ಮದ್ದೂರು | ಬದಲಾಗದ ಪೌರಕಾರ್ಮಿಕರ ಬದುಕು; ನಗರಕೆರೆ ಗ್ರಾ.ಪಂ ಜನಪ್ರತಿನಿಧಿ, ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ

Date:

Advertisements

ಸಮಾಜದಲ್ಲಿ ಪೌರಕಾರ್ಮಿಕರೂ ಕೂಡ ಎಲ್ಲರಂತೆಯೇ ಮನುಷ್ಯರು. ಅವರನ್ನೂ ಕೂಡಾ ಎಲ್ಲರಂತೆ ಸಮಾನವಾಗಿ ಕಾಣಬೇಕು ಎಂದು ಸಂವಿಧಾನ ಹೇಳುತ್ತದೆ. ಆದರೆ ಪ್ರಸ್ತುತ ಸಮಾಜದಲ್ಲಿ ಪೌರಕಾರ್ಮಿಕರನ್ನು ಹೀನಾಯವಾಗಿ ಬಳಸಿಕೊಳ್ಳುವ ಪರಿಪಾಠ ಹಿಂದೆ ಹೇಗಿತ್ತೋ ಈಗಲೂ ಹಾಗೇ ಮುಂದುವರಿಯುತ್ತಿರುವುದು ನಾಚಿಕೇಗೇಡಿನ ಸಂಗತಿ.

ಗ್ರಾಮ ಪಂಚಾಯಿತಿಯಿಂದ ಮಹಾನಗರ ಪಾಲಿಕೆವರೆಗಿನ ಎಲ್ಲ ಅಧಿಕಾರಿಗಳೂ ಕೂಡಾ ಪೌರಕಾರ್ಮಿಕರನ್ನು ಜೀತದಾಳುಗಳಂತೆ ಅಮಾನವೀಯವಾಗಿ ನಡೆಸಿಕೊಳ್ಳುತ್ತಲೇ ಇರುವುದು ಅವರ ದುಷ್ಟತನಕ್ಕೆ ಸಾಕ್ಷಿಯಾಗಿದೆ.

ಮದ್ದೂರು ತಾಲೂಕಿನ ನಗರಕೆರೆ ಗ್ರಾಮದಲ್ಲಿ ಇಂದು ಬೆಳಿಗ್ಗೆ ಮಂಗಳವಾರ ಪೌರಕಾರ್ಮಿಕರಿಗೆ ಗಂಬೂಟ್, ಗ್ಲೌಸ್ ನೀಡದೆ ಬರಿಗಾಲಿನಲ್ಲಿ ಚರಂಡಿ ಸ್ವಚ್ಛ ಮಾಡಿಸಿದ ಅಮಾನವೀಯ ಘಟನೆ ನಡೆದಿದೆ. ಮದ್ದೂರು ತಾಲೂಕಿನ ನಗರಕೆರೆ ಗ್ರಾಮದಲ್ಲಿ ಓರ್ವ ಪಂಚಾಯಿತಿ ಸದಸ್ಯನೇ ಮುಂದೆ ನಿಂತು ಪೌರಕಾರ್ಮಿಕರನ್ನು ಬರಿಗಾಲಿನಲ್ಲಿ ಚರಂಡಿಗೆ ಇಳಿಸಿ ಸ್ವಚ್ಛತೆ ಮಾಡಿಸುತ್ತಿದ್ದ ಸಂಗತಿ ಕಂಡುಬಂದಿದೆ.

Advertisements

ಪೌರಕಾರ್ಮಿಕರಿರುವುದೇ ಇಂತಹ ಕೆಲಸಗಳನ್ನು ಮಾಡಲು ಎಂದು ಭಾವಿಸಿದ್ದ ಈ ಸದಸ್ಯ ಹಿಂದೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೂಡಾ ಆಗಿದ್ದು, ಪೌರಕಾರ್ಮಿಕರನ್ನು ಮನುಷ್ಯರೆಂದು ಕಾಣದ ಈತ ಸದಸ್ಯನಾಗಲೂ ನಾಲಾಯಕ್ ಎಂದೇ ಹೇಳಬೇಕಾಗುತ್ತದೆ. ಪೌರಕಾರ್ಮಿಕರಿಲ್ಲದ ಸಮಾಜವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಒಂದೆರಡು ದಿನ ಬೀದಿ ಕೆಲಸ ಮಾಡದಿದ್ದರೂ ಗ್ರಾಮಗಳು ಗಬ್ಬೆದ್ದು ನಾರುತ್ತವೆ. ಅಂಥವರನ್ನು ಮನುಷ್ಯರಂತೆ ಪರಿಗಣಿಸಿ ಗೌರವದಿಂದ ಕಾಣಬೇಕಾದ ಜನಪ್ರತಿನಿಧಿಗಳೇ ಇಂದು ಅವರನ್ನು ತುಚ್ಚವಾಗಿ ಕಾಣುತ್ತಿರುವುದಕ್ಕೆ ನಗರಕೆರೆ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ಈ ಅಮಾನವೀಯ ಘಟನೆಯೇ ಸಾಕ್ಷಿ.

ಈ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಪೌರಕಾರ್ಮಿಕರ ಇಂತಹ ಅಮಾನವೀಯ ದುಃಸ್ಥಿತಿಗೆ ದೂಡಿದ ಪಂಚಾಯಿತಿ ಸದಸ್ಯ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಪೌರಕಾರ್ಮಿಕರಿಗೆ ಕೆಲಸದ ಸಮಯದಲ್ಲಿ ಗಂಬೂಟ್, ಗ್ಲೌಸ್ ಸೇರಿದಂತೆ ಇನ್ನಿತರ ಅಗತ್ಯ ಪರಿಕರಗಳನ್ನು ನೀಡಬೇಕು. ಚರಂಡಿಗೆ ಇಳಿಸದೆ ಕೆಲಸ ಮಾಡಿಸಬೇಕು. ಆ ಮೂಲಕ ಪೌರಕಾರ್ಮಿಕರನ್ನು ಗೌರವದಿಂದ ನಡೆಸಿಕೊಳ್ಳಬೇಕಿದೆ.

ಇಂದು ನಗರಕೆರೆ ಪಂಚಾಯಿತಿಯಲ್ಲಿ ನಡೆದಂತಹ ಅಮಾನವೀಯ ಘಟನೆ ಇನ್ನೂ ಹಲವು ಪಂಚಾಯಿತಿಗಳಲ್ಲಿ ಪ್ರತಿದಿನ ನಡೆಯುತ್ತಿರುತ್ತದೆ. ಅಲ್ಲೂ ಕೂಡ ಪೌರಕಾರ್ಮಿಕರಿಗೆ ಗಂಬೂಟ್, ಗ್ಲೌಸ್ ಇನ್ನಿತರ ಪರಿಕರಗಳನ್ನು ನೀಡದೆ ಕೆಲಸ ಮಾಡಿಸುತ್ತಿರುತ್ತಾರೆ. ಚರಂಡಿಯಲ್ಲಿ ಮೊಳೆ, ಗಾಜು, ಕಲ್ಲಿನ ಚೂರು ಸೇರಿದಂತೆ ಹಲವಾರು ಅಪಾಯಕಾರಿ ವಸ್ತುಗಳು ಇರುತ್ತವೆ. ಪೌರಕಾರ್ಮಿಕರು ಬರಿಗಾಲಲ್ಲಿ ಚರಂಡಿಗೆ ಇಳಿದರೆ ಅಪಾಯಕಾರಿ ವಸ್ತುಗಳು ಕಾಲಿಗೆ ಚುಚ್ಚಿ ಗಾಯಗಳಾಗುತ್ತವೆ. ಆ ಗಾಯಗಳು ಮಾಯದೆ ಗ್ಯಾಂಗ್ರೀನ್ ಆಗಿ, ಕೊನೆಗೆ ಕಾಲು ಕತ್ತರಿಸಿಕೊಂಡು ಉಸಿರು ಚೆಲ್ಲಿದ ಹಲವು ಪೌರಕಾರ್ಮಿಕರನ್ನು ನೋಡಿದ್ದೇವೆ. ಚರಂಡಿ, ಮ್ಯಾನ್ ಹೋಲ್‌ಗಳಲ್ಲಿರುವ ಅಪಾಯಕಾರಿ ಕ್ರಿಮಿಗಳು ಪೌರಕಾರ್ಮಿಕರ ದೇಹ ಹೊಕ್ಕು ನಾನಾ ರೋಗಗಳಿಂದ ಬಳಲುತ್ತಿರುವ ಉದಾಹರಣೆಗಳು ಸಾಕಷ್ಟಿವೆ.

ಈ ಸುದ್ದಿ ಓದಿದ್ದೀರಾ? ಮೈಸೂರು | ಬಿಸಿಲಿನ ತಾಪಕ್ಕೆ ಬರಿದಾದ ಕೆರೆಕಟ್ಟೆ; ನಾಗರಹೊಳೆಯಲ್ಲಿ ಪ್ರಾಣಿಗಳ ದಾಹ ಇಂಗಿಸಲು ಟ್ಯಾಂಕರ್ ಮೂಲಕ ನೀರು

ಪೌರಕಾರ್ಮಿಕರನ್ನು ಇನ್ನಾದರೂ ಗೌರವದಿಂದ ಕಾಣುವಂತಹ ಸಮಸಮಾಜ ನಿರ್ಮಾಣವಾಗಬೇಕಾಗಿದೆ. ಈ ಕೂಡಲೇ ನಗರಕೆರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಗಂಬೂಟ್, ಗ್ಲೌಸ್, ಸಮವಸ್ತ್ರ, ಉಪಹಾರದ ವ್ಯವಸ್ಥೆ ಮಾಡಿ ಅವರನ್ನು ಮನುಷ್ಯರಂತೆ ಕಾಣುವುದು ನಾಗರಿಕ ಸಮಾಜದ ಕರ್ತವ್ಯ. ಪೌರಕಾರ್ಮಿಕರಿಗೆ ಗಂಬೂಟ್ ಹಾಗೂ ಗ್ಲೌಸ್ ನೀಡದೇ ಅಮಾನವೀಯವಾಗಿ ನಡೆಸಿಕೊಂಡಿರುವ ನಗರಕೆರೆ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಸದಸ್ಯರ ವಿರುದ್ಧ ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಅವರು ಕ್ರಮ ಜರುಗಿಸಬೇಕೆಂದು ಜಾಗೃತ ಕರ್ನಾಟಕದ ನಗರಕೆರೆ ಜಗದೀಶ್ ಒತ್ತಾಯಿಸಿದ್ದಾರೆ.

Untitled 24
ನಗರಕೆರೆ ಜಗದೀಶ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ಯಾದಗಿರಿ | ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಹಾಯ ಧನ ನೀಡುವಂತೆ ಒತ್ತಾಯ

ಕಾರ್ಮಿಕರ ಮಕ್ಕಳಿಗೆ ಸಹಾಯ ಧನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಕಲ್ಯಾಣ...

ರಾಯಚೂರು | ಸಾಗುವಳಿ ರೈತರಿಗೆ ಭೂಮಿಯನ್ನು ಮಂಜೂರು ಮಾಡಬೇಕು : ಮಾರೆಪ್ಪ ಹರವಿ

ಸಾಗುವಳಿ ಮಾಡುತ್ತಿರುವ ರೈತರಿಗೆ ಭೂ ಮಂಜೂರಾತಿ ನೀಡಬೇಕೆಂದು ಭೂಮಿ ಮತ್ತು ವಸತಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

Download Eedina App Android / iOS

X