ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಗಳಿಸಿದ ಆರೋಪದ ಹಿನ್ನೆಲೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕು ವೈದ್ಯಾಧಿಕಾರಿ ಡಾ.ಆರ್.ವಿ.ನಾಯಕ ಅವರಿಗೆ ಸೇರಿದ ಐದು ಸ್ಥಳಗಳಲ್ಲಿ ಗುರುವಾರ ಲೋಕಾಯುಕ್ತ ದಾಳಿ ಮಾಡಿ ಹಣ, ಮಹತ್ವದ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ.
ಡಾ.ಆರ್.ವಿ. ನಾಯಕ ಅವರು ಸೇವೆ ಸಲ್ಲಿಸುತ್ತಿರುವ ಟಿಎಚ್‌ಒ ಕಚೇರಿ ಹಾಗೂ ಅವರಿಗೆ ಸೇರಿದ ಅದಿತಿ ಹೊಟೇಲ್, ಪೆಟ್ರೋಲ್ ಬಂಕ್, ಖಾಸಗಿ ಆಸ್ಪತ್ರೆ, ಸುರುಪುರ ಮತ್ತು ಕಲಬುರಗಿಯಲ್ಲಿ ಇರುವ ಅವರ ನಿವಾಸ ಸೇರಿ ಐದು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ದಾಳಿ ವೇಳೆ ಡಾ.ನಾಯಕ ಅವರು ಅಂದಾಜು ಒಟ್ಟು 11.5 ಕೋಟಿ ಸ್ಥಿರ ಆಸ್ತಿ ಮೌಲ್ಯ ಹೊಂದಿರುವುದಾಗಿ ತಿಳಿದು ಬಂದಿದೆ.
ಯಾದಗಿರಿ ಲೋಕಾಯುಕ್ತ ಡಿವೈಎಸ್ಪಿ ಜೆ.ಎಚ್.ಇನಾಮದಾರ, ಪಿಎಸ್‌ಐಗಳಾದ ಬಾಬಾಸಾಹೇಬ್ ಪಾಟೇಲ್,ರಾಜಶೇಖರ್ ಹಲಗೋಡಿ,ಸಂತೋಷ ರಾಠೋಡ್, ಸಿದ್ದಯ್ಯ ಬೈರೋಗಿ, ಸಂಗಮೇಶ ಹಾಗೂ ಸಿಬ್ಬಂದಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.
ಈ ಸುದ್ದಿ ಓದಿದ್ದೀರಾ? ಘಟಾನುಘಟಿ ರಾಜಕಾರಣಿಗಳ ಜೈಲಿಗಟ್ಟಿದ ಸಮರ ಸೇನಾನಿ ‘ಎಸ್.ಆರ್. ಹಿರೇಮಠ’ (ಭಾಗ-1)