ಕೊಪ್ಪಳ ತಾಲೂಕಿನ ಮುನೀರಾಬಾದ್ ಬಳಿಯ ತುಂಗಭದ್ರ ನದಿಯ ಬ್ರಿಡ್ಜ್ ಗೆ ಲಾರಿ ಉರುಳಿ ಬಿದ್ದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಬುಧವಾರ ನಡೆದಿದೆ.
ಮೈನ್ಸ್ ತುಂಬಿದ್ದ ಲಾರಿ ನದಿಯ ರಕ್ಷಣಾ ಗೋಡೆಗೆ ಡಿಕ್ಕಿ ಹೊಡೆದು ನದಿಗೆ ಉರುಳಿದೆ. ಅತಿವೇಗವಾಗಿ ಬಂದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಹೋಸಪೇಟೆ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಇರುವ ತುಂಗಭದ್ರಾ ನದಿಯಲ್ಲಿ ನೀರಿಲ್ಲದ ಕಾರಣ ಲಾರಿ ಬಂಡೆಗಳ ಮೇಲೆ ಬೋರಲಾಗಿ ಬಿದ್ದಿದೆ. ಸಾವನಪ್ಪಿದ ಚಾಲಕ ಬಿಹಾರ್ ಮೂಲದವನು ಎಂದು ಪೊಲೀಸರು ತಿಳಿಸಿದ್ದಾರೆ.