಯೂ, ಬಸವಲಿಂಗಪ್ಪ ಅವರ ಮಿತಿಗಳ ಬಗ್ಗೆಯೂ ನಾವು ವಿಮರ್ಷೆ ಮಾಡಿ ಬರೆದಿದ್ದೆವು” ಎಂದು ತಿಳಿಸಿದರು.

“ಮಾರ್ಕ್ಸ್‌ವಾದಿಗಳು, ಕಮ್ಯುನಿಷ್ಟ್‌ಗಳು ಎಲ್ಲಿ ತಪ್ಪು ಮಾಡ್ತಿದ್ದಾರೆ ಅಂತ ಸಿದ್ದಲಿಂಗಯ್ಯ ಹೇಳುತ್ತಿದ್ದರು. ಎಲ್ಲ ಸಮುದಾಯದವರನ್ನು ಭೇಟಿ ಮಾಡಿ, ಸಾಕಷ್ಟು ವಿಚಾರಗಳನ್ನು ಚರ್ಚಿಸುತ್ತಿದ್ದರು. ಪಾಂಡಿಚೇರಿಯ ಕೊಳಚೆ ಪ್ರದೇಶದಲ್ಲಿ ಚಾಪೆ ಹಾಕಿಕೊಂಡು, ನಕ್ಷತ್ರಗಳ ಬೆಳಕಿನಲ್ಲಿ ನಮ್ಮ ಮಾತುಗಳು ಸಾಗುತ್ತಿದ್ದವು. ಬೆಂಗಳೂರಿನ ಸ್ಲಂಗಳಲ್ಲಿ ಮಕ್ಕಳಿಗೆ ಡಿ.ಆರ್ ನಾಗರಾಜ್, ನಾನು, ಸಿದ್ದಲಿಂಗಯ್ಯ ಪಾಠ ಮಾಡುತ್ತಿದ್ದೆವು. ಬನಶಂಕರಿಯ ಅತ್ಯಂತ ದೊಡ್ಡ ಸ್ಲಂನಲ್ಲಿ ನಾವು ಪಾಠ ಮಾಡುತ್ತಿದ್ದೆವು” ಎಂದು ತಿಳಿಸಿದರು.

ಸಿದ್ದಲಿಂಗಯ್ಯ

“ಲಂಕೇಶ್ ಅವರ ಕಚೇರಿಯಲ್ಲಿ ಸಿದ್ದಲಿಂಗಯ್ಯ ಮಾತನಾಡಲು ಅರಂಭಿಸಿದರೆ, ಉಳಿದವರೆಲ್ಲ ಮೌನವಾಗಿಬಿಡುತ್ತಿದ್ದರು. ಅಷ್ಟೊಂದು ಗಂಭೀರ ವಿಚಾರಗಳ ಬಗ್ಗೆ ತುಂಟತನ, ವ್ಯಂಗ್ಯಗಳ ಮೂಲಕ ಮಾತನಾಡುತ್ತಿದ್ದರು. ಅವರು ಅನಗತ್ಯವಾಗಿ ಯಾವುದನ್ನೂ ಮಾತನಾಡುತ್ತಿರಲಿಲ್ಲ” ಎಂದರು.

“ದಲಿತ ಚಳುವಳಿಯ ಸಂದರ್ಭದಲ್ಲಿ ಡಿಎಸ್‌ಎಸ್‌ ಯಾಕೆ ಬೇಕಾಗಿದೆ. ಅದರ ತುರ್ತುಗಳ ಬಗ್ಗೆ ಚರ್ಚಿಸುತ್ತಿದ್ದೆವು. ಪೆರಿಯಾರ್ ಹೋರಾಟಗಳಲ್ಲಿ ಭಾಗಿಯಾಗಿದ್ದೆವು. ನಮ್ಮ ಮನೆಗೆ ಸಿದ್ದಲಿಂಗಯ್ಯ ಬಂದಾಗ, ‘ದಲಿತ ಹುಡುಗ ಅಡುಗೆ ಮನೆಯಲ್ಲಿ ಊಟಕ್ಕೆ ಕುಳಿತಿದ್ದಾನೆ’ ಅಂತ ಊರಲ್ಲೆಲ್ಲ ಗೊಳ್ಳೆಬ್ಬಿಸಿದ್ದರು. ಆಗ ನಮ್ಮ ದೊಡ್ಡಪ್ಪ, ‘ಆತ ನಮ್ಮನೆ ಹುಡುಗ, ಆತ ಊಟ ಮಾಡುತ್ತಿದ್ದಾನೆ. ಆತನನ್ನು ಎಬ್ಬಿಸುವಷ್ಟು ಕಟುಕ ನಾನಲ್ಲ’ ಎಂದುತ್ತಿರಿಸಿದ್ದರು. ಆ ರೀತಿಯಲ್ಲಿ ಸಿದ್ದಲಿಂಗಯ್ಯ ನಮ್ಮ ಮನೆ-ಮನವನ್ನು ಆವರಿಸಿದ್ದರು” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಾಹಿತಿ ಡಾ. ಕರಿಗೌಡ ಬೀಚನಹಳ್ಳಿ, “ಸಿದ್ದಲಿಂಗಯ್ಯರ ಬ್ಯಾಗ್‌ನಲ್ಲಿ ಲೆನಿನ್, ಮಾರ್ಕ್ಸ್‌, ಸ್ಟ್ಯಾಲಿನ್, ಅಂಬೇಡರ್, ಲೋಹಿಯಾ ಅವರ ಪುಸ್ತಕಗಳು ಇರುತ್ತಿದ್ದವು. ಆ ಯಾವ ಪಠ್ಯಗಳು ನಮ್ಮ ಪಾಠದಲ್ಲಿರುತ್ತಿರಲಿಲ್ಲ. ಆದರೆ, ಅವರು ಆ ಪುಸ್ತಕಗಳನ್ನು ಓದುತ್ತಾ, ತಮ್ಮನ್ನು ತಾವು ಸಾಮಾಜಿಕವಾಗಿ ತೊಡಗಿಸಿಕೊಂಡರು. ಕವಿತೆಗಳ ರೂಪದಲ್ಲಿ ತಮ್ಮೊಳಗಿನ ಪ್ರತಿರೋಧವನ್ನು ವ್ಯಕ್ತಡಿಸಿದ್ದರು” ಎಂದು ಹೇಳಿದರು.

ಕರಿಗೌಡ

“ಸಿದ್ದಲಿಂಗಯ್ಯ ಎಲ್ಲಿಗೇ ಹೋದರೂ, ಅವರು ಪುಸ್ತಕಗಳನ್ನು ಕೊಂಡು ಬರುತ್ತಿದ್ದರು. ನನ್ನ ಬರವಣಿಗೆಯಲ್ಲೂ ಅವರು ಪ್ರೇರಣೆಯಾಗಿದ್ದಾರೆ. ಪ್ರಭಾವ ಬೀರಿದ್ದಾರೆ. ಅವರು ಹರಿಶ್ಚಂದ್ರ ಘಾಟ್‌ನಲ್ಲಿ ಕುಳಿತು ಕವಿತೆಗಳನ್ನು ಬರೆಯುತ್ತಿದ್ದರು” ಎಂದು ತಿಳಿಸಿದರು.

“ಶ್ರೀರಾಮ್ ಪುರ ಮತ್ತು ಸ್ವತಂತ್ರ್ಯ ನಗರದಲ್ಲಿ ಸಂಜೆ ಪಾಠ ಶಾಲೆಗಳನ್ನ ತೆರೆದಿದ್ದರು. ನಾವು ಅಲ್ಲಿ ಪಾಠ ಮಾಡುತ್ತಿದ್ದೆವು. ಸಿದ್ದಲಿಂಗಯ್ಯ 12 ವರ್ಷ ವಿಧಾನಸಭಾ ಸದಸ್ಯರಾಗಿದ್ದರು. ಅವರು ತಮ್ಮ ಸಿದ್ದಾಂತದ ಜೊತೆ ರಾಜಿ ಮಾಡಿಕೊಂಡಿದ್ದರೆ, ಬಂಗಲೆ ಕಟ್ಟಬಹುದಿತ್ತು. ಆದರೆ, ಅವರು ಚಳುವಳಿಯಲ್ಲಿ ಪ್ರಮಾಣಿಕವಾಗಿದ್ದರು. ಹಾಗೆಯೇ ಬದುಕಿದರು” ಎಂದರು.

“ಜಾತಿ ವಿನಾಶಕ್ಕಾಗಿ ನಿಚ್ಚಳ ಹೋರಾಟ ಮಾಡಿದರು. ಊರುಕೇರಿ ಕೃತಿಯಲ್ಲಿ ಜಾತಿ ಬಗ್ಗೆ ಎಳೆಯಾಗಿ ವಿವರಿಸಿದರು. ಸಿದ್ದಲಿಂಗಯ್ಯರ ಕವಿತೆಗಳನ್ನು ಶೂದ್ರ ಪತ್ರಿಕೆಯು ‘ಹೊಲೆ ಮಾದಿಗರ ಹಾಡು’ ಎಂಬ  ಟೈಟಲ್ ಇಟ್ಟು ಪ್ರಕಟಿಸಿತು. ಆ ಟೈಟಲ್‌ ನೋಡಿಯೇ ಮೇಲ್ಜಾತಿಯವರು ಪುಸ್ತಕ ಮುಟ್ಟೋದಕ್ಕೆ ಹಿಂದೇಟು ಹಾಕುತ್ತಿದ್ದರು. ನಾನಾ ಅಂಗಡಿಗಳಲ್ಲಿ ಮಾರಾಟಕ್ಕೂ ತೆಗೆದುಕೊಳ್ಳುತ್ತಿರಲಿಲ್ಲ. ಅಂತಹ ಸವಾಲುಗಳ ನಡುವೆ ಹಲವು ಉಪಾಯ ಮಾಡಿ, ಅವುಗಳನ್ನು ಮಾರಾಟ ಮಾಡಿದ್ದೆವು” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್‌ಸಿ/ಎಸ್‌ಟಿ ನೌಕರರ ಸಮನ್ವಯ ಸಮಿತಿಯ ಅಧ್ಯಕ್ಷ ಶಿವಶಂಕರ್, ಸಿ ರಮಾಕುಮಾರಿ ಸಿದ್ದಲಿಂಗಯ್ಯ, ಡಾ. ಉಮಾಶಂಕರ್, ಬಿ ಗಂಗಾಧರ್ ಸೇರಿದಂತೆ ಹಲವರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

ಬೆಂಗಳೂರಿನಲ್ಲಿ ಬೈಕ್‌ ಟ್ಯಾಕ್ಸಿ ಪುನರಾರಂಭ; ಸೀಮಿತ ಆ್ಯಪ್‌ಗಳಲ್ಲಿ ಮಾತ್ರ ಲಭ್ಯ

ಬೆಂಗಳೂರಿನಲ್ಲಿ ಗುರುವಾರದಿಂದ (ಆಗಸ್ಟ್‌ 21) ಮತ್ತೆ ಬೈಕ್‌ ಟ್ಯಾಕ್ಸಿ ಸೇವೆಗಳು ಪುನಾರಂಭವಾಗಿವೆ....

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X