ಕನಕಪುರ | ಹೋರಾಟ ಮಾಡುತ್ತಲೇ ಜೀವತೆತ್ತ ಹೆಚ್.ಎಸ್ ಲಿಂಗೇಗೌಡ

Date:

Advertisements

ಹೋರಾಟವೇ ಜೀವನವೆಂದು ಜೀವಿಸಿ, ಹೋರಾಟ ಮಾಡುತ್ತಲೇ ಜೀವತೆತ್ತ ಹೆಚ್.ಎಸ್ ಲಿಂಗೇಗೌಡರ ಜೀವನ ಪ್ರತಿ ಹೋರಾಟಗಾರರಿಗೂ ಆದರ್ಶಮಯವಾಗಿದೆ ಎಂದು ಪ್ರಗತಿಪರ ಸಂಘಟನೆಗಳ ಅಧ್ಯಕ್ಷ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ಕನಕಪುರದ ಚನ್ನಬಸಪ್ಪ ಸರ್ಕಲ್ ಬಳಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಕೆಆರ್‌ಎಸ್ ಪಕ್ಷದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಹುದ್ದೆಗಾಗಿ ವಾಮಮಾರ್ಗದಲ್ಲಿ ಲಾಭಿ ಮಾಡುವ ಇಂದಿನ ಕಾಲದಲ್ಲಿ ಇದ್ದ ಉನ್ನತ ಸರಕಾರಿ ಹುದ್ದೆಯನ್ನೆ ತೊರೆದು ಭ್ರಷ್ಟಾಚಾರದ ವಿರುದ್ದ ಹೋರಾಟ ಮಾಡಿದ ಇತಿಹಾಸ ಬೆರಳೆಣಿಕೆಯಷ್ಟಿದ್ದು ಅಂತಹವರಲ್ಲಿ ಹೆಚ್.ಎಸ್ ಲಿಂಗೇಗೌಡರು ಕೂಡ ಒಬ್ಬರು.

ಭ್ರಷ್ಟಾಚಾರ ಮುಕ್ತ ಕರ್ನಾಟಕದ ಕನಸು ಕಟ್ಟಿ, ಅದಕ್ಕಾಗಿ ಮನಸು ಕೊಟ್ಟು ಹೋರಾಡಿದರು. ಇತರರ ಒಳಿತಿಗಾಗಿ ಜೀವನವನ್ನೇ ಮುಡುಪಾಗಿಟ್ಟ ಲಿಂಗೇಗೌಡರ ದುರಂತ ಸಾವು ಮಾತ್ರ ಇಷ್ಟು ಘೋರವಾಗಿ ಸಂಭವಿಸಿದ್ದು ಮಾತ್ರ ನೋವಿನ ಸಂಗತಿ. ಸರಕಾರ ಕೂಡ ಇಂತಹ ಹೋರಾಟಗಾರರನ್ನು ಕಡೆಗಣಿಸಿದ್ದು ಖಂಡನಿಯ ಎಂದರು.

Advertisements

ಕೆಆರ್‌ಎಸ್ ಪಕ್ಷದ ಸೈನಿಕ ಹಾಗೂ ಜೀವನ ಟ್ರಸ್ಟ್‌ನ ಅಧ್ಯಕ್ಷ ಪ್ರಶಾಂತ್ ಹೊಸದುರ್ಗ ಮಾತನಾಡಿ, ಹೆಚ್.ಎಸ್.ಲಿಂಗೇಗೌಡರು ನಮ್ಮಂತಹ ಅನೇಕ ಯುವಕರಿಗೆ ಪ್ರೇರಕ ಶಕ್ತಿಯಾಗಿದ್ದವರು, ಉಂಡು ಉಟ್ಟು ಹೊರಳಿ ಹೋದರಾಯ್ತೆ ಬದುಕು ಪಾವನ, ಕೊಂಡ ಮೇಲೆ ಮರಳಿ ಕೊಡದೆ ಪೂರ್ಣವೆಂತು ಜೀವನ ಎಂಬ ಆದರ್ಶವ ಕಲಿಸಿಕೊಟ್ಟ ಪೂಜ್ಯನೀಯರು ಎಂದು ನೆನಪಿಸಿಕೊಂಡರು.

ಇದನ್ನು ಓದಿದ್ದೀರಾ? ಮಂಡ್ಯ | ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ನಿಷೇಧ ಸಂವಿಧಾನಕ್ಕೆ ವಿರುದ್ಧ: ಬಿ.ಟಿ.ವಿಶ್ವನಾಥ್

ಮಹಿಳೆಯರ ಮೇಲಾಗುತ್ತಿರುವ ಅತ್ಯಾಚಾರಗಳಿಗೆ ತ್ವರಿತಗತಿಯ ನ್ಯಾಯ ಮತ್ತು ಗರಿಷ್ಠ ಮಟ್ಟದ ಶಿಕ್ಷೆಗಾಗಿ ಆಗ್ರಹಿಸಿ ಮಂಗಳೂರಿನಿಂದ ದೆಹಲಿಯವರೆಗೆ ಪಾದಯಾತ್ರೆ ಕೈಗೊಂಡು ಒಂದು ಉದಾತ್ತ ಆಶಯವನ್ನು ಗುರಿ ಕಾಣಿಸಲು ವಿಧಿ ಬಿಡದ ಕಾರಣ ಗುಜರಾತ್ ನ ಬರುಚ್ ಎಂಬಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸಹ ಹೋರಾಟಗಾರ ಕುಂಞ ಮೂಸಾ ಶರೀಪ್ ಅವರೊಟ್ಟಿಗೆ ಧಾರುಣ ಸಾವು ಕಂಡರು ಎಂದು ತಮ್ಮ ಒಡನಾಟವನ್ನು ನೆನೆದರು.

ಇತರರ ಒಳಿತಿಗಾಗಿ ಬದುಕಿನುದ್ದಕ್ಕೂ ಹೋರಾಡಿದ ಅವರು ಹೋರಾಟದಲ್ಲಿಯೇ ಜೀವ ಬಿಟ್ಟಿದ್ದಾರೆ. ಅವರ ಆಶಯದಂತೆ ಸರಕಾರ ಮಹಿಳೆಯರ ಮೇಲಿನ ಶೋಷಣೆಗೆ ನ್ಯಾಯ ಒದಗಿಸಿದರೆ ಅವರ ಆತ್ಮ ತೃಪ್ತವಾಗುತ್ತದೆ‌. ಆ ದಿಕ್ಕಿನಲ್ಲಿ ರಾಜ್ಯದಲ್ಲಿ ಮಹಿಳೆಯರ ಹಿತಕಾಯಲು ಮಹೋನ್ನತ ಹೋರಾಟಕ್ಕೆ ಎಲ್ಲಾ ಸಂಘಟನೆಗಳು ಒಗ್ಗೂಡಬೇಕಿದೆ ಎಂದು ಹೇಳಿದರು ಆಗ್ರಹಿಸಿದರು.

ಇದನ್ನು ನೋಡಿದ್ದೀರಾ? ಸಾಹಿತ್ಯ ಸಮ್ಮೇಳನದಲ್ಲಿ ನಾನ್ ವೆಜ್ ಇರಲೇಬೇಕಾ?

ಕಸಾಪ ಅಧ್ಯಕ್ಷ ಶಿವಲಿಂಗಯ್ಯ, ಚೀಲೂರು ಮುನಿರಾಜು, ಕಬ್ಬಾಳೇಗೌಡ, PWD ಇಂಜಿನಿಯರ್ ಶಶಿಧರ್, ಕೂ.ಗಿ.ಗಿರಿಯಪ್ಪ, ನೀಲಿ ರಮೇಶ್ , ವೀರೇಶ್ ಹೆಚ್. ಎಸ್ ಲಿಂಗೇಗೌಡರ ಮೇರುಗುಣ ಹಾಗೂ ಆದರ್ಶಮಯ ಜೀವನದ ಗುಣಗಾನ ಮಾಡಿ, ಇಂತಹ ಶ್ರೇಷ್ಠ ಹೋರಾಟಗಾರರ ಸಾವು ನಿಜಕ್ಕೂ ಅನುಮಾನಸ್ಪದವಾಗಿದ್ದು ಈ ಘಟನೆಯ ಕುರಿತು ಸಿಬಿಐ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಸ್ಟುಡಿಯೋ ಚಂದ್ರು, ಭಾಸ್ಕರ್, ನಟರಾಜ್, ಜೀವನ್ ಕೆ.ಆರ್ ಎಸ್ ಪಕ್ಷದ ಶಿವಮ್ಮ. ತಾಮಸಂದ್ರ ಕಿರಣ್, ಶೋಭಾ, ಅಸ್ಗರ್ ಖಾನ್, ಚೀರಣಗುಪ್ಪೆ ರಾಜೇಶ್, ಮಿಲ್ಟ್ರಿ ರಾಮಣ್ಣ, ಮಿಲ್ಟ್ರಿ ದೇವರಾಜು, ಪುಟ್ಟಲಿಂಗಯ್ಯ, ಸಾಸಲಾಪುರ ಜಗದೀಶ್ . ಮತ್ತು ಇತರರು ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X