ಚಿಕ್ಕದಾಳವಟ್ಟ ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಅವಿರತ ಟ್ರಸ್ಟ್ ಸಂಸ್ಥೆಯಿಂದ ನೋಟ್ ಬುಕ್ ವಿತರಣೆ ಮತ್ತು ಇನ್ಸ್‌ಪೈರ್ ಇಂಡಿಯಾ ಸಂಸ್ಥೆಯಿಂದ ಕ್ರೀಡಾ ಸಮಾಗ್ರಿಗಳ ವಿತರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಿಕ್ಷಣ ಸಂಯೋಜಕರಾದ ಹೇಮಲತಾ ಎಲ್ಲಿಂದಲೋ ಬಂದು ನಮ್ಮ ಸರ್ಕಾರಿ ಶಾಲೆಗಳನ್ನು ಬೆಂಬಲಿಸಿ ಬದಲಾವಣೆ ತರಲು ಸಾಕಷ್ಟು ಜನ ಪ್ರಯತ್ನಿಸುತ್ತಿದ್ದಾರೆ. ಬರಿ ನೀವು ಕಲಿಯುವುದು ಅಷ್ಟೇ ಅಲ್ಲ ನಿಮ್ಮಅಕ್ಕಪಕ್ಕ ಇರುವವರಿಗೂ ಅದನ್ನು ಕಲಿಸುವ ರೀತಿ ಜ್ಞಾನವನ್ನು ಹಂಚಿಕೊಂಡು ಬಾಳುವ ಹಾಗೆ ನೀವು ತಯಾರಗಬೇಕು ಎಂದರು
ಅವರೆಲ್ಲರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕೆಂದರೆ ಎಲ್ಲರೂ ಉತ್ತಮ ರೀತಿಯಲ್ಲಿ ಓದಿ ಮುಂದೆ ಬಂದಾಗ ಮಾತ್ರ ಸಾಧ್ಯ ಆಗುತ್ತದೆ. ದಯವಿಟ್ಟು ಎಲ್ಲಾ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ ಎಂದು ಹೇಳಿದರು
ಇನ್ಸ್‌ಫೈರ್ ಇಂಡಿಯಾ ಸಂಸ್ಥೆಯ ಮಂಜುನಾಥ್ ಅವರು ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಓದಿದವರು ಉನ್ನತ ಹುದ್ದೆಗಳಲ್ಲಿ ಇದ್ದಾರೆ. ಉತ್ತಮ ರೀತಿಯಲ್ಲಿ ಓದಿ ನೀವು ಉನ್ನತ ಸ್ಥಾನಗಳಿಗೆ ಹೋಗಿ ನಾಲ್ಕು ಜನಕ್ಕೆ ಸಹಾಯ ಮಾಡಬೇಕು ಇದರಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ನೀವು ನಿಮ್ಮ ಭವಿಷ್ಯದಲ್ಲಿ ಏನೇ ಪಡೆಯಬೇಕಾದರೂ ಶಿಕ್ಷಣವೇ ಅತಿಮುಖ್ಯ ಎಂದು ಹೇಳಿದರು. ಲೋಕಚರಿತ ರಂಗಕೇಂದ್ರ ಟ್ರಸ್ಟ್ (ರಿ) ಅನಿಲ್ ಕುಮಾರ್ ಚಿಕ್ಕದಾಳವಟ್ಟ, ಮುಖ್ಯೋಪಾದ್ಯಯರಾದ ಪ್ರಸಾದ್ ,ಶಿಕ್ಷಕರಾದ ಬಷೀರ್, ಡಿಎನ್ ನರಸಿಂಹಮೂರ್ತಿ ,ಮಂಜುಳ , ಶಿವಕುಮಾರ್ ದೊಡ್ಡದಾಳವಟ್ಟ ಅಡುಗೆ ಸಿಬ್ಬಂದಿ ಉಪಸ್ಥಿತರಿದ್ದರು