ಬೀದರ್‌ | ಸಾಹಿತಿ, ಬರಹಗಾರರು ಓದುಗರಿಗೆ ನಿಷ್ಠುರವಾಗಿರಬೇಕು : ದಿನೇಶ ಅಮೀನ್‌ ಮಟ್ಟು

Date:

Advertisements

ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಸಾಹಿತಿ, ಬರಹಗಾರರಲ್ಲಿ ಮಾತ್ರ ಅಲ್ಲದೆ ಪ್ರತಿಯೊಬ್ಬರಲ್ಲೂ ಸಾಮಾಜಿಕ ಜವಾಬ್ದಾರಿ ಇರಬೇಕಾಗುತ್ತದೆ ಎಂದು ಹಿರಿಯ ಪತ್ರಕರ್ತ ದಿನೇಶ ಅಮೀನ್‌ ಮಟ್ಟು ಹೇಳಿದರು.

ಬೀದರ್ ಜಿಲ್ಲಾ‌ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಗರದ ಕನ್ನಡ ಭವನದಲ್ಲಿ ಬುಧವಾರ ಆಯೋಜಿಸಿದ್ದ ʼಸಾಹಿತಿಗಳು ಮತ್ತು ಸಾಮಾಜಿಕ ಜವಾಬ್ದಾರಿʼ ವಿಶೇಷ ಉಪನ್ಯಾಸ ಉದ್ಘಾಟಿಸಿ ಮಾತನಾಡಿ, ʼಸಾಮಾಜಿಕ ಜವಾಬ್ದಾರಿ ರೈತ, ಕ್ರೀಡೆ, ಸಂಗೀತ, ವಿದ್ಯಾರ್ಥಿ, ಶಿಕ್ಷಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬರಿಗೂ ಸಾಮಾಜಿಕ ಹೊಣೆಗಾರಿಕೆ ಇರಬೇಕುʼ ಎಂದು ಹೇಳಿದರು.

ಸಾಹಿತಿಗಳು ಬರಹ, ಕಥೆ, ಕಾದಂಬರಿ, ಉಪನ್ಯಾಸ ಸೇರಿದಂತೆ ವಿವಿಧ ಪ್ರಕಾರದ ಸೃಜನಶೀಲ ಸಾಹಿತ್ಯದಿಂದ ಸಮಾಜವನ್ನು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಬರಹಗಾರರು ಯಾವಾಗಲೂ ಸತ್ಯವನ್ನು ಪ್ರತಿಪಾದಿಸಬೇಕು, ಸುಳ್ಳು ಬರೆಯುವುದು ಆತ್ಮವಂಚನೆಯಾಗುತ್ತದೆ. ಇತ್ತೀಚಿನ ಬಹುತೇಕ ಸಾಹಿತಿಗಳ ಬದುಕು ಮತ್ತು ಬರಹ ಭಿನ್ನವಾಗಿದೆʼ ಎಂದರು.

Advertisements

ʼಎಲ್ಲ ಸರ್ವಾಧಿಕಾರಿಗಳ, ಬಲಪಂಥೀಯರ ಮೊದಲ ಟಾರ್ಗೆಟ್ ಚಿಂತಕರು, ಸಾಹಿತಿಗಳಾಗಿದ್ದಾರೆ. ಸತ್ಯ ಹೇಳಲು ಪ್ರಯತ್ನಿಸುವವರ ಬಾಯಿ ಮುಚ್ಚಿಸುವ ಕೆಲಸಗಳು ನಡೆಯುತ್ತಿದೆ. ಸಾಮಾಜಿಕ ಜವಾಬ್ದಾರಿಯಿಂದ ಸತ್ಯ ಹೇಳುವರನ್ನು ವರ್ತಮಾನ ಬಹಳ ಕ್ರೂರವಾಗಿ ನಡೆದುಕೊಳ್ಳುತ್ತಿದೆ. ಆದರೂ, ನಮ್ಮ ಇತಿಮಿತಿಯಲ್ಲಿ ಸಮಾಜವನ್ನು ಎಚ್ಚರಗೊಳಿಸುವ ಕೆಲಸ ಮುಂದುವರೆಸಬೇಕುʼ ಎಂದು ಸಲಹೆ ನೀಡಿದರು.

ʼಬರಹಗಾರರು ಸಾಹಿತಿಗಳು ಓದುಗರಿಗೆ ನಿಷ್ಠುರವಾಗಿರಬೇಕು. ರಾಜಕಾರಣಿಗಳು ಕೂಡ ಮತದಾರರಿಗೆ ನಿಷ್ಠುರವಾಗಿರಬೇಕು. ಆದರೆ, ರಾಜಕಾರಣಿಗಳು ಜನರನ್ನು ಮೂಢರಾಗಿಸಲು ಬಯಸುತ್ತಾರೆ. ಬುದ್ಧ, ಬಸವಣ್ಣ, ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್‌ ಅವರ ಕಾಲದಲ್ಲಿ ಸಾಕ್ಷರತೆ ಪ್ರಮಾಣ ತೀರಾ ಕಡಿಮೆ ಇತ್ತು. ಆದರೂ, ಅವರು ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಗೃತಿ ಮೂಡಿಸಿದ್ದರು. ಇಂದು ಜಾಗೃತಿ ಸಾಧನಗಳ ಕೊರತೆ ಇಲ್ಲ. ಆದರೆ, ಇಚ್ಚಾಶಕ್ತಿ ಕೊರತೆಯಿದೆʼ ಎಂದು ತಿಳಿಸಿದರು.

WhatsApp Image 2024 10 10 at 6.31.23 PM 1

ಗುಲಬರ್ಗಾ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಸಿದ್ದಪ್ಪ ಮೂಲಗೆ ಪ್ರಾಸ್ತಾವಿಕವಾಗಿ ಮಾತನಾಡಿ, ʼಬೀದರ್ ಕ್ರಾಂತಿ ಮತ್ತು ಕಾಯಕ ಚಳುವಳಿಯ ನೆಲ. ಇಲ್ಲಿ ವೈಚಾರಿಕತೆ ಪ್ರಜ್ಞೆಯ ಜನರಿದ್ದು ನೈತಿಕ ಮೌಲ್ಯಗಳಿವೆ. ಆದರೆ, ಶರಣರ ಹತ್ಯಾಕಾಂಡ ನಡೆಸಿದವರೊಂದಿಗೆ ಸಖ್ಯ ಬೆಳೆಸುತ್ತಿರುವುದರಿಂದ ವೈಚಾರಿಕ ನಿಲುವಿಗೆ ಪೆಟ್ಟು ಬೀಳುತ್ತಿದೆ. ಅನ್ಯ ಜಿಲ್ಲೆಯ ಲೇಖಕರ ಸಾಹಿತ್ಯಕ್ಕೆ ಹೋಲಿಸಿದರೆ ನಮ್ಮ ಭಾಗದಲ್ಲಿ ಗಟ್ಟಿ ಸಾಹಿತ್ಯದ ಕೊರತೆ ಎದ್ದು ಕಾಣುತ್ತಿದೆʼ ಎಂದು ಹೇಳಿದರು.

ಕರ್ನಾಟಕ ಪಿಯು ಕಾಲೇಜಿನ ಪ್ರಾಚಾರ್ಯ ಡಾ.ಬಸವರಾಜ ಬಲ್ಲೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ʼಪ್ರಭುತ್ವದಲ್ಲಿ ಸಾಹಿತಿಗಳು ಮುಕ್ತವಾಗಿ ಬರೆಯುವ ಮೂಲಕ ಜನರ ದನಿಯಾಗಬೇಕು. ಇಂದು ಓಲೈಕೆ ಸಾಹಿತ್ಯ ಎದ್ದು ಕಾಣುತ್ತಿದೆ. ಕೆಟ್ಟ ಸಾಹಿತ್ಯದಿಂದ ಯಾರಿಗೂ ಉಪಯೋಗವಿಲ್ಲ. ಅದರಿಂದ ಸಂಪನ್ಮೂಲ ಹಾಳಾಗುತ್ತದೆʼ ಎಂದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜಾತಿ ಜನಗಣತಿ ಎತ್ತುವ ಹಲವು ಪ್ರಶ್ನೆಗಳು

ಕಾರ್ಯಕ್ರಮದಲ್ಲಿ ಕಸಾಪ ಪದಾಧಿಕಾರಿಗಳು ಸೇರಿದಂತೆ ಸಾಮಾಜಿಕ ಚಿಂತಕರು, ಸಾಹಿತಿಗಳು, ಸಾಹಿತ್ಯಾಸ್ತಕರು ಭಾಗವಹಿಸಿದರು. ಜಿಲ್ಲಾ ಕಸಾಪ ಕೋಶಾಧ್ಯಕ್ಷ ಶಿವಶಂಕರ ಟೋಕರೆ ಸ್ವಾಗತಿಸಿದರು, ಗೌರವ ಕಾರ್ಯದರ್ಶಿ ಪ್ರೊ. ಶಿವಕುಮಾರ ಕಟ್ಟೆ ನಿರೂಪಿಸಿದರು. ಕಸಾಪ ಗೌರವ ಕಾರ್ಯದರ್ಶಿ ಟಿ.ಎಮ್. ಮಚ್ಚೆ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X