ಕುಲಾಂತರಿ ತಳಿ, ಬೀಜ ಮತ್ತು ಆಹಾರಗಳನ್ನು ತಿರಸ್ಕರಿಸುವ ನಿಟ್ಟಿನಲ್ಲಿ ದೊಡ್ಡಹೊಸೂರು ಸತ್ಯಾಗ್ರಹದಲ್ಲಿ ಭಾಗವಹಿಸಲು ಬಯಲುಸೀಮೆ ಬೆಳೆಗಾರರ ಸಂಘದ ಸಂಸ್ಥಾಪಕ ಅಧ್ಯಕ್ಷ ಎನ್ ಪಿ ಶಂಕರಯ್ಯ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕುಲಾಂತರಿ ಆಹಾರಗಳು ದೇಶ ಪ್ರವೇಶಿಸುವುದನ್ನ ತಿರಸ್ಕರಿಸುವ ಸತ್ಯಾಗ್ರಹದಲ್ಲಿ ಎಲ್ಲ ವಿಚಾರವಂತರು, ಪ್ರಗತಿಪರರು, ರೈತರು, ವಿದ್ಯಾರ್ಥಿಗಳು, ಸಂಘ ಸಂಸ್ಥೆಯವರು ಭಾಗವಹಿಸಿ, ಕುಲಾಂತರಿ ಆಹಾರ ತಿರಸ್ಕರಿಸಬೇಕು. ಆ ಮೂಲಕ ಸುಸ್ಥಿರ, ಸಮರ್ಥನೀಯವಾದ ಹಾಗೂ ಹವಾಮಾನ ವೈಪರೀತ್ಯಗಳಿಗೆ ಹೊಂದಿಕೊಳ್ಳುವ ಗುಣವುಳ್ಳ ಸಹಜ ಬೇಸಾಯ, ಸಾವಯವ ಕೃಷಿ ಪದ್ದತಿಗಳ ಮೂಲಕ ನಮ್ಮ ಭವಿಷ್ಯದ ಮರು ಹುಟ್ಟು ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.
ತುಮಕೂರಿನ ಹೊನ್ನುಡುಕೆ ಹ್ಯಾಂಡ್ ಪೊಸ್ಟ್ ಬಳಿ ಇರುವ ಗಾಂಧಿ ಸಹಜ ಬೇಸಾಯ ಆಶ್ರಮ ದೊಡ್ಡಹೊಸೂರು ಗ್ರಾಮದಲ್ಲಿ ವಿಚಾರ ಸಂಕಿರಣ ಸೆಪ್ಟೆಂಬರ್ 29ರಿಂದ ಆಕ್ಟೊಬರ್ 2ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ. ಈ ವಿಚಾರ ಸಂಕಿರಣದಲ್ಲಿ ಮಾನವನ ಆರೋಗ್ಯ ಮತ್ತು ಪರಿಸರದ ಮೇಲೆ ಜಿಎಮ್ ಆಹಾರಗಳ ಪ್ರತಿಕೂಲ ಪರಿಣಾಮಗಳ ಕುರಿತು ಮತ್ತು ಪಂಚಾಯಿತಿ ಮಟ್ಟದಲ್ಲಿ ನೈಸರ್ಗಿಕ ಕೃಷಿಯನ್ನು ಮುಂದುವರೆಸುವ ಕಾರ್ಯತಂತ್ರಗಳ ಕುರಿತು ಗೋಷ್ಠಿಗಳು ನಡೆಯಲಿದ್ದು, ರಾಜ್ಯಾದ್ಯಂತ ಕುಲಾಂತರಿ ತಳಿ ವಿರೋಧಿಸಲು ಪ್ರಗತಿಪರರು ಸುಸ್ಥಿರ ಕೃಷಿ ಬಯಸುವವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಯಾದಗಿರಿ | ವಸತಿ ನಿಲಯದ ಮೇಲ್ವಿಚಾರಕನನ್ನು ಅಮಾನತುಗೊಳಿಸಲು ಆಗ್ರಹಿಸಿ ಪ್ರತಿಭಟನೆ
ಮದ್ದೂರು ತಾಲೂಕಿನಿಂದಲೂ ಸೆಪ್ಟಂಬರ್ 29ರಂದು ಭಾನುವಾರ ಬಯಲುಸೀಮೆ ಬೆಳೆಗಾರರ ಸಂಘದ ನೇತೃತ್ವದಲ್ಲಿ ದೊಡ್ಡ ಹೊಸೂರು ಸತ್ಯಾಗ್ರಹದಲ್ಲಿ ಭಾಗವಹಿಸುತ್ತಿದ್ದೇವೆ ಎಂದಿರುವ ಎನ್ ಪಿ ಶಂಕರಯ್ಯ, ಮಂಡ್ಯ ಜಿಲ್ಲೆಯಾದ್ಯಂತ ರೈತರು, ಪ್ರಗತಿಪರರು ಭಾಗವಹಿಸಲು ಮನವಿ ಮಾಡಿದ್ದಾರೆ.
