ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿದ್ದು ಈ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೆ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ಬಟ್ಟಗೆರೆ ಗ್ರಾಮಸ್ಥರು ಕೊಂಡವಾಡಿ ಗ್ರಾಪಂಗೆ ಬೀಗ ಹಾಕಿ ಪ್ರತಿಭಟಿಸಿದರು.
ಮಧುಗಿರಿ ತಾಲೂಕಿನ ಕೊರಟಗೆರೆ ವಿಧಾನಸಭಾ ಕ್ಷೇತ್ರ ಮೀಸಲು ಕ್ಷೇತ್ರದ ಪುರವರ ಹೋಬಳಿಯ ಕೊಂಡವಾಡಿ ಗ್ರಾಪಂ ಮುಂಭಾಗದಲ್ಲಿ ಬಟ್ಟೆಗೆರೆ ಗ್ರಾಮಸ್ಥರು ಗ್ರಾಪಂಗೆ ಬೀಗ ಹಾಕಿ ಧರಣಿ ನಡೆಸಿದರು.
ಗ್ರಾಮದಲ್ಲಿ ಸೂಕ್ತ ಚರಂಡಿ, ರಸ್ತೆ ಹಾಗೂ ವಿದ್ಯುತ್ ಸಂಪರ್ಕವಿಲ್ಲದೆ ಭಟ್ಟಗೆರೆ ಗ್ರಾಮಸ್ಥರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸುಮಾರು ಬಾರಿ ಅರ್ಜಿ ನೀಡಿದರು ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ನರೇಗಾ ಯೋಜನೆ, 15 ನೇ ಹಣಕಾಸು, ಸ್ಥಳೀಯ ಹುಟ್ಟುವಳಿ ಆದಾಯವಿದ್ದರೂ ಅನುದಾನದ ಕೊರತೆಯ ನೆಪ್ಪವೊಡ್ಡುತಿದ್ದು ಗೃಹ ಸಚಿವರ ಕ್ಷೇತ್ರದಲ್ಲಿ ದಲಿತರಿಗೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಇಲ್ಲಿನ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಕೆರಳಿದ ಗ್ರಾಮಸ್ಥರು ಗ್ರಾಪಂ ಆವರಣದಲ್ಲಿ ಬಿತ್ತಿ ಪತ್ರಗಳನ್ನು ಹಿಡಿದು ಪಿಡಿಒ, ಜನ ಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಗೃಹ ಸಚಿವರು ಪ್ರತಿನಿಧಿಸುವ ಮೀಸಲು ಕ್ಷೇತ್ರದಲ್ಲೇ ದಲಿತರ ಕೇರಿಗಳಲ್ಲಿ ಮೂಲಭೂತ ಸಮಸ್ಯೆಗಳು ಮರೀಚಿಕೆಯಾಗಿದ್ದು ಯಾರೊಬ್ಬ ಅಧಿಕಾರಿಯು ಈ ಬಗ್ಗೆ ಗಮನಹರಿಸುತ್ತಿಲ್ಲ. ಒಂದು ವಾರದೊಳಗೆ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಗ್ರಾಪಂ ಮುಂಭಾಗ ಅಹೋರಾತ್ರಿ ಧರಣಿ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಧರಣಿ ಕೈಬಿಡುವಂತೆ ಮನವೋಲಿಸಿದರು.
ಇದೇ ಸಂದರ್ಭದಲ್ಲಿ ಗ್ರಾಪಂ ಸದಸ್ಯ ವಿನಯ್ ಕುಮಾರ್, ರಾಮ ಹನುಮಯ್ಯ. ಶಿವಕುಮಾರ್, ಕೃಷ್ಣ, ಆನಂದ, ಪ್ರಸನ್ನ, ಲೋಕೇಶ್, ರಾಮಕೃಷ್ಣಪ್ಪ, ಪ್ರೇಮ, ಶಿವಣ್ಣ., ಹನುಮಂತರಾಜು, ಅನಿಲ್, ಲಕ್ಷ್ಮಿದೇವಮ್ಮ, ರಂಗಮ್ಮ, ರತ್ನಮ್ಮ, ಶಿರಿಷ ಅನ್ನಪೂರ್ಣ ಪಾರ್ವತಮ್ಮ, ಗಂಗಾದೇವಿ, ಸಾಕಮ್ಮ, ನರಸಮ್ಮ, ಶೋಭರಾಣಿ, ಸಾವಿತ್ರಮ್ಮ, ಕರಿಯಮ್ಮ, ರಾಧಮ್ಮ ಹಾಜರಿದ್ದರು.
